»   » 22 ವರ್ಷದ ದಾಂಪತ್ಯ ಅಂತ್ಯಗೊಳಿಸಿದ ಗಾಯಕ ಹಿಮೇಶ್ ರೇಶ್ಮಿಯಾ

22 ವರ್ಷದ ದಾಂಪತ್ಯ ಅಂತ್ಯಗೊಳಿಸಿದ ಗಾಯಕ ಹಿಮೇಶ್ ರೇಶ್ಮಿಯಾ

Posted By:
Subscribe to Filmibeat Kannada

ಬಾಲಿವುಡ್ ಗಾಯಕ, ಸಂಗೀತ ಸಂಯೋಜಕ ಹಿಮೇಶ್ ರೇಶ್ಮಿಯಾ ಮತ್ತು ಪತ್ನಿ ಕೋಮಲ್ ಅವರ 22 ವರ್ಷದ ಸುದೀರ್ಘ ದಾಂಪತ್ಯ ಅಂತ್ಯವಾಗಿದೆ. ಪರಸ್ಪರ ಒಪ್ಪಿಗೆ ಮೆರೆಗೆ ದಂಪತಿಗಳು ವಿಚ್ಛೇದನಕ್ಕೆ ಅರ್ಜಿ ಸಿಲ್ಲಿಸಿದ್ದರು. ಇಬ್ಬರ ಅರ್ಜಿಯನ್ನ ಪರಿಗಣಿಸಿದ ಮುಂಬೈ ಹೈ ಕೋರ್ಟ್ ವಿಚ್ಛೇದನ ನೀಡಿದೆ.

ಪರಸ್ಪರ ಒಪ್ಪಿಗೆ ಮೇರೆಗೆ ನಾವಿಬ್ಬರೂ ಡೈವೋರ್ಸ್ ಪಡೆಯುತ್ತಿದ್ದೇವೆ, ಈ ನಿರ್ಧಾರಕ್ಕೆ ಕುಟುಂಬದವರ ಒಪ್ಪಿಗೆಯೂ ಇದೆ. ನಮ್ಮಿಬ್ಬರ ಮಧ್ಯೆ ಹೊಂದಾಣಿಕೆಯಿಲ್ಲ, ಹಾಗಾಗಿ ವಿಚ್ಛೇದನ ಪಡೆದಿದ್ದೇವೆ, ತಾವಿಬ್ಬರೂ ಪರಸ್ಪರ ಈಗಲೂ ಗೌರವಿಸುತ್ತೇವೆ ಅಂತ ದಂಪತಿಗಳು ಹೇಳಿಕೊಂಡಿದ್ದಾರೆ.

Himesh Reshammiya and Wife Komal Divorced

ಹಿಮೇಶ್ ಹಾಗೂ ಕೋಮಲ್ ದಂಪತಿಗೆ ಒಬ್ಬ ಮಗನಿದ್ದು, ವಿಚ್ಛೇದನದ ನಂತರವೂ ಕೋಮಲ್, ಹಿಮೇಶ್ ನಿವಾಸವಿರುವ ಕಟ್ಟಡದಲ್ಲೇ ವಾಸ್ತವ್ಯ ಹೂಡಲಿದ್ದಾರೆ ಎನ್ನಲಾಗ್ತಿದೆ.

English summary
The Bombay High Court Granted Divorce to Popular Music Director and Singer Himesh Reshammiya and Wife Komal on June 06.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada