For Quick Alerts
  ALLOW NOTIFICATIONS  
  For Daily Alerts

  ಕತ್ರಿನಾ ಜೊತೆ ಲಿಪ್ ಲಾಕ್ ಗೆ ಒಲ್ಲೆ ಎಂದ ರಣಬೀರ್ ಕಪೂರ್

  By ಸೋನು ಗೌಡ
  |

  ಬಾಲಿವುಡ್ ನ ಜೋಡಿ ಹಕ್ಕಿಗಳಾದ ಕತ್ರಿನಾ ಕೈಫ್ ಮತ್ತು ರಣಬೀರ್ ಕಪೂರ್ ಅವರು ಬ್ರೇಕ್ ಅಪ್ ಮಾಡಿಕೊಂಡಿರುವ ವಿಚಾರ ಇಡೀ ಬಿಟೌನ್ ಗೆ ಗೊತ್ತು. ಸದ್ಯಕ್ಕೆ ಈ ವಿಚಾರವನ್ನು ಎಲ್ಲರೂ ಮರೆತು ಕೂಡ ಆಗಿದೆ.

  ಆದರೆ ಕತ್ರಿನಾ ಕೈಫ್ ಮತ್ತು ರಣಬೀರ್ ಕಪೂರ್ ನಡುವಿನ ಮೈಮನಸ್ಸು ಮತ್ತು ಒಳ ಜಗಳ ಇನ್ನು ಮುಗಿದಿಲ್ಲ. ಅದು ಅವರ ಮುಂದಿನ ಚಿತ್ರವಾದ 'ಜಗ್ಗ ಜಸೂಸ್' ಸೆಟ್ ನಲ್ಲೂ ಮುಂದುವರಿದಿದೆ. ಹೌದು ಸಿನಿಮಾ ಸೆಟ್ ನಲ್ಲಿ ಇದೀಗ ಒಂದು ಹೊಸ ಡ್ರಾಮಾ ಶುರುವಾಗಿದೆ.[ಕೆಟ್ಟ ಮೇಲೆ ಬುದ್ದಿ ಬಂತು ನೋಡಿ ನಮ್ಮ ಕತ್ರಿನಾಗೆ]

  ನಿರ್ದೇಶಕ ಅನುರಾಗ್ ಬಸು ನಿರ್ದೇಶನ ಮಾಡುತ್ತಿರುವ ರೋಮ್ಯಾಂಟಿಕ್ ಚಿತ್ರ 'ಜಗ್ಗ ಜಸೂಸ್' ನಲ್ಲಿ ಲಿಪ್ ಲಾಕ್ ಮಾಡುವ ಕೆಲವು ದೃಶ್ಯಗಳಿದ್ದು, ಅದನ್ನು ಕತ್ರಿನಾ ಕೈಫ್ ಜೊತೆ ಮಾಡಲಾರೆ ಎಂದು ರಣಬೀರ್ ಕಪೂರ್ ಪಟ್ಟು ಹಿಡಿದಿದ್ದಾರೆ.

  ಇದರಿಂದ ಕನ್ ಫ್ಯೂಶನ್ ಆಗಿರುವ ನಿರ್ದೇಶಕ ಅನುರಾಗ್ ಬಸು ಅವರು ಸ್ಕ್ರಿಪ್ಟ್ ನಿಂದಲೇ ಲಿಪ್ ಲಾಕ್ ಕಾನ್ಸೆಪ್ಟ್ ಅನ್ನು ಕಿತ್ತು ಹಾಕಿದ್ದಾರೆ. ಒಟ್ನಲ್ಲಿ ಇವರಿಬ್ಬರ ಜಗಳದಿಂದ 'ಜಗ್ಗ ಜಸೂಸ್' ಚಿತ್ರಕ್ಕೆ ತುಂಬಾ ತೊಂದರೆಯಾಗುತ್ತಿರುವುದರಿಂದ ನಿರ್ದೇಶಕರಿಗೆ ಉಸಿರುಗಟ್ಟಿದ ಅನುಭವ ಆಗುತ್ತಿದೆಯಂತೆ.['ದಿ ಕಪೂರ್ಸ್' ಖಾನ್ದಾನ್ ನಿಂದ ಕತ್ರೀನಾ ಕಿಕ್ ಔಟ್.!]

  ಇನ್ನು ಇದು ಮಾತ್ರವಲ್ಲದೇ, ಇತ್ತೀಚೆಗೆ ರಣಬೀರ್ ಕಪೂರ್ ಅವರು ಕತ್ರಿನಾ ಕೈಫ್ ಅವರ ಜೊತೆ ಪ್ರಯಾಣ ಮಾಡುವುದಕ್ಕೂ ಹಿಂದೆ-ಮುಂದೆ ನೋಡುತ್ತಿದ್ದಾರೆ. ಚಿತ್ರದ ಕೊನೆಯ ಭಾಗದ ಶೂಟಿಂಗ್ ಗಾಗಿ ರಣಬೀರ್ ಮತ್ತು ಕತ್ರಿನಾ ಅವರು ಮೊರಾಕ್ಕೋಗೆ ಹಾರಲಿದ್ದು, ಇವರಿಬ್ಬರು ಬೇರೆ ಬೇರೆಯಾಗಿ ಪ್ರಯಾಣ ಬೆಳೆಸಿದ್ದಾರೆ.[ರಣಬೀರ್ ಮೇಲೆ ಸೇಡಿನ ಜ್ವಾಲೆ, ಸಲ್ಲು ಜೊತೆ ಸೇರಿಕೊಂಡ ಕ್ಯಾಟ್]

  ನಿರ್ಮಾಪಕರಲ್ಲಿ ಮುಂಚಿತವಾಗಿ ತಿಳಿಸಿರುವ ರಣಬೀರ್ ಕಪೂರ್ ಅವರು ಕತ್ರಿನಾ ಜೊತೆ ಒಂದೇ ಫ್ಲೈಟ್ ನಲ್ಲಿ ನಾನು ಪ್ರಯಾಣ ಬೆಳೆಸುವುದಿಲ್ಲ ಎಂದು ಹೇಳಿ ಒಂದು ದಿನ ಮುಂಚಿತವಾಗಿ ಪ್ರಯಾಣ ಬೆಳೆಸಿದ್ದಾರೆ.

  ಒಟ್ನಲ್ಲಿ ಇವರಿಬ್ಬರ ಜಗಳದಿಂದ ಚಿತ್ರದ ಶೂಟಿಂಗ್ ಗೆ ತುಂಬಾನೇ ತೊಂದರೆಯಾಗುತ್ತಿದ್ದು, ನಿರ್ದೇಶಕರು ಸ್ಕ್ರಿಪ್ಟ್ ನಲ್ಲಿ ಕೂಡ ಹಲವಾರು ಬದಲಾವಣೆ ಮಾಡಿದ್ದಾರಂತೆ. ಇನ್ನೇನು ಸಿನಿಮಾ ಕೊನೆಯ ಹಂತದಲ್ಲಿದ್ದು, ಸಿನಿಮಾ ಕಂಪ್ಲೀಟ್ ಆದ ನಂತರ ಪ್ರೊಮೋಷನ್ ಗಾದರು ಒಟ್ಟಾಗಿ ಬರುತ್ತಾರಾ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

  English summary
  Hindi Actor Ranbir and Hindi Actress Katrina Kaif have to shoot some romantic sequences for the film 'Jagga Jasoos', in which Ranbir has to kiss Katrina and do a few intimate scenes, according to the script of the film. But the actor directly refused to kiss Katrina.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X