»   » ಶಸ್ತ್ರ ಚಿಕಿತ್ಸೆಗೆ ಒಳಪಟ್ಟ 'ಸರ್ಬ್ಜಿತ್' ನಟ ರಣದೀಪ್ ಹೂಡಾ

ಶಸ್ತ್ರ ಚಿಕಿತ್ಸೆಗೆ ಒಳಪಟ್ಟ 'ಸರ್ಬ್ಜಿತ್' ನಟ ರಣದೀಪ್ ಹೂಡಾ

Posted By:
Subscribe to Filmibeat Kannada

ಬಹುನಿರೀಕ್ಷಿತ 'ಸರ್ಬ್ಜಿತ್' ಚಿತ್ರದ ನಟ ರಣದೀಪ್ ಹೂಡಾ ಅವರು ಸಲ್ಮಾನ್ ಖಾನ್ ಅವರ 'ಸುಲ್ತಾನ್' ಚಿತ್ರದ ಶೂಟಿಂಗ್ ಸೆಟ್ ನಲ್ಲಿ ಕುಸಿದು ಬಿದ್ದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಣದೀಪ್ ಹೂಡಾ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಸದ್ಯ 'ಸುಲ್ತಾನ್' ಶೂಟಿಂಗ್ ಅರ್ಧಕ್ಕೆ ನಿಂತಿದೆ.

ನಟ ಹೂಡಾ ಅವರಿಗೆ ಅಪೆಂಡಿಕ್ಸ್ (ಕರುಳುವಾಳುರಿತ) ಆಗಿದ್ದು, ಆಗಾಗ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಆದರೆ ತಮಗಾಗುತ್ತಿದ್ದ ನೋವನ್ನು ಆಲಕ್ಷ್ಯ ಮಾಡಿ ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಇದೀಗ ನೋವು ಉಲ್ಬಣಗೊಂಡ ಕಾರಣ ಅಸ್ಪತ್ರೆಗೆ ದಾಖಲಾಗಿದ್ದಾರೆ.[ಟ್ರೈಲರ್: 'ಸರ್ಬ್ಜಿತ್'ನಲ್ಲಿ ಐಶ್ವರ್ಯ ರೈ ನಟನೆ ಭಯಂಕರ]

Hindi Actor Randeep Hooda Hospitalised

ಈ ಮೊದಲು ನಟ ಸಲ್ಮಾನ್ ಖಾನ್ ಅವರು ಹೂಡಾ ಅವರಿಗೆ ಆಸ್ಪತ್ರೆಗೆ ಭೇಟಿ ಕೊಡಲು ಸಲಹೆ ನೀಡಿದ್ದರಂತೆ ಆದರೆ ಇದನ್ನು ಅಷ್ಟಾಗಿ ಕಿವಿಗೆ ಹಾಕಿಕೊಳ್ಳದ ರಣದೀಪ್ ಹೂಡಾ ಅವರು ಚಿತ್ರದ ಕೆಲಸಗಳಲ್ಲಿ ಭಾಗಿಯಾಗಿದ್ದರು.[ಪಾತ್ರಕ್ಕಾಗಿ 18 ಕೆಜಿ ತೂಕ ಇಳಿಸಿಕೊಂಡ ನಟ ಹೂಡಾ]

ಇದೀಗ ನವದೆಹಲಿಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿರುವ ರಣದೀಪ್ ಹೂಡಾ ಅವರಿಗೆ ನಿನ್ನೆ ಸಂಜೆ (ಏಪ್ರಿಲ್ 18) ಶಸ್ತ್ರಚಿಕಿತ್ಸೆ ಮಾಡಲಾಗಿದೆ.[ಹರ್ಯಾಣದ 'ಸುಲ್ತಾನ್' ಸಲ್ಲೂಗೆ ಟ್ವಿಟ್ಟರಲ್ಲಿ 'ಅಪಮಾನ್']

'ಸುಲ್ತಾನ್' ಚಿತ್ರದಲ್ಲಿ ಹೂಡಾ ಅವರು ಸಲ್ಮಾನ್ ಖಾನ್ ಅವರು ಕೋಚ್ ಪಾತ್ರದಲ್ಲಿ ನಟಿಸಿದ್ದರಿಂದ ಸಲ್ಲುಗಿಂತ ಬಾಡಿ ಫಿಟ್ ಆಗಿ ಕಾಣಿಸಿಕೊಳ್ಳಲು ವರ್ಕೌಟ್ ಮಾಡಿದ್ದರು. ಇದರಿಂದ ಅವರ ನೋವು ಉಲ್ಬಣಗೊಂಡಿತ್ತು ಎಂದು ಹೇಳಲಾಗುತ್ತಿದೆ.

-
-
-
-
-
-
-
-
-
-
-
English summary
Hindi Actor Randeep Hooda, who is currently shooting for Salman Khan starrer 'Sultan', collapsed on the sets due to an acute case of Appendicitis. The actor, was immediately rushed to the hospital and is undergoing treatment.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada