»   » ಹೊಸತನದೊಂದಿಗೆ ತೆರೆಗೆ ಬರುತ್ತಿದೆ ಹಿಂದಿ '6-5=2'

ಹೊಸತನದೊಂದಿಗೆ ತೆರೆಗೆ ಬರುತ್ತಿದೆ ಹಿಂದಿ '6-5=2'

Posted By:
Subscribe to Filmibeat Kannada

ಒಂದು ವಿನೂತನ ಪ್ರಯೋಗ, ಕನ್ನಡದಲ್ಲಿ ಯಶಸ್ವಿ ಆಗಿ ಈಗ ಹಿಂದಿ ಭಾಷೆಯಲ್ಲಿ '6-5=2' ತೆರೆ ಕಾಣುತ್ತಿದೆ. ಇದೆ ಶುಕ್ರವಾರ (ನ.14) ಹಿಂದಿ ಭಾಷೆಯಲ್ಲಿ ರಾಷ್ಟ್ರದ್ಯಂತ ‘6-5=2' ಚಿತ್ರವು 300ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ.

ನಿರ್ಮಾಪಕರಾಗಿ ಕನ್ನಡದಲ್ಲಿ ಹಲವಾರು ಸಿನಿಮಾಗಳನ್ನು ಮಾಡಿರುವ ಮ್ಯೂಜಿಕ್ ಸಂಸ್ಥೆಯ ಮಾಲೀಕ ಭರತ್ ಜೈನ್ ಅವರು ನಿರ್ದೇಶಕರಾಗಿ ಹಿಂದಿ ಭಾಷೆಯಲ್ಲಿ ಇದು ಮೊದಲ ಪ್ರಯತ್ನ. 'ಫೌಂಡ್ ಫುಟೆಜ್' ಇಟ್ಟುಕೊಂಡು ಈ '6-5=2' ಸಿನಿಮಾವನ್ನು ಮಾರ್ಸ್ ಇಂಕ್ ತಯಾರಿಸಿರುವ ಚಿತ್ರ ಇದು. [6-5=2 ಚಿತ್ರ ವಿಮರ್ಶೆ]

2001ರಲ್ಲಿ ಐದು ಯುವಕರು ಹೊರಟ ಟ್ರೆಕ್ಕಿಂಗ್ ಅಲ್ಲಿ ಮೂವರು ಮಾತ್ರ ಬಚಾವಾಗಿದ್ದರು. ಆದರೆ 9 ದಿನಗಳ ನಂತರ ಸಿದ್ದಾರ್ಥ ಎಂಬ ಯುವಕನ ಕ್ಯಾಮರಾ ಸೆರೆ ಹಿಡಿದ ಚಿತ್ರಣ ಬೆಳಕಿಗೆ ಬಂದಿತು. ಅದನ್ನೇ ಇಟ್ಟುಕೊಂಡು ಮೊದಲು ಕನ್ನಡದಲ್ಲಿ 6-5=2 ತಯಾರು ಮಾಡಲಾಗಿತ್ತು.

ಈಗ ಹಿಂದಿ ಭಾಷೆಯಲ್ಲಿ ಅದರ ಮಟ್ಟವನ್ನು ಹೆಚ್ಚಿಸಿ ನಿರ್ದೇಶನ ಮಾಡಿದ್ದಾರೆ ಭರತ್ ಜೈನ್. ಸತ್ಯ ಹೆಗ್ಡೆ ಅವರ ಛಾಯಾಗ್ರಹಣ ಇರುವ '6-5-2' ಹಿಂದಿ ಸಿನಿಮಾದಲ್ಲಿ ಪ್ರಶಾಂತ್ ಗುಪ್ತಾ, ಅಶ್ರುತ್ ಜೈನ್, ಗೌರವ್ ಪಾಸ್ವಲ್ಲ, ಗೌರವ್ ಕೊಠಾರಿ, ದಿಶಾ ಕಪೂರ್ ಹಾಗೂ ನಿಹಾರಿಕ ರೈಜಾದಾ ಪಾತ್ರವರ್ಗದಲ್ಲಿ ಇದ್ದಾರೆ.


ಭರತ್ ಜೈನ್ ಅವರ ಝಂಕಾರ್ ಸಂಸ್ಥೆ ಹಾಗೂ ಮಾರ್ಸ್ ಇಂಕ್ ಕರ್ನಾಟಕದಲ್ಲಿ ಜನಪ್ರಿಯವಾದ ಸಂಸ್ಥೆಗಳು. ಹಲವಾರು ಸಿನಿಮಾಗಳನ್ನು ತಯಾರಿಸಿದ್ದಾರೆ. 1500 ಸಿನಿಮಾಗಳ ಧ್ವನಿ ಸುರುಳಿ ಹಕ್ಕನ್ನು ಪಡೆದಿದೆ, 30,000 ವಿವಿಧ ಪ್ರಾಕಾರದ ಧ್ವನಿ ಸುರುಳಿಗಳನ್ನು ಸಂಸ್ಥೆ ಹೊರತಂದಿದೆ. (ಫಿಲ್ಮಿಬೀಟ್ ಕನ್ನಡ)
English summary
Hindi horror movie 6-5=2 releasing on 14th November in about 300 theatres all over India. In 2010 Ramesh and his 5 friends had been to trekking. Among them 3 died and 2 disappeared. 9 days later Ramesh's camera was found.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada