For Quick Alerts
  ALLOW NOTIFICATIONS  
  For Daily Alerts

  ತಮಿಳು ಸಾಂಗ್‌ ಹಾಡಿ ಹಿಂದಿ ಪ್ರಿಯರ ಆಕ್ರೋಶಕ್ಕೆ ಗುರಿಯಾದ ಎ.ಆರ್.ರೆಹಮಾನ್

  By Suneel
  |

  'ಮೊಜಾರ್ಟ್ ಆಫ್ ಮದ್ರಾಸ್' ಎಂದು ಕರೆಯಲ್ಪಡುವ ಎ.ಆರ್.ರೆಹಮಾನ್ ಅವರ ಗಾಯನಕ್ಕೆ ಮನಸೋಲದವರಿಲ್ಲ. ಈ ಮ್ಯೂಸಿಕ್ ಮಾಂತ್ರಿಕನಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿಮಾನಿಗಳು ಇದ್ದಾರೆ.

  ತಮ್ಮ ಗಾಯನ ಮತ್ತು ಸಂಗೀತ ನಿರ್ದೇಶನದ ಮೂಲಕ ಜಗತ್ತಿನಾದ್ಯಂತ ಪ್ರಸಿದ್ಧರಾಗಿರುವ ಎ.ಆರ್.ರೆಹಮಾನ್ ಬಗೆಗಿನ ಲೇಟೆಸ್ಟ್ ಸುದ್ದಿ ಏನಂದ್ರೆ, ಇತ್ತೀಚೆಗೆ ಅವರು ಖಾಸಗಿ ಕಾರ್ಯಕ್ರಮವೊಂದರಲ್ಲಿ ಹೆಚ್ಚು ತಮಿಳು ಸಾಂಗ್ ಗಳನ್ನೇ ಹಾಡಿ ಹಿಂದಿ ಪ್ರಿಯರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಅಲ್ಲದೇ ಅವರ ಹಿಂದಿ ಹಾಡುಗಳ ಹಲವು ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಅವರ ವಿರುದ್ಧ ಕಾಮೆಂಟ್ ಮಾಡಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

  ವಾಸ್ತವವಾಗಿ ಎ.ಆರ್.ರೆಹಮಾನ್ ರವರ ಹಿಂದಿ ಹಾಡುಗಳಿಗೆ ಹೆಚ್ಚು ಅಭಿಮಾನಿಗಳಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಅಂತಹದರಲ್ಲಿ ಹೆಚ್ಚು ತಮಿಳು ಹಾಡುಗಳನ್ನು ಹಾಡಿರುವ ಕಾರಣ ಬಾಲಿವುಡ್ ಪ್ರಿಯರು ಹೇಗೆಲ್ಲಾ ಕಾಮೆಂಟ್ ಮಾಡಿದ್ದಾರೆ ಎಂಬುದು ಈ ಕೆಳಗಿನಂತಿದೆ ನೋಡಿ..

  ಇತರೆ ಭಾಷೆಯ ಹಾಡನ್ನು ಸಹಿಸಲಾಗುವುದಿಲ್ಲ

  ಇತರೆ ಭಾಷೆಯ ಹಾಡನ್ನು ಸಹಿಸಲಾಗುವುದಿಲ್ಲ

  'ಎ.ಆರ್.ರೆಹಮಾನ್ ತಮಿಳು ಸಾಂಗ್ ಗಳನ್ನು ಹಾಡಿದರು. ಆದರೆ ಯಾವುದೇ ಹಿಂದಿ ಹಾಡುಗಳನ್ನು ಹಾಡಲಿಲ್ಲ. ಇತರೆ ಭಾಷೆಯ ಹಾಡನ್ನು ಒಂದು ಗಂಟೆಗೂ ಹೆಚ್ಚು ಕಾಲ ಹಾಡಿದರೆ ಸಹಿಸಿಕೊಳ್ಳಲು ಆಗುವುದಿಲ್ಲ' ಎಂದು ಶರವಣನ್ ಅಣ್ಣಾದುರೈ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಇತರರು ವಿರೋಧ ವ್ಯಕ್ತಪಡಿಸಿ ಟ್ವೀಟ್ ಮಾಡಿರುವುದನ್ನು ಸ್ಕ್ರೀನ್ ಶಾಟ್ ತೆಗೆದು ಶೇರ್ ಮಾಡಿದ್ದಾರೆ.

  ಅಗೌರವಕ್ಕೆ ಕಾರಣರಾಗಿದ್ದಾರೆ

  ಅಗೌರವಕ್ಕೆ ಕಾರಣರಾಗಿದ್ದಾರೆ

  'ಎಲ್‌ಎನ್‌ ಕನ್ಸರ್ಟ್ ನಲ್ಲಿ ಕೇವಲ ತಮಿಳು ಸಾಂಗ್ ಗಳನ್ನೇ ಹಾಡಿ ಜಾವೇದ್ ಅಲಿ ತರಹ ನಿಮ್ಮ ಟ್ಯಾಲೆಂಟ್ ಅನ್ನು ವೇಸ್ಟ್ ಮಾಡಿದ್ದು, ಹಲವರು ಅಗೌರವ ಸೂಚಿಸಲು ಕಾರಣರಾಗಿದ್ದೀರಿ. ನಿಮ್ಮ ಹಿಂದಿ/ಬಾಲಿವುಡ್ ಫ್ಯಾನ್ಸ್ ಗಳ ಬಗ್ಗೆ ಥಿಂಕ್ ಮಾಡಲಿಲ್ಲವೇ' ಎಂದು ಎ.ಆರ್. ರೆಹಮಾನ್ ವಿರುದ್ಧ ಕಿಡಿ ಕಾರಿದ್ದಾರೆ.

  ಅಂತರಾಷ್ಟ್ರೀಯ ಮಟ್ಟದಲ್ಲಿ ಫೇಮಸ್ ಆಗಿದ್ದು ಹಿಂದಿಯಿಂದ

  ಅಂತರಾಷ್ಟ್ರೀಯ ಮಟ್ಟದಲ್ಲಿ ಫೇಮಸ್ ಆಗಿದ್ದು ಹಿಂದಿಯಿಂದ

  'ಎ.ಆರ್.ರೆಹಮಾನ್ ನೀವು ಹಿಂದಿ ಮ್ಯೂಸಿಕ್ ಅನ್ನು ಮರೆತಿರುವ ಹಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನೀವು ಖ್ಯಾತರಾಗಲು ಹಿಂದಿ ಮ್ಯೂಸಿಕ್ ಕಾರಣ ಹೊರತು ತಮಿಳು ಅಲ್ಲ. ನಮಗೆಲ್ಲಾ ನಿರಾಸೆಯಾಗಿದೆ. ಹಿಂದಿ ಪ್ರಿಯರು ನೀವು ಹೆಚ್ಚು ತಮಿಳು ಸಾಂಗ್ ಹಾಡಿರುವುದಕ್ಕೆ ಕೇಕೆ ಹಾಕಿ ನಕ್ಕಿದ್ದಾರೆ. ಈ ಮಟ್ಟದ ನಿರಾಸೆ ಎಂದು ಆಗಿರಲಿಲ್ಲ' ಎಂದು ಬಾಲಿವುಡ್ ಪ್ರಿಯರು ಟ್ವಿಟ್ಟರ್ ನಲ್ಲಿ ಕಾಮೆಂಟ್ ಮಾಡಿದ್ದಾರೆ.

  ಅವರು ಹಾಡಿದ್ದು ಕೇವಲ 12 ತಮಿಳು ಸಾಂಗ್

  ಅವರು ಹಾಡಿದ್ದು ಕೇವಲ 12 ತಮಿಳು ಸಾಂಗ್

  ಹಿಂದಿ ಸಾಂಗ್ ಪ್ರಿಯರ ಟ್ಟಿಟ್ಟರ್ ನಲ್ಲಿನ ಕಾಮೆಂಟ್ ಗಳನ್ನು ನೋಡಿ ಅಲ್ಲಗಳೆದಿರುವ ಕೆಲವು ರೆಹಮಾನ್ ಅಭಿಮಾನಿಗಳು, 'ನೀವು ಹೇಳಿರುವುದು ತಪ್ಪು. 28 ರಲ್ಲಿ ಅವರು ಕೇವಲ 12 ತಮಿಳು ಹಾಡುಗಳನಷ್ಟೇ ಹಾಡಿದ್ದು' ಎಂದಿದ್ದಾರೆ.

  ಕೆಲವರ ಮೈಂಡ್‌ಸೆಟ್ ಎಂದಿಗೂ ಬದಲಾಗುವುದಿಲ್ಲ

  ಕೆಲವರ ಮೈಂಡ್‌ಸೆಟ್ ಎಂದಿಗೂ ಬದಲಾಗುವುದಿಲ್ಲ

  ಎ.ಆರ್.ರೆಹಮಾನ್ ಗೆ ಬೆಂಬಲ ಸೂಚಿಸಿರುವ ಹಲವರು, 'ಈ ಶೋ ಇತರ ಭಾಷೆಗಳ ಕಡೆಗಿನ ಅಸಹಿಷ್ಣುತೆಯನ್ನು ತೋರಿಸುತ್ತದೆ. ಆದರೆ ಮೊದಲಿಗೆ ಹಿಂದಿ ಭಾರತದ ಭಾಷೆಗಳಲ್ಲಿ ಅದು ಸಹ ಒಂದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಕೆಲವು ಜನರ ಮೈಂಡ್‌ಸೆಟ್ ಎಂದಿಗೂ ಬದಲಾಗುವುದಿಲ್ಲ. ಅವರು ಕಂಪೋಸ್ ಮಾಡಿರುವ ಹಾಡುಗಳನ್ನು ಹಾಡುವುದು ಒಬ್ಬ ಮ್ಯೂಸಿಕ್ ಪ್ರೇಮಿಯಾಗಿ ಅವರ ಆಯ್ಕೆಗೆ ಬಿಟ್ಟಿದ್ದೇ ಹೊರತು ಭಾಷೆಯ ವಿಷಯ ಬರುವುದಿಲ್ಲ. ಸಂಗೀತಕ್ಕೆ ಭಾಷೆಯ ಸೀಮಿತ ಇದೆಯೇ?' ಎಂದು ಹಲವರು ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

  English summary
  A R Rahman's Hindi Songs lovers have taken thier twitter account to express their displeasure due to he performs more Tamil Songs than Hindi songs in recent Private Program.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X