twitter
    For Quick Alerts
    ALLOW NOTIFICATIONS  
    For Daily Alerts

    ಯಾರದ್ದೋ ಪಾಲಾಗಬೇಕಿದ್ದ 'ಲಗಾನ್' ನಾಯಕಿ ಪಾತ್ರ ಗ್ರೇಸಿ ಸಿಂಗ್‌ಗೆ ದಕ್ಕಿದ್ದು ಹೇಗೆ?

    |

    ಒಂದು ಸಣ್ಣ ಅವಕಾಶ ಎಲ್ಲಿದ್ದವರನ್ನು ಮತ್ತೆಲ್ಲಿಗೋ ಕರೆದುಕೊಂಡು ಹೋಗಿಬಿಡುತ್ತದೆ. ನಟಿ ಗ್ರೇಸಿ ಸಿಂಗ್‌ಗೆ ಆದದ್ದು ಸಹ ಹೀಗೆಯೇ.

    ಮೊದಲ ಧಾರಾವಾಹಿಯಲ್ಲಿ ನಟಿಸುತ್ತಿದ್ದಾಗಲೇ 'ಲಗಾನ್' ಅಂಥಹಾ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಆ ಸಿನಿಮಾ ಭಾರತ ಸಿನಿಮಾವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಯಿತು. ಭಾರತ ಸಿನಿಮಾ ಇತಿಹಾಸದಲ್ಲಿ ಅಳಿಸಲಾಗದಂತೆ ಸ್ಥಾಯಿ ಆಗಿಬಿಟ್ಟಿತು.

    ಗ್ರೇಸಿ ಸಿಂಗ್ ತಮ್ಮ ಅದೃಷ್ಟವನ್ನು ತಾವೇ ನಂಬಲಾರದ ಸ್ಥಿತಿ ತಲುಪಿದ್ದರು. ಆದರೆ ಗ್ರೇಸಿ ಸಿಂಗ್‌ಗೆ ಈ ಪಾತ್ರ ಸಿಕ್ಕಿದ್ದು ಅಷ್ಟೇನು ಸುಲಭವಾಗಿ ಅಲ್ಲ. 'ಲಗಾನ್' ಸಿನಿಮಾದ ನಾಯಕಿ ಪಾತ್ರಕ್ಕೆ ಹಲವು ನಟಿಯರನ್ನು ಸಂದರ್ಶಿಸಲಾಗಿತ್ತು. ಎಲ್ಲರನ್ನೂ ಮೀರಸಿ ಗ್ರೇಸಿ ಸಿಂಗ್‌ಗೆ ಆ ಪಾತ್ರ ದೊರೆತಿತು.

    'ಧಾರಾವಾಹಿ ಮ್ಯಾನೇಜರ್ ನನ್ನನ್ನು ಕರೆದುಕೊಂಡು ಹೋಗಿದ್ದರು'

    'ಧಾರಾವಾಹಿ ಮ್ಯಾನೇಜರ್ ನನ್ನನ್ನು ಕರೆದುಕೊಂಡು ಹೋಗಿದ್ದರು'

    'ಲಗಾನ್' ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕ ಬಗ್ಗೆ ಮಾತನಾಡಿರುವ ಗ್ರೇಸಿ ಸಿಂಗ್, ''ನಾನು 'ಅಮಾನತ್' ಧಾರಾವಾಹಿಯಲ್ಲಿ ನಟಿಸುವಾಗಲೇ ಅಲ್ಲಿನ ಹಿರಿಯ ಮ್ಯಾನೇಜರ್ ಹೇಳುತ್ತಿದ್ದರು. ನೀನು ಹಿಂದಿ ಸಿನಿಮಾಗಳಲ್ಲಿ ನಟಿಸಬೇಕು ಎಂದು. 'ಲಗಾನ್' ಸಿನಿಮಾಕ್ಕೆ ಆಡಿಷನ್ ನಡೆಯುತ್ತಿದೆ ಎಂದು ಹೇಳಿ ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದು ಸಹ ಅವರೇ' ಎಂದು 2000ನೇ ಇಸವಿಯಲ್ಲಿ ನಡೆದ ಘಟನೆಗಳನ್ನು ನೆನಪು ಮಾಡಿಕೊಂಡಿದ್ದಾರೆ.

    ಎರಡು ಬಾರಿ ಆಡಿಷನ್ ನೀಡಿದ್ದೆ: ಗ್ರೇಸಿ ಸಿಂಗ್

    ಎರಡು ಬಾರಿ ಆಡಿಷನ್ ನೀಡಿದ್ದೆ: ಗ್ರೇಸಿ ಸಿಂಗ್

    ''ಲಗಾನ್' ಸಿನಿಮಾಕ್ಕಾಗಿ ನಾನು ಎರಡು ಬಾರಿ ಆಡಿಷನ್ ನೀಡಿದೆ. ಒಮ್ಮೆ ನನ್ನ ಮೆಚ್ಚಿನ ಹಾಡು ''ಹೋಂಟೊ ಪೆ ಐಸಿ ಬಾತ್‌'' ಹಾಡಿಗೆ ಡಾನ್ಸ್ ಮಾಡಲು ಹೇಳಿದ್ದರು. ನನಗೆ ಸಾಕಷ್ಟು ಸಮಯವನ್ನು ನೀಡಲಾಯಿತು. ನಂತರ ನಾನು ಆಯ್ಕೆಯಾದೆ ಆದರೆ ಮೊದಲಿಗೆ ನನಗೆ ಸಿನಿಮಾದ ಕತೆ ಗೊತ್ತಿರಲಿಲ್ಲ. ಕತೆ ಗೊತ್ತಾದ ಮೇಲೆ ಬಹಳ ಹೆದರಿಕೆ ಆಗಿತ್ತು'' ಎಂದಿದ್ದಾರೆ ಗ್ರೇಸಿ.

    ಬಹಳ ಆತಂಕಗೊಂಡಿದ್ದೆ: ಗ್ರೇಸಿ ಸಿಂಗ್

    ಬಹಳ ಆತಂಕಗೊಂಡಿದ್ದೆ: ಗ್ರೇಸಿ ಸಿಂಗ್

    ''ಮೊದಲಿಗೆ ಅಮೀರ್ ಖಾನ್‌ ಜೊತೆಗೆ ಲುಕ್ ಟೆಸ್ಟ್ ಮಾಡಲಾಯಿತು. ಆಗಂತೂ ಬಹಳ ಹೆದರಿಬಿಟ್ಟಿದ್ದೆ ಆದರೆ ಅಮೀರ್ ಖಾನ್ ಸಹಾಯ ಮಾಡಿದರು. ಶೂಟಿಂಗ್ ಸಂದರ್ಭದಲ್ಲಿಯೂ ಬಹಳ ಹೆದರಿದ್ದೆ. ಅಮೀರ್ ಪಾತ್ರದೊಳಕ್ಕೆ ಇಳಿಯುತ್ತಿದ್ದ ರೀತಿ ನೋಡಿ ಆಶ್ಚರ್ಯವಾಗುತ್ತಿತ್ತು. ಅವರ ಉತ್ಸಾಹ ನೋಡಿ ಎಲ್ಲರಿಗೂ ಉತ್ಸಾಹ ಬರುತ್ತಿತ್ತು. ನಾನು ಹೊಸಬಳಾದರೂ ಇಡೀ ಚಿತ್ರತಂಡ ನನ್ನನ್ನು ಚೆನ್ನಾಗಿ ನೋಡಿಕೊಂಡರು' ಎಂದಿದ್ದಾರೆ ಗ್ರೇಸಿ ಸಿಂಗ್.

    ಹಲವು ನಟಿಯರನ್ನು ಕೇಳಲಾಗಿತ್ತು

    ಹಲವು ನಟಿಯರನ್ನು ಕೇಳಲಾಗಿತ್ತು

    'ಲಗಾನ್‌' ಸಿನಿಮಾದ ನಾಯಕಿ ಗೌರಿ ಪಾತ್ರಕ್ಕೆ ಸೊನಾಲಿ ಬೇಂದ್ರೆ, ನಮ್ರತಾ ಶಿರೋಡ್ಕರ್, ಅಮೀಷಾ ಪಟೇಲ್, ನಂದಿತಾ ದಾಸ್ ಅವರನ್ನು ಕೇಳಲಾಗಿತ್ತು. ಕೆಲವರ ಸ್ಕ್ರೀನ್ ಟೆಸ್ಟ್ ಸಹ ಪಡೆಯಲಾಗಿತ್ತು. ಆದರೆ ಕಾರಣಾಂತರಗಿಂದ ಯಾರೂ ಸಹ ಸರಿ ಹೊಂದದ ಕಾರಣ ಕೊನೆಗೆ ಅವಕಾಶ ಗ್ರೇಸಿ ಸಿಂಗ್‌ ಪಾಲಾಯಿತು. ಅವರು ಅದ್ಭುತವಾಗಿ ನಟಿಸಿ ಆ ನಂತರವೂ ಹಲವು ವರ್ಷ ಸಿನಿಮಾ ರಂಗದಲ್ಲಿ ಉತ್ತಮ ನಟಿಯಾಗಿ ಮಿಂಚಿದರು.

    Recommended Video

    ಒಂದೇ ಮಾರ್ಗದಲ್ಲಿ ನಡೆಯಲು ಮುಂದಾದ ಜೋಡೆತ್ತು | Filmibeat Kannada
    ಕನ್ನಡದ ಸಿನಿಮಾದಲ್ಲಿಯೂ ನಟಿಸಿದ್ದಾರೆ

    ಕನ್ನಡದ ಸಿನಿಮಾದಲ್ಲಿಯೂ ನಟಿಸಿದ್ದಾರೆ

    'ಲಗಾನ್' ಸಿನಿಮಾದ ನಂತರ ತೆಲುಗಿನ 'ಸಂತೋಷಂ' ಸಿನಿಮಾದಲ್ಲಿ ನಟಿಸಿದ ಗ್ರೇಸಿ ಸಿಂಗ್ ಆ ನಂತರ 'ಮುನ್ನಾಭಾಯಿ ಎಂಬಿಬಿಎಸ್', 'ಗಂಗಾಜಲ್', 'ವಜಾಹ್' ಸಿನಿಮಾಗಳಲ್ಲಿ ನಟಿಸಿದರು. ಆದರೆ ದಿನೇ-ದಿನೇ ಅವರ ಮಾರುಕಟ್ಟೆ ಕಡಿಮೆ ಆಗುತ್ತಾ ಬಂತು. ಗ್ರೇಸಿ ಸಿಂಗ್ ಕನ್ನಡದ 'ಮೇಘವೇ-ಮೇಘವೇ' ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಈಗ ಮತ್ತೆ ಟಿವಿ ಧಾರಾವಾಹಿಗಳತ್ತ ಮುಖ ಮಾಡಿದ್ದಾರೆ.

    English summary
    How actress Gracy Singh selected as Gauri in 'Lagaan' movie opposite of Aamir Khan.
    Wednesday, June 16, 2021, 18:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X