For Quick Alerts
  ALLOW NOTIFICATIONS  
  For Daily Alerts

  ಮರಣೋತ್ತರ ಪರೀಕ್ಷಾ ಕೊಠಡಿಗೆ ರಿಯಾಗೆ ಪ್ರವೇಶ: ಅನುಮಾನ ಮೂಡಿಸಿದ ಪೊಲೀಸರ ನಡೆ

  |

  ಮರಣೋತ್ತರ ಪರೀಕ್ಷಾ ಕೊಠಡಿಗೆ, ಅಥವಾ ಮರಣೋತ್ತರ ಪರೀಕ್ಷೆ ಮಾಡಲಿರುವ ಶವ ಇರುವ ಕೊಠಡಿಗೆ ಕುಟುಂಬ ಸದಸ್ಯರಿಗೂ ಸಹ ಪ್ರವೇಶ ಇರುವುದಿಲ್ಲ. ಆದರೆ ಸುಶಾಂತ್ ಸಿಂಗ್ ಪ್ರೇಯಸಿ ರಿಯಾಗೆ ಪ್ರವೇಶ ನೀಡಲಾಗಿತ್ತು!

  ಹೌದು, ಸುಶಾಂತ್ ಸಿಂಗ್ ಸಾವನ್ನಪ್ಪಿದಾಗ ಅವರ ಕಳೆಬರ ಇರಿಸಲಾಗಿದ್ದ ಮುಂಬೈನ ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೊಠಡಿಯೊಳಕ್ಕೆ ಸುಶಾಂತ್ ಸಿಂಗ್ ಪ್ರೇಯಸಿ, ಪ್ರಸ್ತುತ ಮೊದಲ ಆರೋಪಿ ರಿಯಾ ಚಕ್ರವರ್ತಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು ಎಂಬುದು ಇದೀಗ ಬೆಳಕಿಗೆ ಬಂದಿದೆ.

  ಸುಶಾಂತ್ ಸಿಂಗ್ ಶವವನ್ನು ಮುಂಬೈನ ಕೂಪರ್ ಆಸ್ಪತ್ರೆಯಲ್ಲಿ ಇಡಲಾಗಿತ್ತು. ಅಲ್ಲಿಗೆ ರಿಯಾ ಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಅಲ್ಲಿಯೇ ಇದ್ದ ಸುಶಾಂತ್ ಸಹೋದರಿ ಇದ್ದಾಗ್ಯೂ ಪೊಲೀಸರು ರಿಯಾ ಅವರಿಗೆ ಪ್ರವೇಶಕ್ಕೆ ಅವಕಾಶ ನೀಡಿದ್ದೇಕೆ ಎಂಬ ಪ್ರಶ್ನೆ ಇದಿಗ ಎದ್ದಿದೆ.

  ಶವವಿರುವ ಕೋಣೆಗೆ ಯಾರಿಗೂ ಪ್ರವೇಶ ಇರುವುದಿಲ್ಲ

  ಶವವಿರುವ ಕೋಣೆಗೆ ಯಾರಿಗೂ ಪ್ರವೇಶ ಇರುವುದಿಲ್ಲ

  ಈ ಬಗ್ಗೆ ಮಾತನಾಡಿರುವ ಸುಶಾಂತ್ ಸಿಂಗ್ ತಂದೆ ಪರ ವಕೀಲರು, ಶವ ಇರಿಸಿರುವ ಕೋಣೆಯೊಳಕ್ಕೆ ಕುಟುಂಬ ಸದಸ್ಯರಿಗೂ ಪ್ರವೇಶ ನಿರ್ಬಂಧಿಸಲಾಗಿರುತ್ತದೆ. ಪೊಲೀಸರು ಇಲ್ಲದೆ ಯಾರನ್ನೂ ಒಳಗೆ ಬಿಡುವಂತಿಲ್ಲ ಹಾಗಿದ್ದ ಮೇಲೆ ರಿಯಾಳನ್ನು ಸುಶಾಂತ್ ಶವವಿದ್ದ ಕೊಠಡಿಗೆ ಬಿಟ್ಟಿದ್ದು ಏಕೆ? ಎಂದು ವಕೀಲರು ಪ್ರಶ್ನಿಸಿದ್ದಾರೆ.

  ಸಹೋದರಿ ಇದ್ದರೂ ರಿಯಾಳನ್ನು ಕರೆದಿದ್ದೇಕೆ: ವಕೀಲ

  ಸಹೋದರಿ ಇದ್ದರೂ ರಿಯಾಳನ್ನು ಕರೆದಿದ್ದೇಕೆ: ವಕೀಲ

  'ಒಂದೊಮ್ಮೆ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗೆಂದು ಕರೆದದ್ದೇ ಆದಲ್ಲಿ, ಸುಶಾಂತ್ ಸಿಂಗ್ ಸಹೋದರಿ ಸ್ಥಳದಲ್ಲಿ ಇದ್ದರೂ ಸಹ ರಿಯಾ ಅವರನ್ನು ಸುಶಾಂತ್ ಶವವಿದ್ದ ಕೋಣೆಯೊಳಕ್ಕೆ ಪೊಲೀಸರು ಕರೆದಿದ್ದು ಏಕೆ? ಎಂದು ವಕೀಲ ವಿಕಾಸ್ ಸಿಂಗ್ ಪ್ರಶ್ನಿಸಿದ್ದಾರೆ.

  ಮುಂಬೈ ಪೊಲೀಸರು ಹಲವು ವಿಷಯಗಳಲ್ಲಿ ಎಡವಿದ್ದಾರೆ: ವಕೀಲ

  ಮುಂಬೈ ಪೊಲೀಸರು ಹಲವು ವಿಷಯಗಳಲ್ಲಿ ಎಡವಿದ್ದಾರೆ: ವಕೀಲ

  ಮುಂಬೈ ಪೊಲೀಸರು ಹಲವು ವಿಷಯಗಳಲ್ಲಿ ಎಡವಿದ್ದಾರೆ ಅಥವಾ ಅನುಮಾನಾಸ್ಪದವಾಗಿ ನಡೆದುಕೊಂಡಿದ್ದಾರೆ. ಮುಂಬೈ ಪೊಲೀಸರು ತಮ್ಮ ಈ ಎಲ್ಲಾ ಕಾರ್ಯಗಳಿಗೆ ಸಾಕಷ್ಟು ಸ್ಪಷ್ಟೀಕರಣವನ್ನು ನ್ಯಾಯಾಲಯದಲ್ಲಿ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ ವಕೀಲ ವಿಕಾಸ್ ಸಿಂಗ್.

  ಸುಶಾಂತ್ ಮನೆಗೆ ಸಿಬಿಐ ತಂಡ ಭೇಟಿ

  ಸುಶಾಂತ್ ಮನೆಗೆ ಸಿಬಿಐ ತಂಡ ಭೇಟಿ

  ಸುಶಾಂತ್ ಸಿಂಗ್ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡಿದ್ದು, ಇಂದು ಬಿಹಾರದ ಸುಶಾಂತ್ ನಿವಾಸಕ್ಕೆ ಸಿಬಿಐ ತಂಡ ತೆರಳಿ ವಿಚಾರಣೆ ನಡೆಸಿದರು. ಇದಕ್ಕೂ ಮುನ್ನಾ ಸತತ ಎರಡು ದಿನಗಳ ಕಾಲ ಸುಶಾಂತ್ ಸಿಂಗ್ ಅವರ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದರು.

  English summary
  Sushant father's lawyer questions how Rhea Chakraborthy entered morgue where Sushant Singh's body kept.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X