»   » ಮುಂಬೈ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ ಹೃತಿಕ್

ಮುಂಬೈ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ ಹೃತಿಕ್

Posted By:
Subscribe to Filmibeat Kannada

ಪ್ರಿಯ ಮಡದಿ ಸೂಸಾನೆ ರೋಷನ್ ರಿಂದ ದೂರವಾದ ಮೇಲೆ ಹೃತಿಕ್ ರೋಷನ್ ಗೆ ಪ್ರತಿದಿನ ಕಿರಿಕಿರಿ ತಪ್ಪಿದ್ದಲ್ಲ. ಮೊನ್ನೆಮೊನ್ನೆಯಷ್ಟೇ ಕಂಗನಾ ಜೊತೆಗಿನ ಲಿಂಕಪ್ ವಿಷಯದ ಬಗ್ಗೆ ಸಿಕ್ಕಾಪಟ್ಟೆ ಗರಂ ಆಗಿದ್ದ ಹೃತಿಕ್ ಈಗ ಮುಂಬೈ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ. [ನಟ ಹೃತಿಕ್ ರೋಷನ್ ಬಾಳಲ್ಲಿ ಹೊಸ ನಟಿ ಎಂಟ್ರಿ]

ಹೃತಿಕ್ ಹೀಗೆ ಏಕಾಏಕಿ ಪೊಲೀಸ್ ಸ್ಟೇಷನ್ ಮೆಟ್ಟಿಲೇರುವುದಕ್ಕೆ ಕಾರಣ ತಮ್ಮ ಹೆಸರಲ್ಲಿ ಕ್ರಿಯೇಟ್ ಆಗಿರುವ ಫೇಕ್ ಅಕೌಂಟ್. ಎಲ್ಲರಿಗೂ ಗೊತ್ತಿರುವ ಹಾಗೆ, ಹೃತಿಕ್ ರೋಷನ್ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯ. ಅಭಿಮಾನಿಗಳು ಪ್ರೀತಿಯಿಂದ ಕಳುಹಿಸುವ ಸಂದೇಶಗಳಿಗೆ ಪ್ರತಿಕ್ರಿಯಿಸುವ ಹೃತಿಕ್ ಗೆ, ಇತ್ತೀಚೆಗಷ್ಟೇ ತಮ್ಮ ಹೆಸರನಲ್ಲಿ hroshan@email.com ಅನ್ನುವ ಅಕೌಂಟ್ ಕ್ರಿಯೇಟ್ ಆಗಿರುವುದು ಗಮನಕ್ಕೆ ಬಂದಿದೆ.

Hrithik Roshan

ತಮ್ಮ ಹೆಸರಲ್ಲಿ, ತಮ್ಮ ಅಭಿಮಾನಿಗಳೊಂದಿಗೆ ಅನಾಮಧೇಯ ವ್ಯಕ್ತಿ ಸಂವಹನ ನಡೆಸುತ್ತಿರುವುದನ್ನ ಮನಗಂಡ ಹೃತಿಕ್, ತಕ್ಷಣ ಮುಂಬೈ ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದಾರೆ. ನಾಲ್ಕು ಪುಟಗಳ ಸುದೀರ್ಘ ದೂರಿನ ಪತ್ರದಲ್ಲಿ, ಫೇಕ್ ಅಕೌಂಟ್ ಗಳಿಂದಾಗುವ ಅನಾಹುತಗಳ ಬಗ್ಗೆ ಹೃತಿಕ್ ವಿವರಿಸಿದ್ದಾರೆ.

ಅಭಿಮಾನದ ಅತಿರೇಕದಲ್ಲಿ ಅನೇಕ ಅಭಿಮಾನಿಗಳು ಸಾವಿನ ಬೆದರಿಕೆ ಹಾಕಿದಂತಹ ಅನುಭವ ಹೃತಿಕ್ ಗೆ ಆಗಿದೆ. ಇಂತಹ ಫೇಕ್ ಅಕೌಂಟ್ ಇಂದ ಯಾವುದೇ ದುರಂತಗಳು ಸಂಭವಿಸಬಾರದು ಅನ್ನುವ ಕಾರಣಕ್ಕೆ ಮುನ್ನೆಚ್ಚರಿಕೆ ವಹಿಸಿದ ಹೃತಿಕ್, ಪೊಲೀಸರ ಮೊರೆಹೋಗಿದ್ದಾರೆ. ಸದ್ಯಕ್ಕೆ ದೂರು ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)

English summary
Bollywood Handsome Hunk Hrithik Roshan has lodged a complaint with Mumbai Police Commissioner, against the Fake Email Account created in his name.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada