»   » ನನಗೆ ಗಾಡ್ ಫಾದರ್ ಇಲ್ಲ, ಆದ್ರೆ ಲಕ್ಕಿ: ಅದಾ ಶರ್ಮಾ

ನನಗೆ ಗಾಡ್ ಫಾದರ್ ಇಲ್ಲ, ಆದ್ರೆ ಲಕ್ಕಿ: ಅದಾ ಶರ್ಮಾ

Posted By:
Subscribe to Filmibeat Kannada

ಬಾಲಿವುಡ್ ನಟಿ ಅದಾ ಶರ್ಮಾ 2008 ರಲ್ಲಿ '1920' ಎಂಬ ಹಿಂದಿ ಹಾರರ್ ಚಿತ್ರದ ಮೂಲಕ ಬಾಲಿವುಡ್ ಪ್ರವೇಶ ಪಡೆದರು. ನಂತರ ದಕ್ಷಿಣದ ಕೆಲವು ಸಿನಿಮಾ ಗಳಲ್ಲಿ ಕಾಣಿಸಿಕೊಂಡು ಯಶಸ್ಸು ಪಡೆದರು. ಈಗ ಮತ್ತೆ ವಿದ್ಯುತ್ ಜಮ್ಮ್ವಾಲ್ ಅವರ 'ಕಮಾಂಡೋ 2' ಚಿತ್ರದ ಮೂಲಕ ಬಾಲಿವುಡ್ ಟೌನ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗೆ ಅದಾ ಶರ್ಮಾ ಅವರು ಏಷಿಯನ್ ಏಜ್ ನೊಂದಿಗೆ ನೀಡಿದ ಸಂದರ್ಶನದಲ್ಲಿ ತಾವು ಮತ್ತೆ ಬಾಲಿವುಡ್ ನಲ್ಲಿ ಕಾಣಿಸಿಕೊಂಡಿರುವ ಬಗ್ಗೆ, ತಮ್ಮ ಮುಂದಿನ ಸಿನಿಮಾ ಗಳ ಬಗ್ಗೆ ಮಾತನಾಡಿದ್ದಾರೆ.

'ಕಮಾಂಡೋ 2' ಚಿತ್ರದಲ್ಲಿ ನಟಿಸಲು ಕಾರಣ

ಅದಾ ಶರ್ಮಾ ಅವರು ತಾವು 'ಕಮಾಂಡೋ 2' ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದು ಏಕೆ? ಎಂಬ ಪ್ರಶ್ನೆಗೆ, "ಫಿಲ್ಮ್ ಗೆ ಆಡಿಶನ್ ಆದ ವೇಳೆ ಕಮಾಂಡೋ ಚಿತ್ರದಲ್ಲಿಯ ನನ್ನ ಪಾತ್ರದ ಮೇಲೆ ತುಂಬಾ ಪ್ರೀತಿ ಉಂಟಾಯಿತು. ಹಾಗೆ ಈ ಹಿಂದೆ ಇಂತಹ ಪಾತ್ರಗಳಲ್ಲಿ ಒಮ್ಮೆಯು ನಟಿಸಿರಲಿಲ್ಲ. ಹಲವು ಸಿನಿಮಾಗಳಲ್ಲಿ ಜನರನ್ನು ನಗಿಸುವ ಪಾತ್ರ ನಿರ್ವಹಿಸಿದ್ದೆ. ಆದರೆ ಈ ಚಿತ್ರದಲ್ಲಿ ಎಮೋಶನಲ್ ಡ್ರಾಮಾ ಮಾಡಿದ್ದೇನೆ" ಎಂದು ಉತ್ತರಿಸಿದ್ದಾರೆ.

ಇದುವರೆಗೆ ತಮಿಳು ಸಿನಿಮಾಗಳಲ್ಲಿ ಕಾಣಿಸಿಲ್ಲವಲ್ಲ?

"ನಾನು ಮೂಲತಃ ತಮಿಳಿಗಳು. ಆದರೆ ಈವರೆಗೆ ಯಾವುದೇ ತಮಿಳು ಸಿನಿಮಾ ಮಾಡಿಲ್ಲ. ಕಾರಣ ತಮಿಳಿನಲ್ಲಿ ನಟಿಸುವುದು ಸ್ವಲ್ಪ ಐರಾನಿಕ್ ಅನಿಸುತ್ತೆ. ಹಲವು ಸಿನಿಮಾಗಳಿಗೆ ಆಫರ್ ಬಂದಿತ್ತು. ಆದರೆ ಆ ಸಿನಿಮಾಗಳಿಗಿಂತ ದೊಡ್ಡ ಚಿತ್ರಗಳಲ್ಲಿ ನಟಿಸುವ ಆಸೆ. ಹಾಗೆ ಸುಮ್ಮನೇ ಯಾವುದ್ಯಾವುದೋ ಸಿನಿಮಾದಲ್ಲಿ ನಟಿಸಲು ಇಷ್ಟವಿಲ್ಲ. ಆದರೆ ಒಂದು ತಮಿಳು ಚಿತ್ರಕ್ಕೆ ಸಹಿ ಹಾಕಿದ್ದೇನೆ".

ಬಾಲಿವುಡ್ ಜರ್ನಿ ಹೇಗಿದೆ?

ಸೌತ್ ಸಿನಿಮಾಗಳಲ್ಲಿ ಸಾಕಷ್ಟು ಸಕ್ಸಸ್ ಪಡೆದಿರುವ ಅದಾ ಶರ್ಮಾ, ತಮ್ಮ ಬಾಲಿವುಡ್ ಜರ್ನಿ ಬಗ್ಗೆ, "ದಕ್ಷಿಣದ ಸಿನಿಮಾಗಳಲ್ಲಿ ಅವಕಾಶ ಸುಲಭವಾಗಿ ಬರುತ್ತವೆ. ಹಿಂದಿನ ಚಿತ್ರಗಳ ಯಶಸ್ಸಿನ ಹಿನ್ನೆಲೆಯಲ್ಲಿ ಅವಕಾಶಗಳು ಸಿಗುತ್ತವೆ. ಆದರೆ ಬಾಲಿವುಡ್ ನಲ್ಲಿ ಇದರ ಬಗ್ಗೆ ಐಡಿಯಾ ಇಲ್ಲ. ಹಾಗೆ ನನಗೆ ಯಾವ ಗಾಡ್ ಫಾದರ್ ಗಳು ಇಲ್ಲ. ಆದರೆ ನಾನು ತುಂಬಾ ಲಕ್ಕಿ. ಸ್ಪರ್ಧೆ ಟಫ್ ಆಗಿದೆ" ಎಂದು ಪ್ರತಿಕ್ರಿಯಿಸಿದ್ದಾರೆ.

ಹಾರರ್ ಸಿನಿಮಾ ಗಳಲ್ಲಿ ಅದಾ ಶರ್ಮಾ

ಅದಾ ಶರ್ಮಾ ಅವರಿಗೆ, '1920' ಹಾರರ್ ಸಿನಿಮಾ ನಂತರ ಹಲವು ಹಾರರ್ ಸಿನಿಮಾಗಳಲ್ಲಿ ನಟಿಸಲು ಅವಕಾಶ ಬಂದಿತಂತೆ. ಆದರೆ ಅದಾ ಹಾರರ್ ಕೆಟಗೆರಿ ಸಿನಿಮಾಗಳಿಂದ ದೂರ ಉಳಿದು, ಸಂಥಿಂಗ್ ಡಿಫರೆಂಟ್ ಸಿನಿಮಾಗಳ ಕಡೆ ಗಮನ ಕೊಟ್ಟರಂತೆ.

English summary
Commando 2 actress Adah Sharma talks about her upcoming film, why she is yet to do a Tamil film, her journey in Bollywood and more.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada