For Quick Alerts
  ALLOW NOTIFICATIONS  
  For Daily Alerts

  'ಸಿನಿಮಾ ಸ್ಟಾರ್ ಆದರೂ ಜಾತಿ ಕಾರಣಕ್ಕೆ ಕೆಲವರು ನಮ್ಮನ್ನು ಮನೆ ಒಳಗೆ ಸೇರಿಸುವುದಿಲ್ಲ'

  |

  ಸ್ವತಂತ್ರ್ಯ ಬಂದು ಮುಕ್ಕಾಲು ಶತಮಾನವಾಯಿತು ಆದರೆ ಭಾರತದಲ್ಲಿ ಜಾತಿ ಅಸಮಾನತೆ ಅಳಿದಿಲ್ಲ. ಸಾಮಾನ್ಯರಿಗೆ ಮಾತ್ರವಲ್ಲ, ರಾಜಕಾರಣಿಗಳು, ಸಿನಿಮಾ ನಟರೂ ಸಹ ಜಾತಿ ಕಾರಣಕ್ಕೆ ಅಪಮಾನ ಎದುರಿಸಿದ್ದಾರೆ. ಎದುರಿಸುತ್ತಿದ್ದಾರೆ.

  ಬಾಲಿವುಡ್ ಖ್ಯಾತ ನಟ ನವಾಜುದ್ದೀನ್ ಸಿದ್ಧಿಕಿ ತಾವು ಎದಿರಿಸಿರುವ ಜಾತಿ ಅಸಮಾನತೆ ಬಗ್ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

  ಉತ್ತರ ಪ್ರದೇಶದ ಸಣ್ಣ ಗ್ರಾಮದಿಂದ ಬಂದಿರುವ ನವಾಜುದ್ದೀನ್ ಸಿದ್ಧಿಕಿ ಸಣ್ಣ ವಯಸ್ಸಿನಲ್ಲಿ ಜಾತಿ ಕಾರಣಕ್ಕೆ ಸಾಕಷ್ಟು ಸಮಸ್ಯೆ ಎದುರಿಸಿದ್ದರಂತೆ. ಊರಿನ ಹಲವರು ನವಾಜುದ್ದೀನ್ ಸಿದ್ದಿಕಿಯನ್ನು ಮನೆಯ ಒಳಗೆ ಬಿಟ್ಟುಕೊಳ್ಳುತ್ತಿರಲಿಲ್ಲವಂತೆ.

  ತಮ್ಮ ಗ್ರಾಮದಲ್ಲಿ ಈಗಲೂ ಜಾತಿ ಪದ್ಧತಿ ಜೀವಂತವಿದ್ದು, ಈಗಲೂ ಸಹ ನನ್ನ ಕುಟುಂಬದವರನ್ನು ಊರಿನ ಕೆಲವು ಕುಟುಂಬದವರು ಮನೆಯ ಒಳಗೆ ಸೇರಿಸಿಕೊಳ್ಳುವುದಿಲ್ಲ ಎಂದಿದ್ದಾ ನವಾಜುದ್ದೀನ್ ಸಿದ್ಧಿಕಿ. ಸ್ಟಾರ್ ನಟ ಆಗಿದ್ದರೂ ಸಹ ಈಗಲೂ ಜಾತಿ ಅಸಮಾನತೆ ಎದುರಿಸುತ್ತಿದ್ದಾರೆ ನವಾಜುದ್ದೀನ್.

  ನವಾಜುದ್ದೀನ್ ಕುಟುಂಬದಲ್ಲಿ ಅವರ ಅಜ್ಜಿ ಮುಸ್ಲಿಂ ಧರ್ಮದಲ್ಲಿ ತುಸು ಕೆಳ ಎಂದು ಕರೆಯಲ್ಪಡುವ ಪಂಗಡದವರಂತೆ, ಹಾಗಾಗಿ ಈಗಲೂ ನಮ್ಮನ್ನು ಕೆಲವರು ತಮ್ಮ ಮನೆಯ ಒಳಗೆ ಸೇರಿಸುವುದಿಲ್ಲ ಎಂದಿದ್ದಾರೆ ನವಾಜುದ್ದೀನ್.

  ಮೇಕಪ್ ಇಲ್ಲದೆ ಬಂದು ಒಂದೊಳ್ಳೆ ಸಂದೇಶ ಕೊಟ್ಟ Madhubala | Filmibeat Kannada

  ನವಾಜುದ್ದೀನ್ ಸಿದ್ದಿಕಿ ಬಾಲಿವುಡ್‌ನ ಹೆಸರಾಂತ ನಟ. ನೆಟ್‌ಫ್ಲಿಕ್ಸ್‌ನಲ್ಲಿ ಇತ್ತೀಚೆಗೆ ಬಿಡುಗಡೆಯಾದ ಸೀರಿಯಸ್ ಮ್ಯಾನ್ ಸಿನಿಮಾದಲ್ಲಿ ನವಾಜುದ್ದೀನ್ ನಟಿಸಿದ್ದಾರೆ.

  English summary
  Nawazuddin Siddiqui said he is victim of caste bias still now. In his village some people didn't let them inside of their house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X