For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಸಹಾಯ ಹಸ್ತದಿಂದ ಮರುಜೀವ ಪಡೆದ ನಟಿ ಪೂಜಾ ದದ್ವಾಲ್

  By Harshitha
  |

  ಟಿಬಿ ಕಾಯಿಲೆಗೆ ತುತ್ತಾಗಿ, ಚಿಕಿತ್ಸೆಗೆ ದುಡ್ಡಿಲ್ಲದೇ, ಕಳೆದ ಐದು ತಿಂಗಳಿನಿಂದ ಸಾವು-ಬದುಕಿನ ನಡುವೆ ಹೋರಾಡಿದ್ದ ನಟಿ ಪೂಜಾ ದದ್ವಾಲ್ ಮೊಗದಲ್ಲಿ ಮತ್ತೆ ನಗು ಮೂಡಿದೆ.

  ಟಿಬಿ ಕಾಯಿಲೆಯಿಂದ ನಟಿ ಪೂಜಾ ದದ್ವಾಲ್ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಮಾರಕ ರೋಗಾಣು ವಿರುದ್ಧ ಹೋರಾಡಿ ಸಾವನ್ನೇ ಗೆದ್ದು ಬಂದಿದ್ದಾರೆ ನಟಿ ಪೂಜಾ ದದ್ವಾಲ್.

  ಟಿಬಿ ಕಾಯಿಲೆಗೆ ತುತ್ತಾದ ಮೇಲೆ ಪೂಜಾ ದದ್ವಾಲ್ ರನ್ನ ಕುಟುಂಬದವರು ಬೀದಿಪಾಲು ಮಾಡಿದ್ದರು. ಕೈಯಲ್ಲಿ ಬಿಡಿಗಾಸು ಇಲ್ಲದೆ, ರೋಗದಿಂದ ಬಳಲುತ್ತಿದ್ದ ಪೂಜಾ ದದ್ವಾಲ್, ಸಲ್ಮಾನ್ ಖಾನ್ ಸಹಾಯ ಕೋರಿದ್ದರು.

  1995 ರಲ್ಲಿ ತೆರೆಕಂಡ 'ವೀರ್ ಗತಿ' ಚಿತ್ರದಲ್ಲಿ ತನ್ನ ಸಹ ನಟಿಯಾಗಿ ನಿಂತಿದ್ದ ಸಲ್ಮಾನ್ ಖಾನ್, ಪೂಜಾ ದದ್ವಾಲ್ ಕೋರಿಕೆಯನ್ನ ಆಲಿಸಿ ಕೂಡಲೆ ಸಹಾಯಕ್ಕೆ ಮುಂದಾದರು. ತಮ್ಮ ಒಡೆತನದ 'ಬೀಯಿಂಗ್ ಹ್ಯೂಮನ್ ಫೌಂಡೇಶನ್' ವತಿಯಿಂದ ಚಿಕಿತ್ಸೆ ವೆಚ್ಚವನ್ನ ಭರಿಸಿ, ಪೂಜಾ ದದ್ವಾಲ್ ಗೆ ಮರುಜೀವ ನೀಡಿದ್ದಾರೆ ಸಲ್ಮಾನ್ ಖಾನ್. ಮುಂದೆ ಓದಿರಿ...

  ಗುಣಮುಖರಾದ ಪೂಜಾ ದದ್ವಾಲ್

  ಗುಣಮುಖರಾದ ಪೂಜಾ ದದ್ವಾಲ್

  ಮಾರ್ಚ್ ತಿಂಗಳಲ್ಲಿ ಮುಂಬೈನ ಆಸ್ಪತ್ರೆಗೆ ಪೂಜಾ ದದ್ವಾಲ್ ದಾಖಲಾದಾಗ ಅವರ ತೂಕ ಕೇವಲ 23 ಕೆ.ಜಿ ಇತ್ತು. ಆದ್ರೀಗ, ಕಾಯಿಲೆಯಿಂದ ಗುಣಮುಖರಾಗಿರುವ ಪೂಜಾ ತೂಕದಲ್ಲಿ ಗಣನೀಯವಾಗಿ ಏರಿಕೆ ಕಂಡುಬಂದಿದ್ದು, ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ. ಹೀಗಾಗಿ, ಸದ್ಯ ಆಸ್ಪತ್ರೆಯಿಂದ ಪೂಜಾ ದದ್ವಾಲ್ ಡಿಸ್ಚಾರ್ಚ್ ಆಗಿದ್ದಾರೆ.

  ಟಿಬಿ ರೋಗಕ್ಕೆ ತುತ್ತಾಗಿ, ದುಡ್ಡಿಲ್ಲದೆ ಒದ್ದಾಡುತ್ತಿದ್ದ ನಟಿಯ ಸಹಾಯಕ್ಕೆ ಬಂದ ನಟ ಇವರೇ!ಟಿಬಿ ರೋಗಕ್ಕೆ ತುತ್ತಾಗಿ, ದುಡ್ಡಿಲ್ಲದೆ ಒದ್ದಾಡುತ್ತಿದ್ದ ನಟಿಯ ಸಹಾಯಕ್ಕೆ ಬಂದ ನಟ ಇವರೇ!

  ಸಲ್ಮಾನ್ ಖಾನ್ ಗೆ ಥ್ಯಾಂಕ್ಸ್

  ಸಲ್ಮಾನ್ ಖಾನ್ ಗೆ ಥ್ಯಾಂಕ್ಸ್

  ಆಸ್ಪತ್ರೆಯಿಂದ ಡಿಸ್ಚಾರ್ಚ್ ಆದ್ಮೇಲೆ, ತನ್ನ ತಾಯ್ನಾಡು ಗೋವಾಗೆ ತೆರಳುತ್ತಿದ್ದಾರೆ ನಟಿ ಪೂಜಾ ದದ್ವಾಲ್. ಈ ಸಮಯದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಪೂಜಾ - ''ನನ್ನ ಭಾವನೆಯನ್ನ ಸದ್ಯ ವರ್ಣಿಸಲು ಆಗುತ್ತಿಲ್ಲ. ನಾನು ಆಸ್ಪತ್ರೆಗೆ ದಾಖಲಾದಾಗ, ಸತ್ತುಹೋಗುವೆ ಎಂದು ಭಾವಿಸಿದ್ದೆ. ನನ್ನ ಕುಟುಂಬದವರು ನನ್ನನ್ನ ಬೀದಿಪಾಲು ಮಾಡಿದ್ದರು. ನನಗೆ ಸಹಾಯ ಮಾಡಿದ ಸಲ್ಮಾನ್ ಖಾನ್ ಗೆ ನಾನು ಧನ್ಯವಾದ ಅರ್ಪಿಸುವೆ. ಬಟ್ಟೆಯಿಂದ ಹಿಡಿದು ಸೋಪು, ಊಟ, ಔಷಧಿ... ಹೀಗೆ ಎಲ್ಲವನ್ನೂ ಸಲ್ಮಾನ್ ಖಾನ್ ಫೌಂಡೇಶನ್ ನನಗಾಗಿ ನೀಡಿದೆ. ನಾನು ಇಂದು ಬದುಕಿದ್ದೇನೆ ಅಂದ್ರೆ, ಅದಕ್ಕೆ ಕಾರಣ ಸಲ್ಮಾನ್ ಖಾನ್'' ಎಂದು ಹೇಳಿದ್ದಾರೆ. ವರದಿಗಳ ಪ್ರಕಾರ, ಇನ್ನೊಂದು ತಿಂಗಳ ಕಾಲ ಪೂಜಾ ದದ್ವಾಲ್ ಔಷಧಿ ಕೋರ್ಸ್ ಮುಂದುವರಿಸಬೇಕು.

  ಟಿಬಿ ಕಾಯಿಲೆಯಿಂದ ಬಳಲುತ್ತಿದ್ದ ನಟಿಗೆ ಕಡೆಗೂ ಸಹಾಯ ಹಸ್ತ ಚಾಚಿದ ಸಲ್ಮಾನ್!ಟಿಬಿ ಕಾಯಿಲೆಯಿಂದ ಬಳಲುತ್ತಿದ್ದ ನಟಿಗೆ ಕಡೆಗೂ ಸಹಾಯ ಹಸ್ತ ಚಾಚಿದ ಸಲ್ಮಾನ್!

  ಯಾರೀ ಪೂಜಾ ದದ್ವಾಲ್

  ಯಾರೀ ಪೂಜಾ ದದ್ವಾಲ್

  1995 ರಲ್ಲಿ ತೆರೆಕಂಡ ಸಲ್ಮಾನ್ ಖಾನ್ ಅಭಿನಯದ 'ವೀರ್ ಗತಿ' ಚಿತ್ರದಲ್ಲಿ ನಟಿ ಪೂಜಾ ದದ್ವಾಲ್ ಅಭಿನಯಿಸಿದ್ದರು. ಬಳಿಕ ಚಿತ್ರರಂಗದಿಂದ ದೂರವಾದ ಪೂಜಾ, ಗೋವಾದ ಕೆಸಿನೋ ಒಂದರಲ್ಲಿ ಕೆಲಸ ಮಾಡುತ್ತಿದ್ದರು.

  ಟಿಬಿ ಕಾಯಿಲೆಯಿಂದ ಬಳಲುತ್ತಿರುವ ಬಾಲಿವುಡ್ ಬೆಡಗಿ: ಸಲ್ಮಾನ್ ಸಹಾಯಕ್ಕೆ ಅಂಗಲಾಚುತ್ತಿರುವ ನಟಿಟಿಬಿ ಕಾಯಿಲೆಯಿಂದ ಬಳಲುತ್ತಿರುವ ಬಾಲಿವುಡ್ ಬೆಡಗಿ: ಸಲ್ಮಾನ್ ಸಹಾಯಕ್ಕೆ ಅಂಗಲಾಚುತ್ತಿರುವ ನಟಿ

  ಪೂಜಾ ಸಹಾಯಕ್ಕೆ ಬಾರದ ಕುಟುಂಬ

  ಪೂಜಾ ಸಹಾಯಕ್ಕೆ ಬಾರದ ಕುಟುಂಬ

  ಕೆಲ ತಿಂಗಳ ಹಿಂದೆ ಟಿಬಿ ಕಾಯಿಲೆಗೆ ತುತ್ತಾಗಿರುವುದು ಪೂಜಾಗೆ ಗೊತ್ತಾಗಿದೆ. ಪೂಜಾ ಆರೋಗ್ಯ ಕ್ಷೀಣಿಸುತ್ತಿದ್ದಂತೆ, ಆಕೆಯ ಪತಿ ಹಾಗೂ ಕುಟುಂಬದವರು ಬೀದಿಪಾಲು ಮಾಡಿದ್ದರು. ಕೈಯಲ್ಲಿ ದುಡ್ಡು ಇಲ್ಲದ ಪೂಜಾ, ಆಸ್ಪತ್ರೆಗೆ ಸೇರಿ ಸಲ್ಮಾನ್ ಖಾನ್ ಸಹಾಯಕ್ಕೆ ಅಂಗಲಾಚಿದ್ದರು.

  English summary
  I'm really thankful to Salman Khan says 'Veergati' Actress Pooja Dadwal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X