For Quick Alerts
  ALLOW NOTIFICATIONS  
  For Daily Alerts

  ಮಾದಕ ಸೇವನೆ ಮಾಡುವವರಿಂದ ಬಾಲಿವುಡ್ ತುಂಬಿ ತುಳುಕಿಲ್ಲ- ಸುನೀಲ್ ಶೆಟ್ಟಿ!

  |

  ಬಾಲಿವುಡ್‌ನಲ್ಲಿ ಕಳೆದ ಕೆಲವು ದಿನಗಳಿಂದ ನಟ-ನಟಿಯರ ಮಾದಕ ಸೇವನೆ ಆರೋಪ ಕೇಳಿಬರುತ್ತಿದೆ. ಇತ್ತೀಚೆಗೆ ಇದೇ ಡ್ರಗ್ಸ್ ಕೇಸ್ ವಿಚಾರವಾಗಿ ಬಾಲಿವುಡ್ ಸೆಲೆಬ್ರೆಟಿಗಳ ವಿಚಾರಣೆ ನಡೆದಿತ್ತು. ಈ ವಿಚಾರವಾಗಿ ಸುನೀಲ್ ಶೆಟ್ಟಿ ಕಾರ್ಯಕ್ರಮವೊಂದರಲ್ಲಿ ಹೇಳಿಕೆಯನ್ನು ನೀಡಿದ್ದಾರೆ.

  ಮಾದಕ ವ್ಯಸನಿಗಳಿಂದ ಬಾಲಿವುಡ್‌ ತುಂಬಿ ತುಳುಕುತ್ತಿಲ್ಲ ಎಂದು ಸುನೀಲ್ ಶೆಟ್ಟಿ ಹೇಳಿಕೆ ನೀಡಿದ್ದಾರೆ. ಸಿಬಿಐ ಆಯೋಜಿಸಿದ್ದ ಅಂತರಾಷ್ಟ್ರೀಯ ಡ್ರಗ್ ದುರುಪಯೋಗ ಮತ್ತು ಅಕ್ರಮ ಸಾಗಣೆ ದಿನದಂದು ಸುನೀಲ್ ಶೆಟ್ಟಿ ಈ ಹೇಳಿಕೆಯನ್ನು ನೀಡಿದ್ದಾರೆ.

  ಸೆಲೆಬ್ರೆಟಿ ಮಕ್ಕಳನ್ನು ಡ್ರಗ್ ಅಡಿಕ್ಟ್ಸ್ ತರ ಯಾಕೆ ನೋಡ್ತೀರಾ?

  ಈ ಕಾರ್ಯಕ್ರಮದಲ್ಲಿ ಸುನೀಲ್ ಶೆಟ್ಟಿ ಮಾತಾಡುತ್ತಾ, " ಬಾಲಿವುಡ್‌ ಸೆಲೆಬ್ರೆಟಿ ಮಕ್ಕಳನ್ನ ಯಾಕೆ ಡ್ರಗ್ ಅಡಿಕ್ಟ್ ಅಂತ ಟ್ರೀಟ್ ಮಾಡುತ್ತಿರಾ. ಒಂದು ತಪ್ಪು ಮಾಡಿದರೆ ಕಳ್ಳ, ಡಕಾಯಿತಿ ಎಂದು ಏಕೆ ಬಿಂಬಿಸುತ್ತೀರಿ. ಈ ಇಂಡಸ್ಟ್ರಿಗೆ ಬಂದು 30 ವರ್ಷ ಆಗಿದೆ. ನನಗೆ 300 ಮಂದಿ ಸ್ನೇಹಿತರಿದ್ದಾರೆ. ಅವರು ಜೀವನದಲ್ಲಿ ಏನನ್ನೂ ಮಾಡಿಲ್ಲ." ಎಂದು ಹೇಳಿದ್ದಾರೆ.

  " ಬಾಲಿವುಡ್‌ನಲ್ಲಿ ಡ್ರಗ್ ಅಡಿಕ್ಟ್ ಆದವರು ತುಂಬಿಕೊಂಡಿಲ್ಲ. ತಪ್ಪ ಮಾಡಿದವರನ್ನು ಮಕ್ಕಳೆಂದು ತಿಳಿದುಕೊಂಡು ಕ್ಷಮಿಸಿಬಿಡಿ. ಪ್ರತಿ ಭಾರಿ ಡ್ರಗ್‌ಗೆ ಸಂಬಂಧಿಸಿದ ವಿಚಾರಕ್ಕೆ ಸೆಲೆಬ್ರೆಟಿಗಳನ್ನೇ ಮಕ್ಕಳನ್ನೇ ಯಾಕೆ ಪ್ರಶ್ನೆ ಮಾಡುತ್ತೀರಾ? ಅವರ ತಪ್ಪುಗಳನ್ನು ಕ್ಷಮಿಸಬೇಕು" ಎಂದು ಹೇಳಿದ್ದಾರೆ.

  ಡ್ರಗ್ ಕೇಸ್‌ನಲ್ಲಿ ಬಾಲಿವುಡ್ ಮಂದಿ ಹೆಸರು

  ಇತ್ತೀಚೆಗೆ ಬಾಲಿವುಡ್‌ ನಟಿ ಶ್ರದ್ಧಾ ಕಪೂರ್ ಸಹೋದರ ಸಿದ್ದಾಂತ್ ಕಪೂರ್ ಅನ್ನು ವಶಕ್ಕೆ ಪಡೆಯಲಾಗಿತ್ತು. ಬೆಂಗಳೂರಿನ ಪಾರ್ಟಿಯೊಂದರಲ್ಲಿ ಡ್ರಗ್ ಸೇವನೆ ಮಾಡಿದ್ದ ವೇಳೆ ವಶಕ್ಕೆ ಪಡೆಯಲಾಗಿತ್ತು. ಬಳಿಕ ಸಿದ್ಧಾಂತ್ ಕಪೂರ್‌ಗೆ ಜಾಮೀನು ನೀಡಲಾಗಿದೆ.

  In an Event Actor Suniel Shetty Has Said That Bollywood Is Not Filled With Druggies

  ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅನ್ನು ಡ್ರಗ್ ಕೇಸ್‌ ಅಡಿಯಲ್ಲಿ ಎನ್‌ಸಿಬಿ ಬಂಧಿಸಿತ್ತು. ಒಂದು ತಿಂಗಳ ಕಾಲ ಆರ್ಯನ್ ಖಾನ್ ಅನ್ನು ಕಸ್ಟಡಿಯಲ್ಲಿ ಇಡಲಾಗಿತ್ತು. ಬಳಿಕ ಜಾಮೀನಿ ನೀಡಲಾಗಿತ್ತು. ಈಗ ಎನ್‌ಸಿಬಿ ಕ್ಲೀನ್ ಚಿಟ್ ನೀಡಲಾದೆ. ಇವರೊಂದಿಗೆ ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್ ಕೂಡ ಎನ್‌ಸಿಬಿ ವಿಚಾರಣೆ ಎದುರಿಸಿದ್ದಾರೆ.

  English summary
  In an Event Actor Suniel Shetty Has Said That Bollywood Is Not Filled With druggies, Know More,
  Thursday, June 30, 2022, 9:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X