»   » ಚಿತ್ರಗಳು: ರೋಮ್‌ನಲ್ಲಿ ಕುಟುಂಬದೊಂದಿಗೆ ರಿಲ್ಯಾಕ್ಸ್ ಆದ ಅಮೀರ್ ಖಾನ್

ಚಿತ್ರಗಳು: ರೋಮ್‌ನಲ್ಲಿ ಕುಟುಂಬದೊಂದಿಗೆ ರಿಲ್ಯಾಕ್ಸ್ ಆದ ಅಮೀರ್ ಖಾನ್

Posted By:
Subscribe to Filmibeat Kannada

ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ರವರು ತಮ್ಮ ಅಭಿನಯದ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರೀಕರಣದಿಂದ ಬ್ರೇಕ್ ಪಡೆದಿದ್ದಾರೆ. ಇದೇ ಗ್ಯಾಪ್ ನಲ್ಲಿ ಅಮೀರ್ ತಮ್ಮ ಹೆಂಡತಿ ಕಿರಣ್ ರಾವ್, ಮಗ ಅಜಾದ್ ರೊಂದಿಗೆ ರೋಮ್ ಮತ್ತು ಇಟಲಿಯ ಪ್ರಾಚೀನ ಸೌಂದರ್ಯ ವೀಕ್ಷಣೆ ಮಾಡಿದ್ದಾರೆ.

ಅಮೀರ್ ತಮ್ಮ ಶೂಟಿಂಗ್ ಬ್ರೇಕ್ ರಜೆಯನ್ನು ಅವರ ಕುಟುಂಬದೊಂದಿಗೆ ರೋಮ್ ನಲ್ಲಿ ಎಂಜಾಯ್ ಮಾಡಿದ್ದಾರೆ. ಆ ನಡುವೆ ಅವರು ಕ್ಲಿಕ್ಕಿಸಿದ ಹಲವು ಫೋಟೋಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಆ ಫೋಟೋಗಳು ಈ ಕೆಳಗಿನಂತಿವೆ ನೋಡಿ..

ಮಿಸ್ಟರ್ ಪರ್ಫೆಕ್ಷನಿಸ್ಟ್ ಪ್ರವಾಸ

ಅಮೀರ್ ಖಾನ್ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದ ಟೈಟ್ ಶೂಟಿಂಗ್ ಸೆಡ್ಯೂಲ್ ನಿಂದ ಬ್ರೇಕ್ ಪಡೆದು ಹೆಂಡತಿ ಕಿರಣ್ ರಾವ್ ಮತ್ತು ಮಗ ಅಜಾದ್ ಜೊತೆ ರೋಮ್ ನಲ್ಲಿ ರೋಮಿಂಗ್ ಮಾಡಿದ್ದಾರೆ. ಅವರು ರೋಮ್ ನಲ್ಲಿ ಕುಟುಂಬದ ಜೊತೆ ಕುಳಿತು ಐಸ್‌ಕ್ರೀಂ ತಿನ್ನುತ್ತಿರುವ ದೃಶ್ಯ ನೋಡಿ.

ರೋಮ್ ವೀಕ್ಷಣೆ

ಅಮೀರ್ ಕುಟುಂಬ ಐತಿಹಾಸಿಕ ರೋಮ್‌ನ ಹಲವು ಉತ್ತಮ ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟಿದೆ. ಅಲ್ಲಿನ ಒಂದು ಸ್ಟ್ರೀಟ್‌ನಲ್ಲಿ ಸಾಮಾನ್ಯರಂತೆ ತಿರುಗಾಡುತ್ತ ಕ್ಯಾಮೆರಾಗೆ ಅವರು ಪೋಸ್‌ ಕೊಟ್ಟ ಕ್ಷಣವಿದು.

ಸೆಲ್ಫಿ ಟೈಮ್

ಈ ಮೇಲಿನ ಫೋಟೋ ಅಮೀರ್ ಖಾನ್ ಕುಟುಂಬದ ಸ್ವೀಟೆಸ್ಟ್ ಸೆಲ್ಫಿ ಅನ್ನೋ ಫೀಲ್ ಎಲ್ಲರಿಗೂ ಆಗದೇ ಇರದು.. ಅಲ್ವಾ..!

ಅಭಿಮಾನಿಗಳಿಗೆ ಖುಷಿತಂದ ಅಮೀರ್ ಪ್ರವಾಸ

ಅಮೀರ್ ಖಾನ್ 'ಮಿಸ್ಟರ್ ಪರ್ಫೆಕ್ಷನಿಸ್ಟ್' ಎಂದು ಹೆಸರು ಪಡೆದವರು. ಅವರು ಎಂದು ಸಹ ತಮ್ಮ ಫ್ಯಾಮಿಲಿಯೊಂದಿಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟವರಲ್ಲ. ಆದರೆ ಇತ್ತೀಚೆಗೆ 'ವಿಶ್ವ ತಂದೆಯರ ದಿನ' ಪ್ರಯುಕ್ತ ಅಂದು ಅವರು ಮಕ್ಕಳೊಂದಿಗೆ ಕ್ಲಿಕ್ಕಿಸಿದ ಚಿತ್ರಗಳನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದರು. ಈಗ ರೋಮ್ ಪ್ರವಾಸದ ಅಮೂಲ್ಯ ಕ್ಷಣಗಳನ್ನು ಶೇರ್ ಮಾಡಿದ್ದಾರೆ. ಇದರಿಂದ ಅಮೀರ್ ರವರ ವೈಯಕ್ತಿಕ ಜೀವನ ಶೈಲಿಯನ್ನು ನೋಡಿರುವ ಅಭಿಮಾನಿಗಳು ಸಂತೋಷಗೊಂಡಿದ್ದಾರೆ.

ರೋಮ್ ಭೂದೃ‍ಶ್ಯ

ಅಮೀರ್ ಖಾನ್ ಮತ್ತು ಕಿರಣ್ ರಾವ್ ಜೊತೆಯಲ್ಲಿ ಸೆಲ್ಫಿ ತೆಗೆದುಕೊಳ್ಳುವುದರೊಂದಿಗೆ ರೋಮ್ ನಗರದ ಭೂದೃಶ್ಯವನ್ನು ಪ್ರದರ್ಶಿಸಿದ್ದಾರೆ.

ರಜೆಯ ಮಜಾ ಅಮೀರ್ ಗೆ ರಿಲ್ಯಾಕ್ಸ್

ಅಂತೂ ಅಮೀರ್ ದೀರ್ಘಕಾಲದ ನಂತರ ಚಿತ್ರೀಕರಣದಿಂದ ಬ್ರೇಕ್ ಪಡೆದು, ಫ್ಯಾಮಿಲಿಯೊಂದಿಗೆ ರೋಮ್ ಭೇಟಿ ನೀಡಿ ರಿಲ್ಯಾಕ್ಸ್ ಪಡೆದಿದ್ದಾರೆ.

English summary
In Pics: Aamir Khan Holidays In Rome, Italy With His Wife Kiran Rao & Son Azad!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada