»   » ರೆಡ್ ಕಾರ್ಪೆಟ್ ಮೇಲೆ ಮಾಜಿ ವಿಶ್ವ ಸುಂದರಿ ಐಶೂ ಬೆಡಗು ಬಿನ್ನಾಣ..

ರೆಡ್ ಕಾರ್ಪೆಟ್ ಮೇಲೆ ಮಾಜಿ ವಿಶ್ವ ಸುಂದರಿ ಐಶೂ ಬೆಡಗು ಬಿನ್ನಾಣ..

Posted By:
Subscribe to Filmibeat Kannada

ಫ್ರಾನ್ಸ್ ನಲ್ಲಿ 70 ನೇ ವಾರ್ಷಿಕ ಕಾನ್ಸ್ ಚಲನಚಿತ್ರೋತ್ಸವ ಮೇ 17 ರಿಂದ ಶುರುವಾಗಿದ್ದು ಭರ್ಜರಿಯಾಗಿ ನಡೆಯುತ್ತಿದೆ. ಇಲ್ಲಿನ ರೆಡ್ ಕಾರ್ಪೆಟ್ ಮೇಲೆ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್ ರವರು ನಿನ್ನೆ(ನಾಲ್ಕನೇ ದಿನ) ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದ ಎಲ್ಲರ ಕಣ್ಮನ ಸೆಳೆದಿದ್ದಾರೆ.[ಪತಿ ಅಭಿಷೇಕ್ ಬಚ್ಚನ್ ಜೊತೆ ನಟಿಸುವ ಚಿತ್ರ ರಿಜೆಕ್ಟ್ ಮಾಡಿದ್ರು ಐಶ್ವರ್ಯ ರೈ!]

ಐಶ್ವರ್ಯ ರೈ ಬಚ್ಚನ್ 2017 ನೇ ಕಾನ್ಸ್ ಫಿಲಂ ಫೆಸ್ಟಿವಲ್ ನಲ್ಲಿ ನಾಲ್ಕನೇ ದಿನ ರಾಲ್ಫ್ ಮತ್ತು ರುಸ್ಸೊ ಭುಜದ ಗೌನ್ ಧರಿಸಿ ಜೊತೆಗೆ ಕಡುಗೆಂಪು ಬಣ್ಣದ ಲಿಪ್ ಸ್ಟಿಕ್ ಹಚ್ಚಿಕೊಂಡು ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಐಶ್ವರ್ಯ ರವರು ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡ ಸುಂದರ ಕ್ಷಣಗಳನ್ನು ಫೋಟೋ ಸಹಿತ ಮುಂದೆ ನೋಡಿ...

ಆರಾಧ್ಯ ಜೊತೆ ಐಶ್ವರ್ಯ ರೈ

ರೆಡ್ ಕಾರ್ಪೆಟ್ ಅಲಂಕರಿಸುವ ಮುನ್ನ ಐಶ್ವರ್ಯ ರೈ ಬಚ್ಚನ್ ಸುಂದರ ಧಿರಿಸಿನಲ್ಲಿ ತಮ್ಮ ಮಗಳು ಆರಾಧ್ಯಳೊಂದಿಗೆ ಕಾಣಿಸಿಕೊಂಡ ಕ್ಷಣ.

ಎಲ್ಲರ ಕಣ್ಮನ ಸೆಳೆದ ಐಶು

ಐಶ್ವರ್ಯ ರೈ ಬಚ್ಚನ್ ಕಾನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಈ ವರೆಗೆ 16 ವರ್ಷ ಪೂರೈಸಿದ್ದಾರೆ. ಈ ಬಾರಿ ಹಿಂದಿನ ಕಾನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಕಾಣಿಸಿಕೊಂಡಿದ್ದಕ್ಕಿಂತ ವಿಭಿನ್ನ ಉಡುಗೆಯಿಂದ ಬಹುಕಾಂತೀಯವಾಗಿ ಕಾಣಿಸಿಕೊಂಡಿದ್ದಾರೆ.

ಖುಷಿ ಖುಷಿಯಾಗಿ ಐಶ್ವರ್ಯ ರೈ

ರೆಡ್ ಕಾರ್ಪೆಟ್ ಮೇಲೆ ಐಶ್ವರ್ಯ ರೈ ಅವರು ಹಚ್ಚಿದ್ದ ಕಡುಗೆಂಪು ಬಣ್ಣದ ಲಿಪ್ ಸ್ಟಿಕ್ ಮತ್ತು ಕಪ್ಪು ಬಣ್ಣದ ನೀಳ ಕೇಶರಾಶಿಯಿಂದ ಹೆಚ್ಚು ಹೈಲೈಟ್ ಆಗಿ ಕಾಣಿಸಿಕೊಂಡರು.

ಎಲ್ಲರ ಚಿತ್ತ ಐಶ್ವರ್ಯಳತ್ತ

ಪ್ರಪಂಚದ ಮೋಸ್ಟ್ ಬ್ಯೂಟಿಫುಲ್ ವೂಮೆನ್ ಹೆಸರು ಪಡೆದಿದ್ದ ಐಶ್ವರ್ಯ ರೈ ಬಚ್ಚನ್ ರೆಡ್ ಕಾರ್ಪೆಟ್ ಮೇಲೆ ತಾವು ಧರಿಸಿದ್ದ ಉಡುಗೆಯ ಪ್ರದರ್ಶನಕ್ಕಾಗಿ ಎಲ್ಲಾ ಆಂಗಲ್ ಗಳಿಂದ ರೆಡ್ ಕಾರ್ಪೆಟ್ ಮೇಲೆ ಪೋಸ್ ಕೊಟ್ಟು ಎಲ್ಲರ ಗಮನ ಸೆಳೆದರು.

ಯಾರಿಗೂ ಚಿಂತಿಸಿದೆ ಐಶು ಫೋಸ್

ಐಶ್ವರ್ಯ ರೈ ಬಚ್ಚನ್ ರವರು ಯಾವ ಫ್ಯಾಷನ್ ವಿಮರ್ಶಕರಿಗು ತಲೆಕೆಡಿಸಿಕೊಳ್ಳದೇ, ಅವರು ವಿಮರ್ಶೆ ಮಾಡಲು ಅವಕಾಶ ನೀಡದಂತಹ ನೋಡದಿಂದ ಕಾಣಿಸಿಕೊಂಡರು.

ಐಶ್ವರ್ಯ ರೈ ಡ್ರೆಸ್

ಐಶ್ವರ್ಯ ರೈ ಧರಿಸಿದ್ಧ ಕೆಂಪು ಬಣ್ಣದ ಗೌನ್ ಸಖತ್ ಕ್ಲಾಸಿ, ಡ್ರಾಮಾಟಿಕ್ ಮತ್ತು ಪರ್ಫೆಕ್ಟ್ ಆಗಿ ಕಾನ್ಸ್ ಫಿಲ್ಮ್ ಫೆಸ್ಟಿವಲ್ ಅಂಗಳಕ್ಕೆ ಸೂಕ್ತವಾಗಿತ್ತು.

ಐಶು ಡ್ರೆಸ್ ಗೆ ಫುಲ್ ಮಾರ್ಕ್ಸ್

ಫ್ರಾನ್ಸ್ ಅಂಗಳದ ಕಾನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಐಶ್ವರ್ಯ ರೈ ಧರಿಸಿದ್ದ ಉಡುಗೆಗೆ ಔಟ್ ಆಫ್ ಔಟ್ ಮಾರ್ಕ್ಸ್ ನೀಡಬಹುದು. ನೀವೇನಂತರಾ?..

English summary
In Pics Aishwarya Rai Bachchan ‘s Second Outing At The Red Carpet Is Red Hot. Have a look at her stunning pictures below..

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada