»   » ಪತಿ ಅಭಿಷೇಕ್ ಬಚ್ಚನ್ ಜೊತೆ ನಟಿಸುವ ಚಿತ್ರ ರಿಜೆಕ್ಟ್ ಮಾಡಿದ್ರು ಐಶ್ವರ್ಯ ರೈ!

ಪತಿ ಅಭಿಷೇಕ್ ಬಚ್ಚನ್ ಜೊತೆ ನಟಿಸುವ ಚಿತ್ರ ರಿಜೆಕ್ಟ್ ಮಾಡಿದ್ರು ಐಶ್ವರ್ಯ ರೈ!

Posted By:
Subscribe to Filmibeat Kannada

ಹಲವು ದಿನಗಳಿಂದ ಬಾಲಿವುಡ್ ಸಿನಿ ಅಂಗಳದಲ್ಲಿ ಗಾಳಿಸುದ್ದಿಯೊಂದು ಸಖತ್ ಸದ್ದು ಮಾಡುತ್ತಿದೆ. ಅದೇನಂದ್ರೆ ಐಶ್ವರ್ಯ ರೈ ಬಚ್ಚನ್ ಮತ್ತು ಪತಿ ಅಭಿಷೇಕ್ ಬಚ್ಚನ್ ಇಬ್ಬರು ಸಹ ಏಳು ವರ್ಷಗಳ ನಂತರ ಅನುರಾಗ್ ಕಶ್ಯಪ್ ರವರ ಮುಂಬರುವ ಸಿನಿಮಾದಲ್ಲಿ ಮತ್ತೆ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಎಂಬುದು.[ಐಶ್ವರ್ಯ ರೈ, ಹೇಮಾ ಮಾಲಿನಿ'ಗೆ ಪ್ರತಿಷ್ಠಿತ ದಾದಾಸಾಹೇಬ್ ಪ್ರಶಸ್ತಿ]

ಆದ್ರೆ ಲೇಟೆಸ್ಟ್ ವರದಿಗಳ ಪ್ರಕಾರ ಐಶ್ವರ್ಯ ರೈ ಬಚ್ಚನ್ ಮತ್ತು ಪತಿ ಅಭಿಷೇಕ್ ಬಚ್ಚನ್ ಜೊತೆಯಲ್ಲಿ ನಟಿಸುವುದಿಲ್ಲವಂತೆ. ಮಾಜಿ ವಿಶ್ವಸುಂದರಿ ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ಇಬ್ಬರು ಜೊತೆಯಲ್ಲಿ ನಟಿಸುವ ಸಿನಿಮಾವನ್ನೇ ರಿಜೆಕ್ಟ್ ಮಾಡಿದ್ದಾರಂತೆ. ಅಸಲಿ ಕಾರಣ ಏನು ಗೊತ್ತಾ?..

ಅಭಿಷೇಕ್ ಮತ್ತು ಐಶ್ವರ್ಯ ರೈ ಆಫರ್ ರಿಜೆಕ್ಟ್ ಮಾಡಿದ್ದಾರೆ

ಡೆಕ್ಕನ್ ಕ್ರಾನಿಕಲ್ ವರದಿ ಪ್ರಕಾರ, "ಬಾಲಿವುಡ್ ನಿರ್ದೇಶಕ ಮತ್ತು ನಿರ್ಮಾಪಕ ಅನುರಾಗ್ ಕಶ್ಯಪ್ ರವರು ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರನ್ನು 'ಗುಲಾಬ್ ಜಾಮೂನ್' ಚಿತ್ರದ ಮೂಲಕ ತೆರೆಮೇಲೆ ಕರೆತರಲು ನಿರ್ಧರಿಸಿದ್ದರಂತೆ. ಆದರೆ ಈ ದಂಪತಿಗಳು ಅನುರಾಗ್ ಅವರ ಆಫರ್ ರಿಜೆಕ್ಟ್ ಮಾಡಿದ್ದಾರಂತೆ."['ಏ ದಿಲ್ ಹೈ ಮುಷ್ಕಿಲ್' ಕಲೆಕ್ಷನ್ ನೋಡಿ ನಿಟ್ಟುಸಿರು ಬಿಟ್ಟ ಕರಣ್]

ರಿಜೆಕ್ಟ್ ಮಾಡಿದ್ದೇಕೆ?

" 'ಗುಲಾಮ್ ಜಾಮುನ್' ಚಿತ್ರ ಅಭಿಷೇಕ್ ಮತ್ತು ಐಶ್ವರ್ಯ ರೈ ಇಬ್ಬರು ಒಟ್ಟಿಗೆ ನಟಿಸಲು ಬೇಕಾದಂತಹ ಕುತೂಹಲಕಾರಿಯಾದ ಸ್ಕ್ರಿಪ್ಟ್ ಹೊಂದಿಲ್ಲ" ಎಂಬ ಕಾರಣದಿಂದ ಚಿತ್ರದ ಆಫರ್ ರಿಜೆಕ್ಟ್ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದಿದೆ.[18 ವರ್ಷದ ಹಿಂದಿನ ಹಳೇ ಫೋಟೋ ರಹಸ್ಯ ಬಯಲು ಮಾಡಿದ ಐಶ್ವರ್ಯ]

'ಗುಲಾಬ್ ಜಾಮುನ್' ಬಂದರು ಬರಬಹುದು ಕಾದು ನೋಡಬೇಕಿದೆ

ಮತ್ತೊಂದು ಸುದ್ದಿ ಮೂಲದ ಪ್ರಕಾರ, "ಅನುರಾಗ್ ಕಶ್ಯಪ್ ಪ್ರೊಡಕ್ಷನ್ ಹೌಸ್ 'ಫಾಂಟಂ' ಚಿತ್ರದ ಬಗ್ಗೆ ದೀರ್ಘಕಾಲದಿಂದಲೂ ಮಾತುಕತೆ ನಡೆಸಿದೆ. ಆದರೆ ಇದುವರೆಗೂ ಯಾವುದೇ ರೀತಿಯಲ್ಲಿ ಚಿತ್ರದ ಬಗ್ಗೆ ಅಂತಿಮ ನಿರ್ಧಾರ ತಿಳಿಸಿಲ್ಲ" ಎಂದು ಅಭಿಷೇಕ್ ಬಚ್ಚನ್ ಹೇಳಿರುವ ಬಗ್ಗೆ ತಿಳಿದಿದೆ.

ಐಶ್ವರ್ಯ ಜೊತೆ ನಟಿಸಲು ಅಭಿಷೇಕ್ ಉತ್ಸುಕರಾಗಿದ್ದಾರೆ

ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಭಿಷೇಕ್ ಬಚ್ಚನ್ ತಮ್ಮ ಬ್ಯೂಟಿಫುಲ್ ಪತ್ನಿ ಐಶ್ವರ್ಯ ರೈ ಬಚ್ಚನ್ ರೊಂದಿಗೆ ಮತ್ತೆ ಅಭಿನಯಿಸಲು ಸಂಪೂರ್ಣ ಆಸಕ್ತಿ ಇದೆ ಎಂದು ಸಂತೋಷದಿಂದ ಹೇಳಿದ್ದಾರೆ. ಈ ಬಗ್ಗೆ ಹಲವು ಭಾರಿ ನಾವು ಮಾತನಾಡುತ್ತಿರುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಆದರೆ ದಂಪತಿಗಳಿಬ್ಬರು ಕೊನೆಯ ಬಾರಿ ನಟಿಸಿದ ಸಿನಿಮಾ ಮಣಿ ರತ್ನಂ ನಿರ್ದೇಶನದ 2010 ರಲ್ಲಿ ತೆರೆಕಂಡ 'ರಾವಣ್' ಚಿತ್ರ.

ಉತ್ತಮ ಚಿತ್ರಕ್ಕಾಗಿ ಮುನ್ನೋಡುತ್ತಿದ್ದಾರೆ ದಂಪತಿಗಳು

ಅಭಿ‍ಷೇಕ್ ಬಚ್ಚನ್, ತಾವು ಮತ್ತು ಐಶ್ವರ್ಯ ರೈ ಇಬ್ಬರಿಗೂ ಒಟ್ಟಿಗೆ ಅಭಿನಯಿಸುವ ಅವಕಾಶ ಬಂದಾಗಲೆಲ್ಲಾ ಆ ಪ್ರಾಜೆಕ್ಟ್ ವಿಶೇಷವಾಗಿದೆಯೇ ಎಂಬುದರ ಬಗ್ಗೆ ಗಮನಹರಿಸುತ್ತಾರಂತೆ. ಇಬ್ಬರು ಜೊತೆಯಲ್ಲಿ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲು ಉತ್ತಮ ಚಿತ್ರಕ್ಕಾಗಿ ಕಾಯುತ್ತಿದ್ದಾರಂತೆ.

ಈ ವಿಷಯ ನಿಮಗೆ ಗೊತ್ತಾ?

ಅಂದಹಾಗೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಬಚ್ಚನ್ ಇಬ್ಬರು Gaurang Doshi ರವರ ಮುಂಬರುವ ಚಿತ್ರ 'ಹ್ಯಾಪಿ ಆನಿವರ್ಸರಿ (Happy Anniversary)'ಯಲ್ಲಿ ಒಟ್ಟಿಗೆ ನಟಿಸುವ ಎಲ್ಲಾ ಭರವಸೆ ಇದೆ. ಆದರೆ ಕಾರಣಾಂತರಗಳಿಂದ ಈ ಚಿತ್ರ ಸದ್ಯದಲ್ಲಿ ಸ್ಥಗಿತಗೊಂಡಿದೆ. ಈ ಚಿತ್ರವನ್ನು ಪ್ರಹ್ಲಾದ್ ಕಕ್ಕರ್ ರವರು ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿದೆ.

ಅಭಿ, ಐಶ್ವರ್ಯ ರೈ ಜೊತೆ ಬಿಗ್ ಬಿ

'ಹ್ಯಾಪಿ ಆನಿವರ್ಸರಿ' ಚಿತ್ರದ ನಿರ್ಮಾಪಕ Gaurang Doshi ರವರಿಗೆ ಅಭಿಷೇಕ್ ಬಚ್ಚನ್, ಐಶ್ವರ್ಯ ಬಚ್ಚನ್ ಮತ್ತು ಅಮಿತಾಬ್ ಬಚ್ಚನ್ ಮೂವರನ್ನು ಒಂದೇ ಚಿತ್ರದಲ್ಲಿ ತೆರೆಮೇಲೆ ಕರೆತರುವ ಮಹದಾಸೆ ಇದೆಯಂತೆ. ಅಲ್ಲದೇ ಪ್ರೇಕ್ಷಕರ ಆಸೆಯೂ ಇದೇ ಆಗಿದ್ದು ಈ ಪ್ರಾಜೆಕ್ಟ್ ಅನ್ನು ಬಹುಬೇಗ ಕೈಗೆತ್ತಿಕೊಳ್ಳುತ್ತೇನೆ ಎಂದಿದ್ದಾರೆ.

English summary
Aishwarya Rai Bachchan REJECTS The Film With Abhishek Bachchan!. Here is why Aishwarya Rai Bachchan rejected a film with her hubby Abhishek Bachchan..

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada