For Quick Alerts
  ALLOW NOTIFICATIONS  
  For Daily Alerts

  ಫೋಟೋ ಆಲ್ಬಂ: ಊಟಿಯಲ್ಲಿ ಮದುವೆ ಆದ ಅತ್ಯಾಚಾರ ಆರೋಪಿ ಮಿಮೋಹ್

  By Harshitha
  |
  ಊಟಿಯಲ್ಲಿ ಭರ್ಜರಿಯಾಗಿ ನಡೆದ ಅತ್ಯಾಚಾರ ಆರೋಪಿ ಮದುವೆ..!! | Oneindia Kannada

  ಬಾಲಿವುಡ್ ನಲ್ಲಿ ಡಿಸ್ಕೋ ಡ್ಯಾನ್ಸರ್ ಅಂತಲೇ ಪ್ರಖ್ಯಾತಿ ಪಡೆದಿರುವ ಮಿಥುನ್ ಚಕ್ರವರ್ತಿ ಪುತ್ರ ಮಹಾಕ್ಷಯ್ ಚಕ್ರವರ್ತಿ ಅಲಿಯಾಸ್ ಮಿಮೋಹ್ ಚಕ್ರವರ್ತಿ ಮದುವೆ ಮುಗಿದಿದೆ.

  ಮಿಮೋಹ್ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದರೂ, ಅವರ ವಿವಾಹ ಸರಾಗವಾಗಿ ಮುಗಿದು ಹೋಗಿದೆ. ಭಾರತದ ಸ್ವಿಟ್ಸರ್‌ಲ್ಯಾಂಡ್ ಎಂದೇ ಗುರುತಿಸಲ್ಪಡುವ ಊಟಿಯಲ್ಲಿ ಮಿಥುನ್ ಚಕ್ರವರ್ತಿ ಒಡೆತನ ಐಷಾರಾಮಿ ಹೋಟೆಲ್ ನಲ್ಲಿ ಪುತ್ರ ಮಿಮೋಹ್ ವಿವಾಹ ಮಹೋತ್ಸವ ನೆರವೇರಿದೆ.

  ಜುಲೈ 7 ರಂದು ನಡೆಯಬೇಕಿದ್ದ ಮಿಮೋಹ್ ಮದುವೆ ಕ್ಯಾನ್ಸಲ್ ಆಗಿ ನಿನ್ನೆ ನಡೆದಿದೆ. ಬನ್ನಿ ಹಾಗಾದ್ರೆ, ಮಿಮೋಹ್ ಚಕ್ರವರ್ತಿ ಮದುವೆಯ ಫೋಟೋ ಆಲ್ಬಂ ನೋಡಿಕೊಂಡು ಬರೋಣ...

  ಸರಳವಾಗಿ ನಡೆದ ವಿವಾಹ

  ಸರಳವಾಗಿ ನಡೆದ ವಿವಾಹ

  ಹಾಗ್ನೋಡಿದ್ರೆ, ನಟ ಮಿಮೋಹ್ ಚಕ್ರವರ್ತಿ ಮದುವೆ ಗ್ರ್ಯಾಂಡ್ ಆಗಿ ನಡೆಯಬೇಕಿತ್ತು. ಆದ್ರೆ, ಅಷ್ಟರಲ್ಲಿ 'ವರ' ಮಿಮೋಹ್ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂತು. ಹೀಗಾಗಿ, ಮೊದಲೇ ನಿಗದಿ ಆಗಿದ್ದ ಮದುವೆ ಸರಳವಾಗಿ ನಡೆಯುವಂತಾಯಿತು.

  ಸದ್ದಿಲ್ಲದೆ ಮದುವೆ ಆದ ಮಿಥುನ್ ಚಕ್ರವರ್ತಿ ಪುತ್ರ ಮಿಮೋಹ್.!ಸದ್ದಿಲ್ಲದೆ ಮದುವೆ ಆದ ಮಿಥುನ್ ಚಕ್ರವರ್ತಿ ಪುತ್ರ ಮಿಮೋಹ್.!

  ಲವ್ ಕಮ್ ಅರೇಂಜ್ಡ್ ಮ್ಯಾರೇಜ್

  ಲವ್ ಕಮ್ ಅರೇಂಜ್ಡ್ ಮ್ಯಾರೇಜ್

  ಕಳೆದ ಎರಡ್ಮೂರು ವರ್ಷಗಳಿಂದ ಮಿಮೋಹ್ ಹಾಗೂ ಮಾದಲಸಾ ಶರ್ಮಾ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಹೇಳಿ ಕೇಳಿ ಮಾದಲಸಾ ಶರ್ಮಾ.. ನಟಿ ಶೀಲಾ ಶರ್ಮಾ ಅವರ ಪುತ್ರಿ. ಶೀಲಾ ಶರ್ಮಾ ಹಾಗೂ ಮಿಥುನ್ ಚಕ್ರವರ್ತಿ ಫ್ಯಾಮಿಲಿ ಫ್ರೆಂಡ್ಸ್. ಹೀಗಾಗಿ, ಮಿಮೋಹ್-ಮಾದಲಸಾ ಪ್ರೀತಿಗೆ ಅಡ್ಡಗಾಲು ಹಾಕದೇ ಉಭಯ ಕುಟುಂಬಗಳೇ ನಿಂತು ಮದುವೆ ಮಾಡಿದೆ.

  ಮುಂದಿನ ತಿಂಗಳು ನಡೆಯಲಿದೆ ಮಿಥುನ್ ಚಕ್ರವರ್ತಿ ಮಗನ ವಿವಾಹ.!ಮುಂದಿನ ತಿಂಗಳು ನಡೆಯಲಿದೆ ಮಿಥುನ್ ಚಕ್ರವರ್ತಿ ಮಗನ ವಿವಾಹ.!

  ಮದುವೆಗೂ ನಾಲ್ಕು ದಿನಗಳ ಮುನ್ನ....

  ಮದುವೆಗೂ ನಾಲ್ಕು ದಿನಗಳ ಮುನ್ನ....

  ಮದುವೆಗೂ ನಾಲ್ಕು ದಿನಗಳ ಹಿಂದೆಯಷ್ಟೇ ಮಿಮೋಹ್ ಚಕ್ರವರ್ತಿ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂತು. ಮಿಮೋಹ್ ತಾಯಿ ಯೋಗಿತಾ ಬಾಲಿ ವಿರುದ್ಧವೂ ಪ್ರಕರಣ ದಾಖಲಾಯಿತು. ಆದ್ದರಿಂದ ನಿಗದಿ ಆಗಿದ್ದ ದಿನದಂದು (ಜುಲೈ 7) ಮಿಮೋಹ್ ಮದುವೆ ನಡೆಯಲಿಲ್ಲ.

  ಆರೋಪ ಮಾಡಿರುವವರು ನಟಿ.?

  ಆರೋಪ ಮಾಡಿರುವವರು ನಟಿ.?

  ಮಿಮೋಹ್ ವಿರುದ್ಧ ಅತ್ಯಾಚಾರ ಆರೋಪ ಮಾಡಿರುವವರು ಓರ್ವ ನಟಿ ಎನ್ನಲಾಗಿದೆ. ಆ ನಟಿಗೆ ತಾನು ಮದುವೆ ಆಗುವೆ ಎಂದು ನಂಬಿಸಿ ಮೋಸ ಮಾಡಿದ್ರಂತೆ ಮಿಮೋಹ್. ಆಕೆಗೆ ಒಮ್ಮೆ ಗರ್ಭಪಾತ ಆಗುವುದಕ್ಕೂ ಮಿಮೋಹ್ ಕಾರಣ ಎಂದು ಆ ನಟಿ ದೂರಿದ್ದಾಳೆ. ಸಾಲದಕ್ಕೆ, ಆಕೆಗೆ ಮಿಮೋಹ್ ತಾಯಿ ಯೋಗಿತಾ ಬಾಲಿ ಕೂಡ ಬೆದರಿಕೆ ಹಾಕಿದ್ರಂತೆ.

  ಜಾಮೀನು ಸಿಕ್ಕಿದೆ.!

  ಜಾಮೀನು ಸಿಕ್ಕಿದೆ.!

  ಅತ್ಯಾಚಾರ ಪ್ರಕರಣ ದಾಖಲು ಆದ್ಮೇಲೆ, ಜಾಮೀನು ಪಡೆಯಲು ಮಿಮೋಹ್ ಹಾಗೂ ಯೋಗಿತಾ ಬಾಲಿ ಹರಸಾಹಸ ಪಟ್ಟರು. ಕೊನೆಗೆ ಜಾಮೀನು ಸಿಕ್ಕ ಮೇಲೆ ಮಾದಲಸಾ ರನ್ನ ಮಿಮೋಹ್ ವರಿಸಿದರು.

  ಮದುವೆ ಮಂಟಪಕ್ಕೆ ಪೊಲೀಸ್ ಆಗಮನ

  ಮದುವೆ ಮಂಟಪಕ್ಕೆ ಪೊಲೀಸ್ ಆಗಮನ

  ಜುಲೈ 7 ರಂದು ತನಿಖೆ ನಡೆಸಲು ಮದುವೆ ಮಂಟಪಕ್ಕೆ ಪೊಲೀಸ್ ಆಗಮಿಸಿದ್ದರು. ಹೀಗಾಗಿ ಅಂದು ಸಂಪ್ರದಾಯ ಬದ್ಧವಾಗಿ ಮದುವೆ ನಡೆಯಲಿಲ್ಲ. ಬದಲಾಗಿ ಮಿಮೋಹ್ - ಮಾದಲಸಾ ಅವತ್ತು ರಿಜಿಸ್ಟರ್ ಮ್ಯಾರೇಜ್ ಆದರು. ನಿನ್ನೆ ಗುರು ಹಿರಿಯರ ಸಮ್ಮುಖದಲ್ಲಿ ಜೋಡಿ ಸಪ್ತಪದಿ ತುಳಿದರು.

  English summary
  Bollywood Actor Mithun Chakraborty's son Mimoh got married to Madalsa Sharma. Take a look at the pictures.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X