»   » ಫೋಟೋ ಆಲ್ಬಂ: ನಟಿ ಸೋನಂ ಕಪೂರ್ ಕೈಯಲ್ಲಿ ಮದರಂಗಿ ರಂಗು

ಫೋಟೋ ಆಲ್ಬಂ: ನಟಿ ಸೋನಂ ಕಪೂರ್ ಕೈಯಲ್ಲಿ ಮದರಂಗಿ ರಂಗು

Posted By:
Subscribe to Filmibeat Kannada

ಬಾಲಿವುಡ್ ನಟಿ ಸೋನಂ ಕಪೂರ್ ಹಾಗೂ ಉದ್ಯಮಿ ಆನಂದ್ ಅಹುಜಾ ಅವರ ವಿವಾಹ ಮಹೋತ್ಸವ ಇಂದು ಮುಂಬೈನಲ್ಲಿ ಅದ್ಧೂರಿಯಾಗಿ ನಡೆಯಲಿದೆ.

ಮದುವೆಗೂ ಮುನ್ನ... ನಿನ್ನೆ (ಮೇ 7) ಸಂಜೆ ಸನ್ ಟೆಕ್, ಸಿಗ್ನೇಚರ್ ಐಲ್ಯಾಂಡ್ ನಲ್ಲಿ ನಟಿ ಸೋನಂ ಕಪೂರ್ ರವರ ಮೆಹಂದಿ ಶಾಸ್ತ್ರ ನೆರವೇರಿತು. ಬಾಲಿವುಡ್ ನ ಖ್ಯಾತನಾಮರು ಸೋನಂ ಕಪೂರ್-ಆನಂದ್ ಅಹುಜಾ ಮೆಹಂದಿ ಹಾಗೂ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬಿಳಿ ಬಣ್ಣದ ಲೆಹಂಜಾ ತೊಟ್ಟಿದ್ದ ನಟಿ ಸೋನಂ ಕಪೂರ್ ಅಕ್ಷರಶಃ ಅಪ್ಸರೆಯಂತೆ ಕಂಗೊಳಿಸುತ್ತಿದ್ದರು. ಸೋನಂ ಕಪೂರ್ ರವರ ಮೆಹಂದಿ ಶಾಸ್ತ್ರದ ಫೋಟೋ ಆಲ್ಬಂ ಇಲ್ಲಿದೆ ನೋಡಿ...

ವಧುವಿನ ಮೊಗದಲ್ಲಿ ಮಂದಹಾಸ

ಮದರಂಗಿ ಶಾಸ್ತ್ರದಲ್ಲಿ ತಮ್ಮ ಎರಡೂ ಕೈ ಹಾಗೂ ಕಾಲುಗಳಿಗೆ ಮೆಹಂದಿ ಹಾಕಿಸಿಕೊಂಡು ಮಂದಹಾಸ ಬೀರಿದ್ದಾರೆ ವಧು ಸೋನಂ ಕಪೂರ್.

ಇದೋ ಇಲ್ಲಿದೆ ನೋಡಿ ಸೋನಂ ಕಪೂರ್ ಮದುವೆಯ ಆಹ್ವಾನ ಪತ್ರಿಕೆ

ಮೇಡ್ ಫಾರ್ ಈಚ್ ಅದರ್

ಪ್ರೀತಿಸಿ, ಮನೆಯವರ ಒಪ್ಪಿಗೆ ಪಡೆದು ವಿವಾಹವಾಗುತ್ತಿರುವ ಈ ಜೋಡಿ ಮೇಡ್ ಫಾರ್ ಈಚ್ ಅದರ್ ಅಂತ ನಿಮಗೆ ಅನ್ಸಲ್ವಾ.?

ಬ್ರೇಕಿಂಗ್ ನ್ಯೂಸ್: ಮೇ 8 ರಂದು ನಡೆಯಲಿದೆ ಸೋನಂ ಕಪೂರ್ ವಿವಾಹ

ದೆಹಲಿ ಮೂಲದ ಬಿಸಿನೆಸ್ ಮ್ಯಾನ್

ದೆಹಲಿ ಮೂಲದ ಬಿಸಿನೆಸ್ ಮ್ಯಾನ್ ಆಗಿರುವ ಆನಂದ್ ಅಹುಜಾ ರನ್ನ ಕೆಲವು ವರ್ಷಗಳಿಂದ ಸೋನಂ ಕಪೂರ್ ಪ್ರೀತಿಸುತ್ತಿದ್ದಾರೆ. ಇಬ್ಬರ ಪ್ರೀತಿಗೆ ಇಂದು ಅಧಿಕೃತ ಮುದ್ರೆ ಬೀಳಲಿದೆ.

ಮದುವೆ ಆದ್ಮೇಲೆ ಲಂಡನ್ ನಲ್ಲಿ ಸೆಟಲ್ ಆಗ್ತಾರೆ ಕಪೂರ್ ಕುಟುಂಬದ ಕುಡಿ.!

'ವಧು'ವಾಗಿ ಮಿಂಚಿದ ಸೋನಂ

ಮೆಹಂದಿ ಶಾಸ್ತ್ರದ ಬಳಿಕ ನಡೆದ ಸಂಗೀತ ಕಾರ್ಯಕ್ರಮದಲ್ಲಿ ನಟಿ ಸೋನಂ ಕಪೂರ್ ಮಿರಿ ಮಿರಿ ಮಿಂಚಿದ್ದು ಹೀಗೆ...

ಅಪ್ಸರೆಯಂತೆ ಕಂಗೊಳಿಸಿದ ಸೋನಂ ಕಪೂರ್

ಗೋಲ್ಡನ್ ಸಿಗ್ನೇಚರ್ ಮಿರರ್ ವರ್ಕ್ ಹೊಂದಿದ್ದ ಬಿಳಿ ಬಣ್ಣದ ಲೆಹಂಗಾ ತೊಟ್ಟು ಅಕ್ಷರಶಃ ಅಪ್ಸರೆಯಂತೆ ಸೋನಂ ಕಪೂರ್ ಕಂಗೊಳಿಸುತ್ತಿದ್ದರು.

ತಾಯಿಯ ನೆಕ್ಲೇಸ್ ತೊಟ್ಟಿದ್ದ ಸೋನಂ ಕಪೂರ್

ಸಂಗೀತ ಕಾರ್ಯಕ್ರಮಕ್ಕಾಗಿ ತಮ್ಮ ತಾಯಿ ಸುನೀತಾ ಕಪೂರ್ ರವರ ಮುತ್ತು ಹಾಗೂ ಕುಂದನ್ ಮಿಶ್ರಿತ ಚೋಕರ್ ನೆಕ್ಲೇಸ್ ತೊಟ್ಟಿದ್ದರು ನಟಿ ಸೋನಂ ಕಪೂರ್.

ಸಿಂಪಲ್ ಆಗಿ ಕಂಡು ಬಂದ ಆನಂದ್ ಅಹುಜಾ

ಬಿಳಿ ಬಣ್ಣದ ಕುರ್ತ ತೊಟ್ಟು 'ವರ' ಆನಂದ್ ಅಹುಜಾ ಸಿಂಪಲ್ ಆಗಿ ಕಂಡುಬಂದರು.

English summary
Bollywood Actress Sonam Kapoor is getting married to Anand Ahuja today (May 8th) in Mumbai. Check out the pictures of Sonam Kapoor's mehendi ceremony here.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X