Just In
Don't Miss!
- News
ಎಲ್ವಿ ಪ್ರಸಾದ್ ಆಸ್ಪತ್ರೆಯಿಂದ ಗುಣಮಟ್ಟದ ನೇತ್ರ ಚಿಕಿತ್ಸೆ ಸೌಲಭ್ಯ
- Automobiles
ಮಾರ್ಚ್ ಅವಧಿಗಾಗಿ ಮಹೀಂದ್ರಾ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್
- Finance
ಮೊಟೊರೊಲಾ ಹೊಸ ಸ್ಮಾರ್ಟ್ಫೋನ್: ಮೊಟೊ ಜಿ 30 ಮತ್ತು ಮೊಟೊ ಜಿ 10 ಪವರ್
- Sports
ಸುನಿಲ್ ಗವಾಸ್ಕರ್ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿ ಇಂದಿಗೆ 50 ವರ್ಷ
- Lifestyle
ಮಹಾಶಿವರಾತ್ರಿ: ಶಿವನಿಗೆ ಪೂಜೆ ಸಲ್ಲಿಸುವಾಗ ಇವುಗಳನ್ನು ದೂರವಿಡಿ
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಗಾಬಾ ನಲ್ಲಿ ಆಸ್ಟ್ರೇಲಿಯಾದ ಗರ್ವಭಂಗ: ಕುಣಿದ ಬಾಲಿವುಡ್
ಗಬ್ಬಾನಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧ ನಾಲ್ಕನೇ ಟೆಸ್ಟ್‌ನಲ್ಲಿ ಭಾರತವು ಐತಿಹಾಸಿಕ ಜಯ ಸಾಧಿಸಿದೆ. ಆ ಮೂಲಕ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ತನ್ನದಾಗಿಸಿಕೊಂಡಿದೆ. ಭಾರತೀಯ ಕ್ರಿಕೆಟ್ ಪ್ರೇಮಿಗಳು ಈ ಗೆಲುವನ್ನು ವಿಶ್ವಕಪ್ ಗೆಲುವಿನಂತೆ ಸಂಭ್ರಮಿಸುತ್ತಿದ್ದಾರೆ.
ಈ ಐತಿಹಾಸಿಕ ಟೆಸ್ಟ್ ಜಯಕ್ಕೆ ಬಾಲಿವುಡ್ ಸಹ ಹುಚ್ಚೆದ್ದು ಕುಣಿದಿದ್ದು. ಬಾಲಿವುಡ್ ನ ಹಲವು ಸೆಲೆಬ್ರಿಟಿಗಳು ಭಾರತದ ಆಭೂತಪೂರ್ವ ಟೆಸ್ಟ್ ಸರಣಿ ವಿಜಯವನ್ನು ಸಂಭ್ರಮಿಸುತ್ತಿದ್ದಾರೆ.
ನಟ ರಣ್ವೀರ್ ಸಿಂಗ್ ಟ್ವೀಟ್ ಮಾಡಿ, 'ಐತಿಹಾಸಿಕ ವಿಜಯ, ಎಂಥಹಾ ಅದ್ಭುತವಾದ ಆಟ. ಹೆಮ್ಮೆ ಎನಿಸುತ್ತಿದೆ' ಎಂದು ಭಾರತ ಕ್ರಿಕೆಟ್ ತಂಡವು ಭಾರತ ಧ್ವಜ ಎತ್ತಿ ಹಿಡಿದಿರುವ ಚಿತ್ರವನ್ನು ಪ್ರಕಟಿಸಿದ್ದಾರೆ.
ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಸಹ ಭಾರತದ ವಿಜಯದ ಬಗ್ಗೆ ಟ್ವೀಟ್ ಮಾಡಿದ್ದಾರೆ. ತಮ್ಮದೇ ನಿರ್ದೇಶನದ ಸಿನಿಮಾ 'ಕಭಿ ಖುಷಿ ಕಭಿ ಗಂ' ಸಿನಿಮಾದಲ್ಲಿ ನಟಿ ಕಾಜಲ್ ಭಾರತ ಗೆದ್ದಾಗ ಸಂಭ್ರಮಿಸುವ ವಿಡಿಯೋವನ್ನು ಪ್ರಕಟಿಸಿ, ಇಡೀಯ ದೇಶ ಇಂದು ಇದೇ ಮೂಡ್‌ನಲ್ಲಿದೆ ಎಂದು ಬರೆದಿದ್ದಾರೆ.

ತಂದೆ ಸಾವಿನ ನಡುವೆಯೂ ಆಟವಾಡಿದ ಸಿರಾಜ್: ಊರ್ಮಿಳಾ
'ವಿಜಯವು ಪರಿಶ್ರಮ ಪಡುವವನಿಗೆ ಮಾತ್ರವೇ ದಕ್ಕುತ್ತದೆ' ಎಂದಿರುವ ನಟಿ, ರಾಜಕಾರಣಿ ಊರ್ಮಿಳಾ ಮಾತೋಂಡ್ಕರ್, ಪಂದ್ಯದಲ್ಲಿ ಐದು ವಿಕೆಟ್ ಉರುಳಿಸಿದ ಬೌಲರ್ ಸಿರಾಜ್ ಅನ್ನು ಅಭಿನಂದಿಸಿದ್ದಾರೆ. ತಂದೆಯ ಸಾವಿನ ನೋವಿನ ನಡುವೆಯೂ ಸಿರಾಜ್ ಅದ್ಭುತವಾಗಿ ಆಡಿದರು. ತಂಡದ ಎಲ್ಲರೂ ಹೀರೋಗಳೇ ಆದರೆ ಕೆಲವರು ಇಂದಿನ ಆಟದಲ್ಲಿ ಸೂಪರ್ ಹೀರೋಗಳು ಎನಿಸಿಕೊಂಡರು ಎಂದಿದ್ದಾರೆ.

ಗಬ್ಬಾದ ಏಕಚಕ್ರಾಧಿಪತ್ಯ ಮುರಿದ ಭಾರತ: ಪ್ರೀತಿ ಜಿಂಟಾ
ಗಬ್ಬಾದ ಏಕಚಕ್ರಾಧಿಪತ್ಯವನ್ನು ಭಾರತ ಮುರಿದಿದೆ ಎಂದಿದ್ದಾರೆ ನಟಿ ಪ್ರೀತಿ ಜಿಂಟಾ. ಗಬ್ಬಾದಲ್ಲಿ ಮೂರು ದಶಕಗಳಿಂದಲೂ ಆಸ್ಟ್ರೇಲಿಯಾ ಟೆಸ್ಟ್ ಸೋತಿರಲಿಲ್ಲ. ಆದರೆ ಭಾರತ ಗಬ್ಬಾದಲ್ಲಿಯೇ ಆಸ್ಟ್ರೇಲಿಯಾವನ್ನು ಬಗ್ಗುಬಡಿದಿದೆ. ಭಾರತ ಮತ್ತೆ ನಂಬರ್ 1 ಸ್ಥಾನಕ್ಕೆ ಏರಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ ಪ್ರೀತಿ ಜಿಂಟಾ.

'ಜನಾಂಗೀಯ ನಿಂದನೆ, ಗಾಯ ಎಲ್ಲದರ ನಡುವೆ ಗೆಲುವು'
ಖ್ಯಾತ ನಟ ಅಮಿತಾಬ್ ಬಚ್ಚನ್ ಸಹ ಟ್ವೀಟ್ ಮಾಡಿದ್ದು, 'ಎಂಥಹಾ ಅದ್ಭುತ ವಿಜಯ. ದೇಹಗಾಯ ಗೊಳಿಸುವ ಬಾಲ್‌ಗಳು, ಜನಾಂಗೀಯ ನಿಂದನೆ, ಗಾಯಾಳುಗಳ ದಂಡು ಇದೆಲ್ಲದರ ನಡುವೆ ಭಾರತ ಅದ್ಭುತವಾದ ಗೆಲುವು ಸಾಧಿಸಿದೆ. ಭಾರತವನ್ನು ಎಂದೂ ಕೀಳರಿಮೆ ಮಾಡದಿರಿ' ಎಂದು ಅಮಿತಾಬ್ ಟ್ವೀಟ್ ಮಾಡಿದ್ದಾರೆ.

ರಾಜೇಶ್ ಕೃಷ್ಣನ್ ಹಾಸ್ಯಭರಿತ ಟ್ವೀಟ್
ಕನ್ನಡದ ಖ್ಯಾತ ಹಾಡುಗಾರ, ಕ್ರಿಕೆಟ್ ಪ್ರೇಮಿ ರಾಜೇಶ್ ಕೃಷ್ಣನ್ ಟ್ವೀಟ್ ಮಾಡಿ, 'ಸರಣಿ ಸರ್ವೋತ್ತಮ ಪ್ರಶಸ್ತಿಯನ್ನು ಭಾರತ ಕ್ರಿಕೆಟ್ ತಂಡದ ವೈದ್ಯಕೀಯ ತಜ್ಞನಿಗೆ ನೀಡಬೇಕು. ಇಷ್ಟೋಂದು ಗಾಯಾಳುಗಳು ಇನ್ನಾವ ಸರಣಿಯನ್ನೂ ಆಗಿಲ್ಲ' ಎಂದು ಹಾಸ್ಯ ಮಾಡಿದ್ದಾರೆ. ಈ ಟೆಸ್ಟ್ ಸರಣಿಯಲ್ಲಿ ಹೆಚ್ಚು ಮಂದಿ ಗಾಯಾಳುಗಳಾದರು.