For Quick Alerts
  ALLOW NOTIFICATIONS  
  For Daily Alerts

  ಕೃಷ್ಣ ಸುಂದರಿ ಬಿಪಾಶಾಗೆ ಏಕಾಂತದ ಹುಟ್ಟುಹಬ್ಬ

  By ಜೇಮ್ಸ್ ಮಾರ್ಟಿನ್
  |

  ಬಾಲಿವುಡ್ ನ ಹಾಟ್ ನಟಿ ಬಿಪಾಶಾ ಬಸು ವೈಯಕ್ತಿಕ ಸಂಬಂಧಗಳ ಸಂಕೋಲೆ ಕಳಚಿಕೊಂಡು ಅರಾಮವಾಗಿ ಸುತ್ತಾಡುತ್ತಿದ್ದಾಳೆ. ಅತ್ತ ಹಳೆ ಗೆಳೆಯ ಜಾನ್ ಅಬ್ರಹಾಂ ಪ್ರಿಯ ಮದುವೆ ಬಂಧಕ್ಕೆ ಒಳಪಟ್ಟರೆ ಇತ್ತ ಬೆಂಗಾಳಿ ಬೆಡಗಿ ಬಿಪಾಶಾ ಸರಳವಾಗಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡಿದ್ದಾರೆ.

  ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆ ಅವರಂತೆ ಕೃಷ್ಣ ಸುಂದರಿ ಬಿಪಾಶಾ ಬಸು ಕೂಡಾ ಮಾಡೆಲಿಂಗ್ ಕ್ಷೇತ್ರದ ಕೊಡುಗೆ. 16 ವರ್ಷಕ್ಕೆ ರೂಪದರ್ಶಿಯಾಗಿ ಬಿಪಾಶಾ ಬಸು ಹೆಸರು ಪಡೆದವರು. ಗೋದ್ರೆಜ್ ಸಿಂಥಾಲ್ ಸೂಪರ್ ಮಾಡೆಲ್ ಸ್ಪರ್ಧೆ ಗೆದ್ದು ಕಿರೀಟ ಧರಿಸಿದ್ದರು. ನಂತರ ಫೋರ್ಡ್ ವಿಶ್ವ ಮಾಡೆಲ್ ಸ್ಪರ್ಧೆ ಗೆದ್ದ್ಯ್ 2001ರಲ್ಲಿ ಬಾಲಿವುಡ್ ಅಂಗಳಕ್ಕೆ ಜಿಗಿದಿದ್ದರು.

  2001ರಲ್ಲಿ ಅಬ್ಬಾಸ್ ಮಸ್ತಾನ್ ಅವರ ಅಜನಬಿ ಚಿತ್ರದ ನಂತರ ವಿಕ್ರಮ್ ಭಟ್ ಅವರ ರಾಜ್ ಥ್ರಿಲ್ಲರ್ ಚಿತ್ರದಲ್ಲಿ ಬಿಪ್ಸ್ ನಟನೆಗೆ ಫಿಲಂಫೇರ್ ಪ್ರಶಸ್ತಿಯೂ ಬಂದಿತ್ತು. ಬಿಪಾಶಾ ಅವರ ರಾಜ್ 3 ಚಿತ್ರ 73 ಕೋಟಿ ರು.ಗೂ ಅಧಿಕ ಗಳಿಕೆ ಮಾಡಿ ಸದ್ದು ಮಾಡಿತ್ತು.

  ನಟನೆ, ಮೈಮಾಟ, ಲವ್ ಅಫೇರ್ ಗಳ ನಡುವೆ ಆರಕ್ಕೇರದ ಮೂರಕ್ಕಿಳಿದ ಸಮತೂಕದ 35 ವರ್ಷದ ಕಪ್ಪು ಸುಂದರಿ ಬಿಪಾಶಾ ಬಗ್ಗೆ ಇನ್ನಷ್ಟು ಮಾಹಿತಿ ಹಾಗೂ ಚಿತ್ರಗಳನ್ನು ಮುಂದೆ ಓದಿ...

  ಬಿಪಾಶಾಗೆ ವಿದ್ಯಾಭ್ಯಾಸ ಮುಂದುವರೆಸಲಾಗಲಿಲ್ಲ ಎಂಬ ಕೊರಗಿದೆ

  ಬಿಪಾಶಾಗೆ ವಿದ್ಯಾಭ್ಯಾಸ ಮುಂದುವರೆಸಲಾಗಲಿಲ್ಲ ಎಂಬ ಕೊರಗಿದೆ

  ನವದೆಹಲಿಯಲ್ಲಿ ಬೆಂಗಾಳಿ ಕುಟುಂಬದ ಕೂಸಾಗಿ ಹುಟ್ಟಿದ ಬಿಪಾಶಾ ನಂತರ ಕೋಲ್ಕತ್ತಾ ಹಾಗೂ ಮುಂಬೈನಲ್ಲಿ ನೆಲೆ ಕಂಡು ಕೊಂಡರು.

  ಹೆಚ್ಚು ಓದಲಾಗಲಿಲ್ಲ ಎಂಬ ಕೊರಗು ಬಿಪಾಶಾಗೆ ಈಗಲೂ ಇದೆಯಂತೆ. ಹದಿಹರೆಯದಲ್ಲಿ ಓದಿಗೆ ಗುಡ್ ಬೈ ಹೇಳಿ ಮಾಡೆಲಿಂಗ್ ಮಾಡಲು ತೊಡಗಿದ ಬಿಪಾಶಾ ನಂತರ ಸಿನಿ ತಾರೆಯಾಗಿ ಬೆಳಗುತ್ತಿದ್ದಾರೆ.

  ಹುಟ್ಟುಹಬ್ಬ ಆಚರಣೆ ಬಗ್ಗೆ ಬಿಪಾಶಾ

  ಹುಟ್ಟುಹಬ್ಬ ಆಚರಣೆ ಬಗ್ಗೆ ಬಿಪಾಶಾ

  "ನನ್ನ ಪ್ರಕಾರ ಹುಟ್ಟುಹಬ್ಬ ಎಂದರೆ ಒಂದು ದಿನದ ಸಂಭ್ರಮವಲ್ಲ. ತಿಂಗಳೆಲ್ಲಾ ಸಂಭ್ರಮಿಸುವ ಹಬ್ಬ ಎನ್ನುವ ಬಿಪಾಶಾ ಸಾಧಾರಣವಾಗಿ ತನ್ನ ಆಪ್ತ ಗೆಳೆಯ ಗೆಳತಿಯರ ಜತೆ ಪಾರ್ಟಿ ಮಾಡಿ ಊರೂರು ಸುತ್ತಲು ಇಷ್ಟಪಡುತ್ತಾರೆ. ಕಳೆದ ಬಾರಿ ಗೋವಾ ಕಡಲ ತೀರದಲ್ಲಿ ಬಿಪಾಶಾ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು.

  ಈ ಬಾರಿ ಆಪ್ತ ಗೆಳೆಯ ಹರ್ಮಾನ್ ಬವೇಜ, ರಾಕಿ ಎಸ್, ಶಿಲ್ಪಾ ಶೆಟ್ಟಿ, ಆರ್ ಮಾಧವನ್ ಜತೆ ಮುಂಬೈನಲ್ಲೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಬಿಪಾಶಾ ಜತೆ ಮಾಧವನ್ 'ಜೋಡಿ ಬ್ರೇಕರ್ಸ್' ಚಿತ್ರದಲ್ಲಿ ನಟಿಸುತ್ತಿದ್ದಾರೆ.

  ಫಿಟ್ನೆಸ್, ದೇಹ ಸಿರಿ ಬಗ್ಗೆ ಸಕತ್ ಕಾಳಜಿ

  ಫಿಟ್ನೆಸ್, ದೇಹ ಸಿರಿ ಬಗ್ಗೆ ಸಕತ್ ಕಾಳಜಿ

  ಬಿಪಾಶಾ ಬಸು ಸದಾಕಾಲ ತನ್ನ ದೇಹಸಿರಿಯನ್ನು ಕಾಯ್ದುಕೊಳ್ಳುವಲ್ಲಿ ಸಫಲರಾಗಿದ್ದು, ಫಿಟ್ನೆಸ್ ಕಾಯ್ದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಅನೇಕ ಸಿಡಿಗಳನ್ನು ಹೊರ ಹಾಕಿದ್ದಾರೆ.

  ಬಿಪಾಶಾಗೆ ಏನು ತುಂಬಾ ಇಷ್ಟ

  ಬಿಪಾಶಾಗೆ ಏನು ತುಂಬಾ ಇಷ್ಟ

  ಪುಸ್ತಕ ಓದುವುದು, ನೃತ್ಯ ಹಾಗೂ ತಾಯಿಗೆ ಒಳಾಂಗಣ ವಿನ್ಯಾಸದಲ್ಲಿ ಸಹಾಯ ಮಾಡುವುದು ಬಿಪಾಶಾ ಹವ್ಯಾಸಗಳು. ಬಣ್ಣಗಳಲ್ಲಿ ನಸುಗೆಂಪು, ತಿಂಡಿಯಲ್ಲಿ ಗಾಜರ್ ಕ ಹಲ್ವಾ, ಬಿಡುವಿನ ದಿನಗಳಲ್ಲಿ ಪ್ಯಾರಿಸ್ ಸುತ್ತುವುದು, ನಟರಲ್ಲಿ ಜಾನ್ ಗ್ರಿಶಮ್, ಬ್ರಾಡ್ ಪಿಟ್ ಬಿಪಶಾಗೆ ಇಷ್ಟವಂತೆ.

  ಹಾಟ್ ಸುಂದರಿ ಬಿಪಾಶಾ

  ಹಾಟ್ ಸುಂದರಿ ಬಿಪಾಶಾ

  ಬಿಪಾಶಾ ಟೈಮ್ಸ್ 50 ಮೋಸ್ಟ್ ಡಿಸೈರಬಲ್ ವುಮೆನ್ 2011ರಲ್ಲಿ 8ನೇ ಸ್ಥಾನ ಹಾಗೂ 2012 ರಲ್ಲಿ 13ನೇ ಸ್ಥಾನ ಗಳಿಸಿದ್ದರು.

  * 2006ರಲ್ಲಿ ತೆರೆ ಕಂಡ ಕಾರ್ಪೋರೇಟ್ ಚಿತ್ರದಲ್ಲಿನ ಬಿಪಾಶಾ ನಟನೆಗೆ ಎಲ್ಲೆಡೆಯಿಂದ ಪ್ರಶಂಸೆಗಳ ಸುರಿಮಳೆ ಹರಿದು ಬಂದಿತ್ತು. ಬಿಪಾಶಾಗೂ ಈ ಚಿತ್ರ ತುಂಬಾ ಇಷ್ಟ

  * ಸಿಂಗ್ಯುಲಾರಿಟಿ ಎಂಬ ಚಿತ್ರದಲ್ಲಿ ತುಳಜಾ ಪಾತ್ರಧಾರಿಯಾಗಿ ಬಿಪಾಶಾ ಕಾಣಿಸಿಕೊಂಡಿದ್ದರು. ಕಾರ್ಪೊರೆಟ್ ಹಾಗೂ ಸಿಂಗ್ಯುಲಾರಿಟಿ ಎರಡು ಚಿತ್ರಗಳು ಐಶ್ವರ್ಯಾ ರೈ ನಿರಾಕರಿಸಿದ ಪಾತ್ರಗಳಾಗಿತ್ತು.

  ಬಣ್ಣದ ಚಿಟ್ಟೆಯಲ್ಲ, ಸಂಬಂಧಗಳು ಗಟ್ಟಿಯಾಗಿರಬೇಕು

  ಬಣ್ಣದ ಚಿಟ್ಟೆಯಲ್ಲ, ಸಂಬಂಧಗಳು ಗಟ್ಟಿಯಾಗಿರಬೇಕು

  ಬಹುಬೇಗ ಗೆಳೆಯರನ್ನು ಸಂಪಾದಿಸಬಲ್ಲ ಆಕರ್ಷಕ ಚೆಲುವೆ ಬಿಪಾಶಾ 'ನಾನೇನು ಬಣ್ಣದ ಚಿಟ್ಟೆಯಲ್ಲ, ಸಂಬಂಧಗಳು ಗಟ್ಟಿಯಾಗಿರಬೇಕು' ಎಂದಿದ್ದಾರೆ.

  ರಾಜ್ ಚಿತ್ರದ ನಂತರ ಡೀನೋ ಮಾರಿಯೋ ಜತೆ ಸುತ್ತಾಡಿ 2002ರಲ್ಲಿ ಬ್ರೇಕ್ ಅಪ್ ಆದ ಬಿಪಾಶಾ ನಂತರ ಜಿಸ್ಮ್ ಚಿತ್ರದ ನಂತರ ಜಾನ್ ಜತೆ ಓಡಾಡಿದರು. ಸೂಪರ್ ಜೋಡಿಯಾಗಿ ಗಟ್ಟಿಯಾಗಿದ್ದ ಇವರಿಬ್ಬರ ಸಂಬಂಧ ಅಧಿಕೃತವಾಗಿ 2011ರಲ್ಲಿ ಬೇರ್ಪಟ್ಟಿತು. ನಂತರ ಹೆಚ್ಚಾಗಿ ಹರ್ಮಾನ್ ಬವೇಜ ಜತೆ ಬಿಪ್ಸ್ ಕಾಣಿಸಿಕೊಂಡಿದ್ದಾರೆ. ನಿನ್ನೆ ಮಾಧ್ಯಮದವರು ಜಾನ್ ಮದುವೆ ಬಗ್ಗೆ ಕೇಳಿದಾಗ ಬಿಪಾಶಾ ಮೌನಕ್ಕೆ ಶರಣಾಗಿಬಿಟ್ಟರು.

  English summary
  Bipasha Basu turns 35 today. The gorgeous Bipasha Basu has come a long way as a successful actress in Bollywood. She started off with a modelling career at the age of 17, and finally made her foray into mainstream Bollywood movies. Today Bips is considered as one of the hottest and most talented heroines of the tinselville.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X