»   » ದಾಂಪತ್ಯದ ಬಿರುಕಿನ ಬಗ್ಗೆ ಸ್ಪಷ್ಟನೆ ನೀಡಿದ ಅಭಿಷೇಕ್ ಬಚ್ಚನ್

ದಾಂಪತ್ಯದ ಬಿರುಕಿನ ಬಗ್ಗೆ ಸ್ಪಷ್ಟನೆ ನೀಡಿದ ಅಭಿಷೇಕ್ ಬಚ್ಚನ್

By: ಸೋನು ಗೌಡ
Subscribe to Filmibeat Kannada

ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ನಡುವೆ ಏನೋ ಸರಿ ಇಲ್ಲ, ಅವರಿಬ್ಬರ ನಡುವೆ ಬಿರುಕು ಉಂಟಾಗಿದೆ ಅಂತ ಮಾಧ್ಯಮಗಳು ಬೊಬ್ಬೆ ಹಾಕುತ್ತಿರುವಾಗಲೇ ಇತ್ತ ಅಭಿಷೇಕ್ ಬಚ್ಚನ್ ಅವರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಇತ್ತೀಚೆಗೆ 'ಸರ್ಬ್ಜಿತ್' ಬಿಡುಗಡೆ ಆದ ಸಂದರ್ಭದಲ್ಲಿ ಚಿತ್ರದ ಪ್ರೀಮಿಯರ್ ಶೋನಲ್ಲಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ದಂಪತಿ ಪಾಲ್ಗೊಂಡಿದ್ದರು. ಈ ಸಮಯದಲ್ಲಿ ಮಾಧ್ಯಮದ ಮುಂದೆ ಐಶ್ವರ್ಯ ಅವರ ಜೊತೆ ಅಭಿಷೇಕ್ ಫೋಟೋ ತೆಗೆಸಿಕೊಳ್ಳಲು ನಿರಾಕರಣೆ ಮಾಡಿದ್ದು, ಇಷ್ಟೆಲ್ಲಾ ರಾಮಾಯಣಕ್ಕೆ ಕಾರಣವಾಗಿತ್ತು.[ಛೇ ಮುದ್ದು ಪತ್ನಿ ಐಶ್ವರ್ಯ ರೈಗೆ ಅಭಿಷೇಕ್ ಹೀಗೆ ಮಾಡಬಾರದಿತ್ತು]

Is Abhishek Bachchan-Aishwarya Rai's Marriage In Trouble Read The Truth

ಈ ವಿಡಿಯೋ ಇಡೀ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರೂ ಕೂಡ ಅಭಿಷೇಕ್ ಇಷ್ಟು ದಿನ ಮಾತೆತ್ತದೆ ಸುಮ್ಮನೆ ಕುಳಿತಿದ್ದರು. ಇದೀಗ ಕೊನೆಗೂ ಮೌನ ಮುರಿದಿರುವ ನಟ ಅಭಿಷೇಕ್ ಅವರು ತಮ್ಮಿಬ್ಬರ ದಾಂಪತ್ಯ ಜೀವನದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.[ಚಿತ್ರಗಳು: 9ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ಐಶ್-ಅಭಿ]

Is Abhishek Bachchan-Aishwarya Rai's Marriage In Trouble Read The Truth

"ನನಗೆ ಸತ್ಯ ಏನೂಂತ ಗೊತ್ತಿದೆ. ಮಾಧ್ಯಮಗಳಲ್ಲಿ ಬರುವ ವರದಿಗಳನ್ನು ಎಷ್ಟರಮಟ್ಟಿಗೆ ಗಂಭೀರವಾಗಿ ಪರಿಗಣಿಸಬೇಕು ಅಂತ ನನಗೆ ತಿಳಿದಿದೆ. ನಾವಿಬ್ಬರು ಹೇಗೆ ಜೀವನ ಮಾಡಬೇಕೆಂಬುದನ್ನು ಮೂರನೇ ವ್ಯಕ್ತಿ ನಿರ್ಧರಿಸುವ ಅವಶ್ಯಕತೆ ಇಲ್ಲ".

Is Abhishek Bachchan-Aishwarya Rai's Marriage In Trouble Read The Truth

"ನಾನು ಐಶ್ವರ್ಯಳನ್ನು ಎಷ್ಟು ಪ್ರೀತಿಸುತ್ತೇನೆ ಅನ್ನೋದು ಅವಳಿಗೆ ಗೊತ್ತು, ಅವಳು ನನ್ನನ್ನು ಎಷ್ಟು ಪ್ರೀತಿ ಮಾಡುತ್ತಾಳೆ ಅನ್ನೋದು ನನಗೆ ಗೊತ್ತಿದೆ. ನಿಮ್ಮ ನಿಮ್ಮ ಅನುಕೂಲಕ್ಕಾಗಿ ಏನೇನೋ ಅರ್ಥ ಮಾಡಿಕೊಳ್ಳುವುದಾದರೆ ಮುಂದುವರಿಸಿ".[ಅಪಸ್ವರಗಳಿಲ್ಲದ ಐಶೂ ಅನುರೂಪ ದಾಂಪತ್ಯಕ್ಕೆ 8 ವರ್ಷ]

Is Abhishek Bachchan-Aishwarya Rai's Marriage In Trouble Read The Truth

"ನಾನು ಹೆಚ್ಚಾಗಿ ಸಾರ್ವಜನಿಕ ಸ್ಥಳಗಳಲ್ಲಿ ಗುರುತಿಸಿಕೊಳ್ಳುವುದರಿಂದ ಎಲ್ಲಾ ಸಮಯದಲ್ಲಿ ಮಾಧ್ಯಮವನ್ನು ಖುಷಿಪಡಿಸಲು ನನಗೆ ಸಾಧ್ಯವಿಲ್ಲ" ಎಂದು ಸುದ್ದಿ ಹಬ್ಬಿಸಿದವರಿಗೆ ಅಭಿಷೇಕ್ ಬಚ್ಚನ್ ಖಾರವಾಗಿ ಛೀಮಾರಿ ಹಾಕಿದ್ದಾರೆ.

English summary
Bollywood Actor Abhishek Bachchan breaks his silence on impact of reports about trouble in his marriage with Aishwarya Rai Bachchan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada