»   » ಶಿಲ್ಪಾ ಜೊತೆಗಿರುವ ಹಾಲುಗಲ್ಲದ ಕಂದ ಯಾರಪ್ಪಾ?

ಶಿಲ್ಪಾ ಜೊತೆಗಿರುವ ಹಾಲುಗಲ್ಲದ ಕಂದ ಯಾರಪ್ಪಾ?

Posted By:
Subscribe to Filmibeat Kannada
ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಗಂಡು ಮಗುವಿಗೆ ಅಮ್ಮನಾದ ಬಳಿಕ ತಾಯ್ತನದ ಆನಂದದಲ್ಲಿ ತೇಲಾಡಿದ್ದರು. ತಮ್ಮ ಆನಂದವನ್ನು ಎಲ್ಲರೊಂದಿಗೂ ಹಂಚಿಕೊಂಡಿದ್ದರು. ತಮ್ಮ ಜ್ಯೇಷ್ಠ ಪುತ್ರನಿಗೆ ವಿಯಾನ್ ರಾಜ್ ಕುಂದ್ರ ಎಂದು ನಾಮಕರಣ ಮಾಡಿದ್ದಾರೆ.

ಈಗ ವಿಷಯ ಇದಲ್ಲ. ಇದೇ ಮೊದಲ ಬಾರಿಗೆ ತನ್ನ ಹಾಲುಗಲ್ಲದ ಕಂದನೊಂದಿಗೆ ಶಿಲ್ಪಾ ಶೆಟ್ಟಿ ದರ್ಶನ ನೀಡಿದ್ದಾರೆ. ಈ ಫೋಟೋ ಈಗ ಅಂತರ್ಜಾಲದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದು ಅಸಲಿಯೋ ನಕಲಿಯೋ ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಾಗಿದೆ.

ಇತ್ತೀಚಿನ ದಿನಗಳಲ್ಲಿ ಈ ರೀತಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ, ಗದ್ದಲಕ್ಕೆ ಕಾರಣವಾಗುತ್ತಿವೆ. ಕೆಲದಿನಗಳ ಹಿಂದೆ ಐಶ್ವರ್ಯ ರೈ ಹಾಗೂ ಆಕೆಯ ಹಾಲುಗಲ್ಲದ ಮಗಳು ಆರಾಧ್ಯ ಬಚ್ಚನ್ ಫೋಟೋ ಎಂದು ಹೇಳಿ ಅವರ ಅಭಿಮಾನಿಗಳನ್ನು ಏಮಾರಿಸಲಾಗಿದೆ ಫೋಟೋ ತೇಲಿಬಂದಿತ್ತು.

ಈಗ ಸರಿದಾಡುತ್ತಿರುವ ಶಿಲ್ಪಾ ಶೆಟ್ಟಿ ಹಾಗೂ ಆಕೆಯ ಕಂದನ ಫೋಟೋ ಎಂಬ ಬಗ್ಗೆ ಸ್ವತಃ ಶಿಲ್ಪಾ ಶೆಟ್ಟಿ ಟ್ವೀಟಿಸಿದ್ದಾರೆ. "ನಾನು ಹಾಗೂ ನನ್ನ ಮಗನ ಫೋಟೋ ಎಂದು ಬಿಂಬಿಸಲಾಗಿರುವ ಚಿತ್ರವೊಂದು ಅಂತರ್ಜಾಲದಲ್ಲಿ ಸರಿದಾಡುತ್ತಿದೆ..."

ಆದರೆ ಈ ಫೋಟೋದಲ್ಲಿರುವುದು ನನ್ನ ಮಗನಲ್ಲ. ಒಂದು ವರ್ಷದ ಹಿಂದೆ ನನ್ನ ಸೋದರ ಮಗಳು ಶಯನಾ ಜೊತೆ ತೆಗೆಸಿಕೊಂಡ ಚಿತ್ರವದು" ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಈ ರೀತಿ ಹೇಳಿಕೆ ನೀಡುವ ಮೂಲಕ ಶಿಲ್ಪಾ ಬಹಳ ಒಳ್ಳೆ ಕೆಲಸ ಮಾಡಿದ್ದಾರೆ. ಇಲ್ಲದಿದ್ದರೆ ಈ ಫೋಟೋ ಇನ್ನೇನು ಅನಾಹುತ ಮಾಡುತ್ತಿತ್ತೋ ಏನೋ?

ಮೇ 21, 2012ರಂದು ಶಿಲ್ಪಾ ಶೆಟ್ಟಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಮಗುವಿಗೆ ಟ್ವಿಟ್ಟರ್ ನಲ್ಲೇ ನಾಮಕರಣ ಮಾಡಿದ್ದರು ಶಿಲ್ಪಾ ದಂಪತಿಗಳು. ತಮ್ಮ ಪುತ್ರನಿಗೆ ವಿಯಾನ್ ರಾಜ್ ಕುಂದ್ರ ಎಂದು ಹೆಸರಿಟ್ಟಿದ್ದರು. ವಿಯಾನ್ ಎಂದರೆ ಪರಿಪೂರ್ಣ ಜೀವನ/ಸಂಪೂರ್ಣ ಶಕ್ತಿ ಎಂದರ್ಥವಂತೆ.

ಶಿಲ್ಪಾ ಶೆಟ್ಟಿಗೆ ವಿಯಾನ್ ಚೊಚ್ಚಲ ಕಂದ. ಆದರೆ ರಾಜ್ ಕುಂದ್ರ ಮಾತ್ರ ತಂದೆಯಾಗುತ್ತಿರುವುದು ಇದೇ ಎರಡನೇ ಬಾರಿ. ಈ ಹಿಂದೆ ರಾಜ್‌ಗೆ ಮದುವೆಯಾಗಿತ್ತು, ಆತನ ಮೊದಲ ಪತ್ನಿಗೆ ಒಬ್ಬ ಮಗಳಿದ್ದಾಳೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಶಿಲ್ಪಾ ಶೆಟ್ಟಿ ಗರ್ಭಿಣಿ ಎಂಬ ಅಂಶ ಬಯಲಾಗಿತ್ತು. ಬಳಿಕ ಶಿಲ್ಪಾ ಶೆಟ್ಟಿ ಕೂಡ ಅಷ್ಟಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಎಲ್ಲೋ ಅಲ್ಲೊಂದು ಇಲ್ಲೊಂದು ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಂಡು ಸುದ್ದಿ ಮಾಡಿದ್ದರಷ್ಟೆ. (ಏಜೆನ್ಸೀಸ್)

English summary
Is this really Shilpa Shetty's new born son Viaan Raj Kundra? We thought the same when we saw this cute picture. But our happiness did not last for long when we came to know that the baby Shilpa Shetty's holding in her arms is Shilpa's niece Shyana.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada