»   » ಅನುಷ್ಕಾ ಶರ್ಮಾ ನಟಿಯಾಗಲು ಈ ಬಾಲಿವುಡ್ ಬ್ಯೂಟಿಯೇ ಕಾರಣ! ಯಾರದು?

ಅನುಷ್ಕಾ ಶರ್ಮಾ ನಟಿಯಾಗಲು ಈ ಬಾಲಿವುಡ್ ಬ್ಯೂಟಿಯೇ ಕಾರಣ! ಯಾರದು?

Posted By:
Subscribe to Filmibeat Kannada

ಯಾರೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಅವರಿಗೆ ಯಾರಾದರು ಒಬ್ಬರೂ ಚಿತ್ರರಂಗದ ಸೆಲೆಬ್ರಿಟಿಗಳು, ಅವರ ನಟನೆ ನೋಡಿ ಸ್ಫೂರ್ತಿಗೊಂಡಿರಲೇಬೇಕು. ಈ ಬಗ್ಗೆ ಹಲವು ಸೆಲೆಬ್ರಿಟಿಗಳು ಆಗಾಗ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹೇಳುತ್ತಿರುತ್ತಾರೆ. ಹಾಗೆಯೇ ಈಗ 'ಪಿಕೆ', 'ಸುಲ್ತಾನ್' ಗಳಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಅನುಷ್ಕಾ ಶರ್ಮಾ ತಾವು ಚಿತ್ರರಂಗಕ್ಕೆ ಬರಲು ಸ್ಫೂರ್ತಿ ಯಾರು ಎಂಬುದನ್ನು ಹೇಳಿದ್ದಾರೆ.

ಮನಮೋಹಕವಾಗಿದೆ 'ಜಬ್ ಹ್ಯಾರಿ ಮೆಟ್ ಸೆಜಲ್' ಟ್ರೈಲರ್

ಅನುಷ್ಕಾ ಶರ್ಮಾ, ತಾವು ಸಿನಿಮಾದಲ್ಲಿ ನಟಿಸಲು ಪ್ರೇರಣೆ ಬಾಲಿವುಡ್ ಬೆಬೋ ಕರೀನಾ ಕಪೂರ್ ಖಾನ್ ಎಂದು ಹೇಳಿದ್ದಾರೆ. ಅನುಷ್ಕಾ ಶರ್ಮಾ, ತಾವು ಪೋಷಕರೊಂದಿಗೆ ಅತಿ ಹೆಚ್ಚು ಫನ್ ಆಗಿರುವ 'ಜಬ್ ವಿ ಮೆಟ್' ಚಿತ್ರದಲ್ಲಿ ಕರೀನಾ ಕಪೂರ್ ಖಾನ್ ರ 'ಗೀತ್' ಪಾತ್ರವನ್ನು ನೋಡಿದ ನಂತರವೇ ನನಗೆ ಸಿನಿಮಾ ಜಗತ್ತು ಆಕರ್ಷಿತವಾಗಿದ್ದು' ಎಂದಿದ್ದಾರೆ. ಈ ಬಗ್ಗೆ 'ಜಬ್ ಹ್ಯಾರಿ ಮೆಟ್ ಸೆಜಲ್' ಚಿತ್ರದ ಟ್ರೈಲರ್ ಲಾಂಚ್ ವೇಳೆ ಮಾಧ್ಯಮ ಮಿತ್ರರೊಂದಿಗೆ ಹೇಳಿಕೊಂಡಿದ್ದಾರೆ.

It was Kareena Kapoor Khan who inspired Anushka Sharma to join Bollywood

ಕರೀನಾ ಕಪೂರ್ ಖಾನ್ ರ 'ಜಬ್ ವಿ ಮೆಟ್' ಚಿತ್ರವನ್ನು ಇಮ್ತಿಯಾಜ್ ಅಲಿ ರವರು ನಿರ್ದೇಶನ ಮಾಡಿದ್ದರು. ಈಗ 'ಜಬ್ ಹ್ಯಾರಿ ಮೆಟ್ ಸೆಜಲ್' ಚಿತ್ರವನ್ನು ಅವರೇ ನಿರ್ದೇಶನ ಮಾಡಿದ್ದು ಈ ಚಿತ್ರದಲ್ಲಿ ಅಭಿನಯಿಸಲು ಸಹ ಇಮ್ತಿಯಾಜ್ ರವರೇ ಕಾರಣ ಎಂದಿದ್ದಾರೆ ಅನುಷ್ಕಾ ಶರ್ಮಾ. ಈ ಚಿತ್ರದಲ್ಲಿ ಶಾರುಖ್ ಖಾನ್ ಅಭಿನಯಿಸಿದ್ದು, ಸಿನಿಮಾ ಆಗಸ್ಟ್ 4 ರಂದು ತೆರೆಕಾಣುತ್ತಿದೆ.

English summary
It was Kareena Kapoor Khan who inspired Anushka Sharma to join Bollywood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada