For Quick Alerts
  ALLOW NOTIFICATIONS  
  For Daily Alerts

  "ನಾನು ಸುರಸುಂದರಿ ಅಲ್ಲದೇ ಇರಬಹುದು.. ಆದರೆ ಅದು ಸತ್ಯ.. ಬೇಕಿದ್ರೆ ರಕ್ತದಲ್ಲಿ ಬರೆದು ಕೊಡ್ತೀನಿ": ಜಾನ್ವಿ ಕಪೂರ್

  |

  ಅತಿಲೋಕ ಸುಂದರಿ ಶ್ರೀದೇವಿ ಪುತ್ರಿ ಅಮ್ಮನ ಹಾದಿಯಲ್ಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾಳೆ. ದೊಡ್ಡ ಬ್ಯಾಕ್‌ಗ್ರೌಂಡ್ ಇದ್ದರೂ ತನ್ನ ಸ್ವಂತ ಪರಿಶ್ರಮದಿಂದ ಚಿತ್ರರಂಗದಲ್ಲಿ ಗುರ್ತಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದಾಳೆ. ಆದರೂ ನೆಪೋಟಿಸಂ ಟ್ರೋಲ್ ಮಾತ್ರ ತಪ್ಪುತ್ತಿಲ್ಲ. ಕಳೆದ ಕೆಲ ವರ್ಷಗಳಿಂದ ಬಾಲಿವುಡ್‌ನಲ್ಲಿ ನೆಪೋಟಿಸಂ ವಿಚಾರ ಭಾರೀ ರಾದ್ದಾಂತ ಸೃಷ್ಟಿಸಿದೆ. ಇದೇ ವಿಚಾರವಾಗಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟಿ ಜಾನ್ವಿ ಕಪೂರ್ ಪ್ರತಿಕ್ರಿಯಿಸಿದ್ದಾಳೆ.

  ನನ್ನ ಬಗ್ಗೆ ಸಾಕಷ್ಟು ಜನರಿಗೆ ದುರಭಿಮಾನ ಇದೆ. ನಾನು ಶ್ರೀದೇವಿ ಮಗಳು ಎಂದು ಬಂದು ಸ್ಟಾರ್‌ಡಮ್ ಪಡೆಯಬೇಕು ಎಂದುಕೊಂಡಿಲ್ಲ. ನಾನು ಸುರ ಸುಂದರಿಯೂ ಅಲ್ಲ, ನನಗೆ ಅದ್ಭುತ ಪ್ರತಿಭೆ ಕೂಡ ಇಲ್ಲದೇ ಇರಬಹುದು. ಆದರೆ ನಾನು ಶೂಟಿಂಗ್‌ ಸೆಟ್‌ನಲ್ಲಿ ಬಹಳ ಕಷ್ಟಪಡುತ್ತೇನೆ. ಅದೇ ಶ್ರಮದ ತತ್ವ ನಾನು ಚಿತ್ರರಂಗದಲ್ಲಿ ಬೆಳೆಯಲು ಸಹಾಯ ಮಾಡುತ್ತದೆ ಎಂದು ನಂಬಿದ್ದೇನೆ ಎಂದು ಜಾನ್ವಿ ಹೇಳಿದ್ದಾರೆ. ಸದ್ಯ ಬಾಲಿವುಡ್ ಬಿಂದಾಸ್ ಬೆಡಗಿಯ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

  ಕೇದರನಾಥದಲ್ಲಿ ಸಾರಾ ಹಾಗೂ ಜಾಹ್ನವಿ ಕಪೂರ್‌ಗೆ ಸಾವಿನ ಅನುಭವ ಆಗಿತ್ತಂತೆ!ಕೇದರನಾಥದಲ್ಲಿ ಸಾರಾ ಹಾಗೂ ಜಾಹ್ನವಿ ಕಪೂರ್‌ಗೆ ಸಾವಿನ ಅನುಭವ ಆಗಿತ್ತಂತೆ!

  2018ರಲ್ಲಿ ನಿರ್ಮಾಪಕ ಬೋನಿ ಕಪೂರ್ ಹಾಗೂ ನಟಿ ಶ್ರೀದೇವಿ ಮುದ್ದಿನ ಮಗಳು ಜಾನ್ವಿ ಕಪೂರ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಳು. ಕರಣ್‌ ಜೋಹರ್ ಆಕೆಯನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು. ತನಗೆ ಈ ಸ್ಥಾನ ಅದೃಷ್ಟದಿಂದ ಬಂದಿದ್ದಲ್ಲ. ಅದು ಕೆಲವರ ಊಹೆ ಅಷ್ಟೆ. ಇದೆಲ್ಲಾ ಅಷ್ಟು ಸುಲಭವಾಗಿ ಧಕ್ಕಿದ್ದಲ್ಲ ಎಂದು ಆಕೆ ವಿವರಿಸಿದ್ದಾಳೆ.

  ಬೇಕಿದ್ದರೆ ರಕ್ತದಲ್ಲಿ ಬರೆದು ಕೊಡುತ್ತೀನಿ- ಜಾನ್ವಿ

  ಬೇಕಿದ್ದರೆ ರಕ್ತದಲ್ಲಿ ಬರೆದು ಕೊಡುತ್ತೀನಿ- ಜಾನ್ವಿ

  "ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ತಾನು ಎಷ್ಟು ಕಷ್ಟಪಡುತ್ತೇನೆ ಎಂದು ತನ್ನ ರಕ್ತದಿಂದ ಬೇಕಿದ್ದರೆ ಬರೆದುಕೊಡುತ್ತೇನೆ. ನನ್ನ ಕೆಲಸದ ಬಗ್ಗೆ ಯಾರಿಗೂ ಅನುಮಾನವೇ ಬೇಡ. ನನಗೆ ಒಂದೇ ವಿಷಯವನ್ನು ಮತ್ತೆ ಮತ್ತೆ ಹೇಳುವುದು ಬೇಸರ ತರಿಸುತ್ತದೆ. ಗೊತ್ತಿರುವುದನ್ನು ಮತ್ತೆ ಗೊತ್ತು ಮಾಡುವುದು ಇಷ್ಡವಿಲ್ಲ. ನನಗಾಗಿ ನಾನು ಸವಾಲುಗಳನ್ನು ಸಿದ್ಧಪಡಿಸಿಕೊಳ್ಳುತ್ತೇನೆ. ನಾನು ಈಗಷ್ಟೆ ಚಿತ್ರರಂಗದಲ್ಲೇ ಬೆಳೆಯುತ್ತಿದ್ದೇನೆ ಎನ್ನು ಗೊತ್ತಿದೆ" ಜಾನ್ವಿ ಕಪೂರ್ ಹೇಳಿದ್ದಾಳೆ.

  ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್‌ಗೆ ಸದಾ ನಗಿಸುವ ಹುಡುಗನೇ ಬೇಕಂತೆ!ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್‌ಗೆ ಸದಾ ನಗಿಸುವ ಹುಡುಗನೇ ಬೇಕಂತೆ!

  ನಾನು ಸಮಯ ವ್ಯರ್ಥ ಮಾಡಿದಂತೆ ಅನ್ನಿಸುತ್ತದೆ

  ನಾನು ಸಮಯ ವ್ಯರ್ಥ ಮಾಡಿದಂತೆ ಅನ್ನಿಸುತ್ತದೆ

  "ನಾನು ಸುಖಾ ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೇನೆ ಎನಿಸುತ್ತದೆ. ನಮ್ಮ ತಾಯಿಯ ಸ್ಟಾರ್‌ಡಮ್‌ಗೆ ಯಾರು ಸಮನಾಗುತ್ತಾರೆ ಎಂದು ಯೋಚಿಸುವುದಿಲ್ಲ. ಆಕೆ ಸಿನಿಮಾ ಚಿತ್ರೀಕರಣ ಭಾಗಿ ಆಗುತ್ತಿದ್ದಾಗ, ಯಶಸ್ಸಿನ ತುತ್ತ ತುದಿಯಲ್ಲಿ ಇದ್ದಾಗ ನಾನು ಇರಲಿಲ್ಲ. ಆಕೆ ಸಿನಿಮಾಗಳಲ್ಲಿ ನಟಿಸುವುದನ್ನು ನಿಲ್ಲಿಸಿದ ಮೇಲೆ ನಾನು ಹುಟ್ಟಿದ್ದು. ಆದರೆ ಆಕೆಯ ಬಗ್ಗೆ ಸಿನಿಮಾಗಳು, ಪರ್ಫಾರ್ಮೆನ್ಸ್, ಆಕೆ ಸೆಟ್‌ನಲ್ಲಿ ಇದ್ದಾಗ ಮಾತನಾಡುತ್ತಿದ್ದ ವಿಧಾನ, ಆಕೆಯ ಸಹಕಾರದ ಬಗ್ಗೆ ಬಹಳ ಜನರು ಹೇಳಿದ್ದನ್ನು ಕೇಳಿ ನಾನು ತಿಳಿದುಕೊಂಡೆ" ಎಂದಿದ್ದಾಳೆ.

  ಜಾನ್ವಿ ಕಪೂರ್ 'ಮಿಲಿ' ಟೀಸರ್ ರಿಲೀಸ್

  ಜಾನ್ವಿ ಕಪೂರ್ 'ಮಿಲಿ' ಟೀಸರ್ ರಿಲೀಸ್

  ಸದ್ಯ ಜಾನ್ವಿ ಕಪೂರ್ ನಟನೆಯ 'ಮಿಲಿ' ಸಿನಿಮಾ ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಮಲಯಾಳಂನ 'ಹೆಲೆನ್' ಚಿತ್ರದ ರೀಮೆಕ್ ಆಗಿರುವ ಈ ಚಿತ್ರದಲ್ಲಿ ಜಾನ್ವಿ ಬಿಎಸ್ಸಿ ನರ್ಸಿಂಗ್ ಗ್ರಾಜ್ಯುಯೇಟ್ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ನಿರ್ಮಾಪಕ ಬೋನಿ ಕಪೂರ್ ಕೂಡ ನಟಿಸಿದ್ದು, ಮೊದಲ ಬಾರಿಗೆ ಜಾನ್ವಿ ತಂದೆ ಜೊತೆ ತೆರೆ ಹಂಚಿಕೊಂಡಿದ್ದಾಳೆ. ನವೆಂಬರ್ 4ಕ್ಕೆ 'ಮಿಲಿ' ಸಿನಿಮಾ ಬಿಡುಗಡೆ ಆಗಲಿದೆ.

  ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್

  ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್

  ಜಾನ್ವಿ ಕಪೂರ್ ಸಿನಿಮಾಗಳಲ್ಲಿ ನಟಿಸೋದು ಕಡಿಮೆ. ಈವರೆಗೆ ದೊಡ್ಡ ಬ್ರೇಕ್ ಸಿಕ್ಕಿಲ್ಲ. ಬಾಲಿವುಡ್ ಸ್ಟಾರ್‌ಗಳ ಜೊತೆ ನಟಿಸುವ ಅವಕಾಶ ಧಕ್ಕಿಲ್ಲ. ಇನ್ನು ಸೌತ್ ಸಿನಿಇಂಡಸ್ಟ್ರಿಗೆ ಎಂಟ್ರಿ ಕೊಡುವ ಬಗ್ಗೆಯೂ ಚರ್ಚೆ ನಡೀತಿದೆ. ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆದರೂ ಸದಾ ಹಾಟ್ ಹಾಟ್ ಫೋಟೊಶೂಟ್‌ಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಾರೆ.

  English summary
  Janhvi Kapoor reacts to people thinking she takes her position for granted. Know more.
  Wednesday, October 12, 2022, 22:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X