Don't Miss!
- News
ಫೇಸ್ಬುಕ್ ಪ್ರೀತಿ: ಉತ್ತರ ಪ್ರದೇಶದ ಯುವಕನನ್ನು ಮದುವೆಯಾಗಲು ಸ್ವೀಡನ್ನಿಂದ ಬಂದ ಯುವತಿ
- Sports
U-19 Women's T20 World Cup: ಭಾರತ vs ಇಂಗ್ಲೆಂಡ್ ಫೈನಲ್ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Lifestyle
ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Finance
7th Pay Commission update news: ಕೇಂದ್ರ ಬಜೆಟ್ನಲ್ಲಿ 8ನೇ ವೇತನ ಆಯೋಗದ ಬಗ್ಗೆ ಘೋಷಣೆ?
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜಾವೇದ್ ಅಖ್ತರ್‌ಗೆ ಈ ವಿವಾದಾತ್ಮಕ ನಟಿಯ ಜೀವನ ಕುರಿತು ಕತೆ ಬರೆಯಲು ಆಸೆ!
ಜಾವೇದ್ ಅಖ್ತರ್ ಬಾಲಿವುಡ್‌ನ ಹಿರಿಯ ಮತ್ತು ಅತ್ಯಂತ ಪ್ರತಿಭಾವಂತ ಗೀತ ರಚನೆಕಾರ ಮತ್ತು ಚಿತ್ರಕತೆ ಬರಹಗಾರ.
ಶೋಲೆ, ದೀವಾರ್ ಅಂಥವಾ ಹಲವಾರು ಎವರ್‌ಗ್ರೀನ್ ಸಿನಿಮಾಗಳಿಗೆ ಸಲೀಂ ಅವರೊಟ್ಟಿಗೆ ಸೇರಿ ಚಿತ್ರಕತೆ ಬರೆದಿದ್ದಾರೆ ಜಾವೇದ್ ಅಖ್ತರ್. ಅವರು ಬರೆದಿರುವ ಹಾಡುಗಳಂತೂ ಇನ್ನೂ ನೂರು ವರ್ಷಗಳಾದರೂ ಮರೆಯುವಂತಿಲ್ಲ.
ಮಾಜಿ ರಾಜ್ಯಸಭಾ ಸದಸ್ಯರೂ ಆಗಿರುವ ಜಾವೇದ್ ಅಖ್ತರ್ ಅವರಿಗೆ ಬಾಲಿವುಡ್‌ನ ವಿವಾದಾತ್ಮಕ ನಟಿಯೊಬ್ಬರ ಜೀವನದ ಬಗ್ಗೆ ಕತೆ-ಚಿತ್ರಕತೆ ಬರೆಯುವ ಆಸೆಯಂತೆ. ಜಾವೇದ್ ಅಖ್ತರ್ ಈ ನಟಿಯ ಜೀವನದ ಬಗ್ಗೆ ಆಸಕ್ತಿವಹಿಸಿರುವು ಹಲವರಿಗೆ ಆಶ್ಚರ್ಯ ತಂದಿದೆ.

'ನನ್ನ ಜೀವನ ಸಿನಿಮಾ ಮಾಡುವುದಾಗಿ ಹೇಳಿದ್ದರು ಜಾವೇದ್'
ಕೆಲವು ದಿನಗಳ ಹಿಂದಷ್ಟೆ ನಟಿ ರಾಖಿ ಸಾವಂತ್ ಹೇಳಿದ್ದರು. 'ನನ್ನ ಜೀವನದ ಬಗ್ಗೆ ಜಾವೇದ್ ಅಖ್ತರ್ ಸಿನಿಮಾ ಮಾಡಲು ಇಚ್ಛಿಸಿದ್ದಾರೆ' ಎಂದು. ರಾಖಿ ಅವರ ಈ ಹೇಳಿಕೆಯಿಂದ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೋಲ್ ಮಾಡಲಾಗಿತ್ತು.

ರಾಖಿ ಸಾವಂತ್ ಹೇಳಿರುವುದು ನಿಜ: ಜಾವೇದ್
ಆದರೆ ಈಗ ಸ್ವತಃ ಜಾವೇದ್ ಅಖ್ತರ್ ಅವರೇ ಇದನ್ನು ಸ್ಪಷ್ಟಪಡಿಸಿದ್ದಾರೆ. 'ರಾಖಿ ಸಾವಂತ್ ಹೇಳಿರುವುದು ಸತ್ಯ. ಕೆಲವು ವರ್ಷಗಳ ಹಿಂದೆ ಒಮ್ಮೆ ವಿಮಾನದಲ್ಲಿ ಆಕೆ ನನಗೆ ಸಿಕ್ಕಿದ್ದರು. ಆಗ ಆಕೆಯ ಬಾಲ್ಯದ ಬಗ್ಗೆ ನನಗೆ ಹೇಳಿದರು. ಆಗ ನಾನು ಹೇಳಿದ್ದೆ ನಿನ್ನ ಬಗ್ಗೆ ಸಿನಿಮಾ ಮಾಡುತ್ತೇನೆ ಎಂದು' ಎಂದಿದ್ದಾರೆ ಜಾವೇದ್ ಅಖ್ತರ್.

ನನ್ನ ಜೀವನ ಆಗುವುದು ನನಗೆ ಇಷ್ಟವಿಲ್ಲ: ರಾಖಿ
ನನ್ನ ಜೀವನ ಸಿನಿಮಾ ಆಗುವುದು ನನಗೆ ಇಷ್ಟವಿಲ್ಲ. ನನ್ನ ಜೀವನ ಸಾಕಷ್ಟು ವಿವಾದಾತ್ಮಕ. ಸಾಕಷ್ಟು ಜನರ ಹೆಸರು ನನ್ನಿಂದ ಹಾಳಾಗಬಹುದು. ನನ್ನ ಕತೆಯನ್ನು ನೋಡುವುದು ಜನರಿಗೆ ಇಷ್ಟ ಇದೆಯೋ ಇಲ್ಲವೋ ಗೊತ್ತಿಲ್ಲ ಎಂದಿದ್ದಾರೆ ರಾಖಿ ಸಾವಂತ್.

ಯಾವ ನಟಿ ರಾಖಿ ಪಾತ್ರ ಮಾಡಬೇಕು?
ನನ್ನ ಜೀವನ ಆಧರಿಸಿದ ಸಿನಿಮಾಕ್ಕೆ ಜಾವೇದ್ ಅವರು ಚಿತ್ರಕತೆ ಬರೆದರೆ ಅವರ ಮಗ ಫರ್ಹಾನ್ ಅಖ್ತರ್ ನಿರ್ದೇಶನ ಮಾಡಬೇಕು. ನಾನು, ಆಲಿಯಾ ಭಟ್, ದೀಪಿಕಾ ಪಡುಕೋಣೆ ಯಾರಾದರೂ ಆ ಸಿನಿಮಾದಲ್ಲಿ ನಟಿಸಬಹುದು. ನನ್ನನ್ನು ನನ್ನದೇ ಸಿನಿಮಾಕ್ಕೆ ಹಾಕಿಕೊಳ್ಳುವುದಿಲ್ಲ ಹಾಗಾಗಿ ಆಲಿಯಾ, ದೀಪಿಕಾ, ಕರೀನಾ ಯಾರಾದರೂ ನನ್ನ ಪಾತ್ರ ಮಾಡಿದರೆ ಸಂತೋಶ ಎಂದಿದ್ದಾರೆ ರಾಖಿ.