For Quick Alerts
  ALLOW NOTIFICATIONS  
  For Daily Alerts

  ಎರಡನೇ ಚಿತ್ರದಲ್ಲೇ ಐತಿಹಾಸಿಕ ಪಾತ್ರ ಮಾಡಲಿದ್ದಾರೆ ಜಾಹ್ನವಿ ಕಪೂರ್

  By Bharath Kumar
  |

  ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅಭಿನಯದ ಮೊದಲ ಸಿನಿಮಾ 'ಧಡಕ್' ಚಿತ್ರ ಅಷ್ಟಾಗಿ ಸದ್ದು ಮಾಡಿಲ್ಲ. ಆದ್ರೆ, ಬಾಕ್ಸ್ ಆಫೀಸ್ ನಲ್ಲಿ ತಕ್ಕ ಮಟ್ಟಿಗೆ ಕಲೆಕ್ಷನ್ ಮಾಡಿ ನಿರ್ಮಾಪಕರಿಗೆ ಸಮಾಧಾನ ನೀಡಿತ್ತು. ಇದಾದ ನಂತರ ಜಾಹ್ನವಿ ಯಾವ ಚಿತ್ರವನ್ನ ಮಾಡಲಿದ್ದಾರೆ ಎಂಬ ಕುತೂಹಲ ಬಾಲಿವುಡ್ ಮಂದಿಯನ್ನ ಕಾಡುತ್ತಿದೆ.

  ಹೀಗಿರುವಾಗ, ತಂದೆ ಬೋನಿ ಕಪೂರ್ ನಿರ್ಮಾಣ ಮಾಡಲಿರುವ ಚಿತ್ರದಲ್ಲಿ ಜಾಹ್ನವಿ ಅಭಿನಯಿಸಲಿದ್ದಾರೆ ಎನ್ನಲಾಗಿತ್ತು. ಆದ್ರೀಗ, ಶ್ರೀದೇವಿ ಪುತ್ರಿ ಮತ್ತೊಂದು ಸರ್ಪ್ರೈಸ್ ನೀಡಿದ್ದಾರೆ. ಜಾಹ್ನವಿ ತಮ್ಮ ಮುಂದಿನ ಚಿತ್ರವನ್ನ ಒಪ್ಪಿಕೊಂಡಿದ್ದು, ಈ ಚಿತ್ರದಲ್ಲಿ ಐತಿಹಾಸಿಕ ಪಾತ್ರವನ್ನ ಮಾಡಲಿದ್ದಾರೆ. ಈ ವಿಷ್ಯವನ್ನ ಸ್ವತಃ ನಿರ್ಮಾಪಕರೇ ಅಧಿಕೃತವಾಗಿ ಘೋಷಣೆ
  ಮಾಡಿದ್ದಾರೆ.

  ಹೌದು, ನಿರ್ಮಾಪಕ ಕರಣ್ ಜೋಹರ್ ಸಂಸ್ಥೆಯಲ್ಲಿ ಮೂಡಿ ಬರುತ್ತಿರುವ 'ತಖ್ತ್' ಚಿತ್ರದಲ್ಲಿ ಜಾಹ್ನವಿ ಕಪೂರ್ ಬಣ್ಣ ಹಚ್ಚಲಿದ್ದಾರೆ. ಈ ಚಿತ್ರದಲ್ಲಿ ಜಾಹ್ನವಿ ಮಾತ್ರವಲ್ಲದೇ ರಣ್ವೀರ್ ಸಿಂಗ್, ಕರೀನಾ ಕಪೂರ್ ಖಾನ್, ಆಲಿಯಾ ಭಟ್, ವಿಕ್ಕಿ ಕೌಶಲ್ ಕೂಡ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ.

  ಮೊದಲ ಸಿನಿಮಾ ಆಯ್ತು, ಜಾಹ್ನವಿ ಎರಡನೇ ಸಿನಿಮಾ ಯಾವುದು.? ಮೊದಲ ಸಿನಿಮಾ ಆಯ್ತು, ಜಾಹ್ನವಿ ಎರಡನೇ ಸಿನಿಮಾ ಯಾವುದು.?

  ಬಿಗ್ ಬಜೆಟ್ ಸಿನಿಮಾದಲ್ಲಿ ಜಾಹ್ನವಿ ನಟ ವಿಕ್ಕಿ ಕೌಶಲ್ ಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ವಿಕ್ಕಿ ಔರಂಗಜೇಬ್‌ ಪಾತ್ರದಲ್ಲಿ ನಟಿಸುವ ಸಾಧ್ಯತೆಯಿದ್ದು, ಜಾಹ್ನವಿ ಔರಂಗಜೇಬನ ಪತ್ನಿ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

  jhanvi kapoor second movie historical

  ಐತಿಹಾಸಿಕ ಸಿನಿಮಾದಲ್ಲಿ ಬಾಲಿವುಡ್ ಬ್ಯೂಟಿ ಆಲಿಯಾಐತಿಹಾಸಿಕ ಸಿನಿಮಾದಲ್ಲಿ ಬಾಲಿವುಡ್ ಬ್ಯೂಟಿ ಆಲಿಯಾ

  ಸದ್ಯ, ಈಗತಾನೆ ಚಿತ್ರಕ್ಕೆ ಕಲಾವಿದರು ಆಯ್ಕೆಯಾಗಿದ್ದು, ಚಿತ್ರೀಕರಣ ಆರಂಭವಾಗಬೇಕಿದೆ. ಎಲ್ಲ ಅಂದುಕೊಂಡಂತೆ ಆದ್ರೆ, 2020 ರಲ್ಲಿ ಈ ನಿರೀಕ್ಷೆಯ ಸಿನಿಮಾ ತೆರೆಕಾಣಲಿದೆ.

  English summary
  Bollywood producer Karan Johar who is known for being the godfather of star kids has booked Janhvi Kapoor for his next film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X