For Quick Alerts
  ALLOW NOTIFICATIONS  
  For Daily Alerts

  ಹಾಲಿವುಡ್ ಕಡೆ ಹಾರಿದ ದೇಸಿ ಬಾಯ್ಸ್ ಜೋಡಿ

  |

  ಬಾಲಿವುಡ್ ತಾರೆಯರು ಹಾಲಿವುಡ್ ಚಿತ್ರಗಳ ಕಡೆ ವಲಸೆಹೋಗುವುದು ಹೊಸ ವಿಷಯವೇನಲ್ಲ. ಆಗಾಗ ಕೆಲವರು 'ಇಲ್ಲಿದೆ ನಮ್ಮನೆ, ಅಲ್ಲಿಗೆ ಹೋಗಿದ್ದೆ ಸುಮ್ಮನೆ...' ಎನ್ನುವಂತೆ ಹೋಗಿ ನಟಿಸಿ ಬರುತ್ತಾರೆ. ಇದೀಗ ಹೊಸ ಸುದ್ದಿಯೆಂದರೆ ದೇಸಿ ಬಾಯ್ಸ್ ಜೋಡಿ ಜಾನ್ ಅಬ್ರಹಾಂ ಮತ್ತು ದೀಪಿಕಾ ಪಡುಕೋಣೆ ಸದ್ಯದಲ್ಲೇ ಹಾಲಿವುಡ್ ಕಡೆ ಹಾರುತ್ತಿದ್ದಾರೆ.

  ಹಾಲಿವುಡ್ ಚಿತ್ರ ನಿರ್ದೇಶಕ ಜಾನ್ ಕಾರ್ಟರ್ ಹೊಸ ಚಿತ್ರವೊಂದನ್ನು ನಿರ್ದೆಶಿಸಲಿದ್ದು ಅದನ್ನು 'ಹಿಂದಿ'ಯಲ್ಲಿ ಡಬ್ ಮಾಡಲಿದ್ದಾರೆ. ಆ ಚಿತ್ರದಲ್ಲಿ ನಟಿಸಲಿದ್ದಾರೆ ಜಾನ್ ಮತ್ತು ದೀಪಿಕಾ. ದೇಸಿ ಬಾಯ್ಸ್ ಚಿತ್ರದಲ್ಲಿ ಇವರಿಬ್ಬರ ನಟನೆಯನ್ನು ನೋಡಿರುವ ನಿರ್ದೇಶಕ ಜಾನ್ ಕಾರ್ಟರ್ ಅವರ ಹೊಸ ಚಿತ್ರದಲ್ಲಿ ನಟಿಸಲು ಆಹ್ವಾನಿಸಿದ್ದಾರೆ.

  ಒಟ್ಟಿನಲ್ಲಿ ಸಾಕಷ್ಟು ಬಾಲಿವುಡ್ ನಟರಿಗೆ ಮರೀಚಿಕೆಯಾಗಿರುವ ಹಾಲಿವುಡ್, ಜಾನ್ ಮತ್ತು ದೀಪಿಕಾರಿಗೆ ಬಾಗಿಲು ತೆರೆದಿದಂತಾಗಿದೆ. ಅದು ನೇರವಾದ ಹಾಲಿವುಡ್ ಪ್ರವೇಶ ಅಲ್ಲದಿದ್ದರೂ ಹಾಲಿವುಡ್ ಮೇಕಿಂಗ್ ಹಾಗೂ ಪ್ರಸಿದ್ಧಿ ಸಿಗುವುದರಿಂದ ಅದಕ್ಕೂ ಸಾಕಷ್ಟು ಅದೃಷ್ಟ ಮಾಡಿರಬೇಕು. (ಒನ್ ಇಂಡಿಯಾ ಕನ್ನಡ)

  English summary
  John Abraham, Deepika Padukone might pair in a Hollywood movie John Carter after Desi Boyz that was well appreciated for their sizzling chemistry.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X