Don't Miss!
- News
ಫಾರೆನ್ಸಿಕ್ ಕ್ಯಾಂಪಸ್ ಶಂಕುಸ್ಥಾಪನೆಗೆ ಆಗಮಿಸಲಿರುವ ಅಮಿತ್ ಶಾ: ಧಾರವಾಡದಲ್ಲಿ ಭಾರಿ ಬಿಗಿ ಭದ್ರತೆ
- Sports
Ind vs NZ1st T20: ವಾಶಿಂಗ್ಟನ್ 'ಸುಂದರ' ಆಟ ವ್ಯರ್ಥ: ಭಾರತಕ್ಕೆ ಮೊದಲ ಪಂದ್ಯದಲ್ಲೇ ಸೋಲಿನ ಆಘಾತ
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಜೋಶ್'ನಲ್ಲಿ ವಿಡಿಯೋ ಮಾಡಿ ಸಲ್ಮಾನ್ ಖಾನ್ ಭೇಟಿಯ ಅವಕಾಶ ಪಡೆದ ಭೂಮಿಕಾ ಮೋದಿ
ಭಾರತದ ಜನಪ್ರಿಯ ಹಾಗೂ ವೇಗವಾಗಿ ಪ್ರಗತಿ ಸಾಧಿಸುತ್ತಿರುವ ಕಿರು ವಿಡಿಯೋ ಅಪ್ಲಿಕೇಶನ್ 'ಜೋಶ್'. ಪ್ರಾರಂಭವಾದಾಗಿನಿಂದಲೂ ಕಿರು ವಿಡಿಯೋ ವಿಭಾಗದಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸುತ್ತಾ, ಹಲವು ಹೊಸತುಗಳನ್ನು ಪರಿಚಯಿಸುತ್ತಾ ಸಾಗುತ್ತಿದೆ. ಭಿನ್ನ-ಭಿನ್ನ ಭಾಷೆಗಳಲ್ಲಿ ಅತ್ಯುತ್ತಮ ಕಿರು ವಿಡಿಯೋಗಳನ್ನು ನೀಡುತ್ತಿರುವ ಜೊತೆಗೆ ಪ್ರತಿಭಾವಂತ ಕಂಟೆಂಟ್ ಕ್ರಿಯೇಟರ್‌ಗಳಿಗೆ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಒದಗಿಸುತ್ತಿದೆ. ದೇಸಿ ಕಿರು ವಿಡಿಯೋ ಅಪ್ಲಿಕೇಶನ್ 'ಜೋಶ್'ನಲ್ಲಿ ಇನ್ನೂ ಅಸಂಖ್ಯ ಜನರಿಗೆ ಅವಕಾಶಗಳಿವೆ.
ಪ್ರತಿಭಾ ಸಾಗರವೇ ಆಗಿರುವ 'ಜೋಶ್' ಕಿರು ವಿಡಿಯೋ ಅಪ್ಲಿಕೇಶನ್‌ನಲ್ಲಿ ಟಾಪ್ ಕಂಟೆಂಟ್ ಕ್ರಿಯೇಟರ್‌ಗಳಲ್ಲಿ ಒಬ್ಬರಾಗಿರುವ ಭೂಮಿಕಾ ಮೋದಿಗೆ ಜಾಕ್‌ಪಾಟ್ ಹೊಡೆದಿದೆ. ಹಿಂದಿ ವಿಡಿಯೋ ಕಂಟೆಂಟ್ ಕ್ರಿಯೇಟರ್‌ಗಳ ವಿಭಾಗದಲ್ಲಿ ಬಹುಜನಪ್ರಿಯರಾಗಿರುವ ಭೂಮಿಕಾ ಮೋದಿಗೆ ಇಂಟರ್‌ನ್ಯಾಷನಲ್ ಇಂಡಿಯನ್ ಫಿಲಂ ಅಕಾಡೆಮಿ (ಐಫಾ) ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಭಾಗವಹಿಸುವ ಸುವರ್ಣಾವಕಾಶ ಅರಸಿ ಬಂದಿದೆ. ಜುಲೈ 2 ರಿಂದ 4 ರವರೆಗೆ ಅಬುದಬಿಯಲ್ಲಿ ನಡೆಯಲಿರುವ ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಭೂಮಿಕಾ ಮೋದಿ, ಅಲ್ಲಿ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅನ್ನು ಭೇಟಿಯಾಗಿ ಮಾತುಕತೆ ಸಹ ನಡೆಸಲಿದ್ದಾರೆ.

ವೃತ್ತಿಯಲ್ಲಿ ಜುಂಬಾ ತರಬೇತುಧಾರಿಣಿ ಆಗಿರುವ ಭೂಮಿಕಾ ಮೋದಿ, ಸ್ಪೂರ್ತಿಧಾಯಕ ಭಾಷಣಕಾರ್ತಿ ಹಾಗೂ ರಂಗಭೂಮಿ ನಟಿ ಸಹ ಆಗಿದ್ದಾರೆ. ಮಿಸೆಸ್ ಮಹಾರಾಷ್ಟ್ರ (2017), 2019 ರಲ್ಲಿ ಮಿಸೆಸ್ ಇಂಡಿಯಾ ಸೇರಿದಂತೆ ಗುಜರಾತ್‌ನ ಮೊದಲ ಗರ್ಬಾ ಕ್ವೀನ್ ಆಗಿ ಸಹ ಹೆಸರು ಮಾಡಿದ್ದಾರೆ. ಜೊತೆಗೆ ಮಾಧುರಿ ದೀಕ್ಷಿತ್, ಮಲೈಕಾ ಅರೋರ ಇನ್ನಿತರೆ ಸ್ಟಾರ್ ನಟಿಯರೊಟ್ಟಿಗೆ ಜಾಹೀರಾತುಗಳಲ್ಲಿ ಸಹ ಭೂಮಿಕಾ ಮೋದಿ ಕಾಣಿಸಿಕೊಂಡಿದ್ದಾರೆ. ಮದರ್ ಥೆರೆಸಾ ಹಾಗೂ ದಾದಾ ಸಾಹೆಬ್ ಫಾಲ್ಕೆ ಪ್ರಶಸ್ತಿ ವಿಜೇತೆಯೂ ಆಗಿರುವ ಭೂಮಿಕಾ, 'ಜೋಶ್' ಕಿರು ವಿಡಿಯೋ ಆಪ್‌ನಲ್ಲಿ ಬಹಳ ಸಕ್ರಿಯರಾಗಿರುವ ಭೂಮಿಕಾ, ಹಲವು ಬ್ರ್ಯಾಂಡ್‌ಗಳೊಟ್ಟಿಗೆ ಹಾಗೂ ಇತರೆ ಕಂಟೆಂಟ್ ಕ್ರಿಯೇಟರ್‌ಗಳೊಟ್ಟಿಗೆ ಕೊಲ್ಯಾಬರೇಷನ್ ಸಹ ಮಾಡಿದ್ದಾರೆ. ಭೂಮಿಕಾ, ಫ್ಯಾಷನ್, ಡ್ಯಾನ್ಸ್ ಹಾಗೂ ಸೌಂದರ್ಯ ಟಿಪ್ಸ್ ಬಗ್ಗೆ ಹೆಚ್ಚು ವಿಡಿಯೋಗಳನ್ನು ಮಾಡುತ್ತಾರೆ.
'''ನನ್ನ ಹೆಸರಿನೊಟ್ಟಿಗೆ ಮೋದಿ ಎಂದಿರುವುದಕ್ಕೆ ನನಗೆ ಹೆಮ್ಮೆ ಇದೆ. ಏಕೆಂದರೆ ನನಗೂ 'ಅಚ್ಚೆ ದಿನ್ ಆಯೆಂಗೇ' ಎಂಬುದರಲ್ಲಿ ವಿಶ್ವಾಸಿವೆ. ನಾನು ನನ್ನ ಕೆಲಸದ ವಿಚಾರದಲ್ಲಿ ಬಹಳ ಸಮಯಪ್ರಜ್ಞೆ ಉಳ್ಳವಳು. ತಾಯಿಯಾಗಿರುವ ನಾನು ತಾಯಿಯ ಜವಾಬ್ದಾರಿಯನ್ನು ಪೂರೈಸಿ ಬೇರೆ ಚಟುವಟಿಕೆಗಳ ಕಡೆಗೆ ಗಮನ ಹರಿಸುತ್ತೇನೆ. ನಾನು ನನ್ನ ಎಲ್ಲ ಕೆಲಸಗಳನ್ನು ಜವಾಬ್ದಾರಿಯಿಂದ ನಿರ್ವಹಿಸುತ್ತೇನೆ. ತಾಯಿಯಾಗಿ, ಹೆಂಡತಿಯಾಗಿ ನನ್ನ ಕರ್ತವ್ಯಗಳನ್ನು ನಿರ್ವಹಿಸುವ ಜೊತೆಗೆ ನೃತ್ಯಗಾರ್ತಿಯಾಗಿ ಅದನ್ನೂ ಮುಂದುವರೆಸಿಕೊಂಡು ಹೋಗುತ್ತಿದ್ದೇನೆ. ನಾನು ಕರ್ಮದ ಶಕ್ತಿಯನ್ನು ನಂಬುತ್ತೇನೆ. ನೀವು ಏನು ನೀಡುತ್ತೀರಿ ಅದೇ ನಿಮಗೂ ಸಿಗುತ್ತದೆ. ಆದ್ದರಿಂದ ನಾನು ದೇವರ ಶಕ್ತಿಯನ್ನು ನಂಬುತ್ತೇನೆ ಮತ್ತು ನನ್ನ ಸುತ್ತಲೂ ಸಂತೋಷ ಮತ್ತು ಪ್ರೀತಿಯನ್ನು ಹರಡಲು ಇಷ್ಟಪಡುತ್ತೇನೆ. ನಾನು ಜನರ ಬಗ್ಗೆ ಸಹಾನುಭೂತಿ ಹೊಂದಿದ್ದೇನೆ. ನನ್ನ ಜೀವನದ ಧ್ಯೇಯವೆಂದರೆ ನನ್ನ ಸುತ್ತಲೂ ಸಾಕಷ್ಟು ಪ್ರೀತಿ, ಸಂತೋಷ ಮತ್ತು ಸಕಾರಾತ್ಮಕತೆಯನ್ನು ಹರಡುವುದು'' ಎಂದಿದ್ದಾರೆ ಭೂಮಿಕಾ ಮೋದಿ.
''ಜೋಶ್' ಜೊತೆಗಿನ ನನ್ನ ಪ್ರಯಾಣ ತುಂಬಾ ಅದ್ಭುತವಾಗಿದೆ. ಉತ್ತಮ ಸಾಮರ್ಥ್ಯವುಳ್ಳವರಿಗೆ, ಪ್ರತಿಭೆ ಇದ್ದವರಿಗೆ ಇದು ದೊಡ್ಡ ವೇದಿಕೆಯಾಗಿದೆ. ಜೋಶ್‌ನೊಂದಿಗಿನ ನನ್ನ ಪ್ರಯಾಣವು ಬಹಳ ಚೆನ್ನಾಗಿದೆ. ನನ್ನ ಪ್ರತಿಭೆಯನ್ನು ಸುಧಾರಿಸುವಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ಜೋಶ್ ವಹಿಸಿದೆ. ಜೊತೆಗೆ ನನ್ನ ಕಂಟೆಂಟ್ ಮೂಲಕ ಹಲವರನ್ನು ತಲುಪುವ ಅವಕಾಶ ಮಾಡಿಕೊಟ್ಟಿದೆ ಎಂದಿದ್ದಾರೆ ಭೂಮಿಕಾ.
ಬ್ರ್ಯಾಂಡ್ ಕೊಲಾಬರೇಶನ್‌ಗಳಿಂದ ನೀವು ಕಲಿತದ್ದೇನು? ಎಂಬ ಪ್ರಶ್ನೆಗೆ ಉತ್ತರಿಸಿರುವ ಭೂಮಿಕಾ ಮೋದಿ, ''ಬ್ರ್ಯಾಂಡ್ ಕೊಲ್ಯಾಬರೇಷನ್‌ಗಳಿಂದ ನಾನು ಸಾಕಷ್ಟು ಕಲಿತೆ. ಹೊಸ-ಹೊಸ ಬ್ರ್ಯಾಂಡ್‌ಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಯಿತು. ವಿವಿಧ ಕಂಟೆಂಟ್ ಕ್ರಿಯೇಟರ್‌ಗಳ ಜೊತೆಗೆ ಕೊಲ್ಯಾಬರೇಷನ್ ಮಾಡಿಕೊಳ್ಳುವ ಮೂಲಕ ಇನ್ನಷ್ಟು ಕಲಿಯಲು ಸಾಧ್ಯವಾಯಿತು. ಕೊಲ್ಯಾಬ್ರೇಷನ್‌ಗಳು ನನ್ನ ಫಾಲೋವರ್‌ಗಳನ್ನು ಹೆಚ್ಚು ಮಾಡಿಕೊಳ್ಳಲು ಸಹಾಯ ಮಾಡಿದವು'' ಎಂದಿದ್ದಾರೆ ಭೂಮಿಕಾ ಮೋದಿ.