Don't Miss!
- Lifestyle
Horoscope Today 1 Feb 2023: ಬುಧವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ವಿವೋ Y100; ಖರೀದಿಗೆ ಕ್ಯೂ ಖಚಿತ!
- News
ಇಂದಿರಾ, ರಾಜೀವ್ ಗಾಂಧಿ ಹತ್ಯೆ ಆಕಸ್ಮಿಕ: ಉತ್ತರಖಂಡ ಸಚಿವ ವಿವಾದ
- Automobiles
ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ
- Sports
ಕೌಂಟಿ ಚಾಂಪಿಯನ್ಶಿಪ್: ಲೂಸಿಸ್ಟರ್ಶೈರ್ ಪರ ಆಡಲಿದ್ದಾರೆ ಅಜಿಂಕ್ಯಾ ರಹಾನೆ
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಜೋಶ್' ಅಪ್ಲಿಕೇಶನ್‌ನಲ್ಲಿ ಹವಾ ಎಬ್ಬಿಸುತ್ತಿರುವ ಮೋದಿ ಭಕ್ತೆ ಭೂಮಿಕಾ ಮೋದಿ
ಭಾರತದ ಅತ್ತುತ್ತಮ ಕಿರು ವಿಡಿಯೋ ಅಪ್ಲಿಕೇಶನ್ ಆಗಿರುವ 'ಜೋಶ್'ನಲ್ಲಿ ಸಾವಿರಾರು ಮಂದಿ ಕಂಟೆಂಟ್ ಕ್ರಿಯೇಟರ್‌ಗಳು ತಮ್ಮ ಪ್ರತಿಭಾ ಪ್ರದರ್ಶನ ಮಾಡುತ್ತಿದ್ದಾರೆ.
ಡ್ಯಾನ್ಸ್, ಹಾಸ್ಯ, ಆರೋಗ್ಯ, ಫಿಟ್‌ನೆಸ್, ಪ್ಯಾಷನ್, ಅಡುಗೆ ಇನ್ನಿತರೆ ವಿಷಯಗಳ ಬಗ್ಗೆ ವಿಡಿಯೋಗಳನ್ನು ಮಾಡಿ ಜೋಶ್‌ನಲ್ಲಿ ಹಂಚಿಕೊಂಡು ಫಾಲೋವರ್‌ಗಳನ್ನು, ಲೈಕ್‌ಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅದರಲ್ಲಿ ಒಬ್ಬರು ಭೂಮಿಕಾ ಮೋದಿ.
ಭೂಮಿಕಾ ಮೋದಿ, 'ಜೋಶ್' ಕಿರು ವಿಡಿಯೋ ಅಪ್ಲಿಕೇಶನ್‌ನ ಜನಪ್ರಿಯ ಕಂಟೆಂಟ್ ಕ್ರಿಯೇಟರ್‌ಗಳಲ್ಲಿ ಒಬ್ಬರು ಭೂಮಿಕಾ ಮೋದಿ. ಅತ್ಯುತ್ತಮ ಡ್ಯಾನ್ಸರ್ ಆಗಿರುವ ಭೂಮಿಕಾ ಮೋದಿ ಜೋಶ್‌ನಲ್ಲಿ ಹಲವು ಮಾದರಿ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ, ಅದರಲ್ಲಿ ಹೆಚ್ಚಿಗೆ ಹಾಕಿರುವ ವಿಡಿಯೋದಲ್ಲಿ ಡ್ಯಾನ್ಸ್ ಪ್ರಮುಖವಾಗಿದೆ.
ಜುಂಬಾ ಟ್ರೈನರ್, ಸ್ಪೂರ್ತಿಧಾಯಕ ಭಾಷಣಕಾರ, ನಟಿ ಸಹ ಆಗಿರುವ ಭೂಮಿಕಾರ ವಿಡಿಯೋಗಳು ಸಾವಿರಾರು ಲೈಕ್ಸ್‌ಗಳನ್ನು, ಕಮೆಂಟ್‌ಗಳನ್ನು ಪಡೆದುಕೊಂಡಿವೆ. 'ಗುಜರಾತ್ ಗರ್ಬಾ ಕ್ವೀನ್', ಮಿಸೆಸ್ ಮಹಾರಾಷ್ಟ್ರ, ಮಿಸೆಸ್ ಇಂಡಿಯಾ ಸೇರಿದಂತೆ ಹಲವು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದಿದ್ದಾರೆ. ಜೊತೆಗೆ ಬಾಲಿವುಡ್‌ನ ಖ್ಯಾತ ನಟಿಯರಾದ ಮಾಧುರಿ ದೀಕ್ಷಿತ್, ಮಲೈಕಾ ಅರೋರಾ ಇನ್ನೂ ಕೆಲವರೊಟ್ಟಿಗೆ ಜಾಹೀರಾತುಗಳಲ್ಲಿ ಸಹ ನಟಿಸಿದ್ದಾರೆ ಭೂಮಿಕಾ. 'ಜೋಶ್' ಅಪ್ಲಿಕೇಶನ್‌ನಲ್ಲಿ ಬಹಳ ಸಕ್ರಿಯವಾಗಿರುವ ಭೂಮಿಕಾ, ಹಲವು ಸಂಸ್ಥೆಗಳೊಟ್ಟಿಗೆ ಕೊಲ್ಯಾಬ್ರೇಶನ್ ಮಾಡಿದ್ದಾರೆ, ಇತರೆ ಕಂಟೆಂಟ್ ಕ್ರಿಯೇಟರ್‌ಗಳ ಜೊತೆಗೂ ಕೊಲಾಬರೇಷನ್ ಮಾಡಿದ್ದಾರೆ.
''ನನ್ನ ಹೆಸರಿನೊಟ್ಟಿಗೆ ಮೋದಿ ಎಂದಿರುವುದಕ್ಕೆ ನನಗೆ ಹೆಮ್ಮೆ ಇದೆ. ಏಕೆಂದರೆ ನನಗೂ 'ಅಚ್ಚೆ ದಿನ್ ಆಯೆಂಗೇ' ಎಂಬುದರಲ್ಲಿ ವಿಶ್ವಾಸಿವೆ. ನಾನು ನನ್ನ ಕೆಲಸದ ವಿಚಾರದಲ್ಲಿ ಬಹಳ ಸಮಯಪ್ರಜ್ಞೆ ಉಳ್ಳವಳು. ತಾಯಿಯಾಗಿರುವ ನಾನು ತಾಯಿಯ ಜವಾಬ್ದಾರಿಯನ್ನು ಪೂರೈಸಿ ಬೇರೆ ಚಟುವಟಿಕೆಗಳ ಕಡೆಗೆ ಗಮನ ಹರಿಸುತ್ತೇನೆ.
''ನಾನು ನನ್ನ ಎಲ್ಲ ಕೆಲಸಗಳನ್ನು ಜವಾಬ್ದಾರಿಯಿಂದ ನಿರ್ವಹಿಸುತ್ತೇನೆ. ತಾಯಿಯಾಗಿ, ಹೆಂಡತಿಯಾಗಿ ನನ್ನ ಕರ್ತವ್ಯಗಳನ್ನು ನಿರ್ವಹಿಸುವ ಜೊತೆಗೆ ನೃತ್ಯಗಾರ್ತಿಯಾಗಿ ಅದನ್ನೂ ಮುಂದುವರೆಸಿಕೊಂಡು ಹೋಗುತ್ತಿದ್ದೇನೆ'' ಎಂದಿದ್ದಾರೆ ಭೂಮಿಕಾ ಮೋದಿ.

ಪ್ರೀತಿ, ಸಂತೋಶ ಹರಡಿಸುವುದು ಇಷ್ಟ: ಭೂಮಿಕಾ
''ನಾನು ಕರ್ಮದ ಶಕ್ತಿಯನ್ನು ನಂಬುತ್ತೇನೆ. ನೀವು ಏನು ನೀಡುತ್ತೀರಿ ಅದೇ ನಿಮಗೂ ಸಿಗುತ್ತದೆ. ಆದ್ದರಿಂದ ನಾನು ದೇವರ ಶಕ್ತಿಯನ್ನು ನಂಬುತ್ತೇನೆ ಮತ್ತು ನನ್ನ ಸುತ್ತಲೂ ಸಂತೋಷ ಮತ್ತು ಪ್ರೀತಿಯನ್ನು ಹರಡಲು ಇಷ್ಟಪಡುತ್ತೇನೆ. ನಾನು ಜನರ ಬಗ್ಗೆ ಸಹಾನುಭೂತಿ ಹೊಂದಿದ್ದೇನೆ. ನನ್ನ ಜೀವನದ ಧ್ಯೇಯವೆಂದರೆ ನನ್ನ ಸುತ್ತಲೂ ಸಾಕಷ್ಟು ಪ್ರೀತಿ, ಸಂತೋಷ ಮತ್ತು ಸಕಾರಾತ್ಮಕತೆಯನ್ನು ಹರಡುವುದು.

ಪ್ರತಿಭಾವಂತರಿಗೆ ಒಳ್ಳೆಯ ವೇದಿಕೆ ಜೋಶ್: ಭೂಮಿಕಾ
''ಜೋಶ್' ಜೊತೆಗಿನ ನನ್ನ ಪ್ರಯಾಣ ತುಂಬಾ ಅದ್ಭುತವಾಗಿದೆ. ಉತ್ತಮ ಸಾಮರ್ಥ್ಯವುಳ್ಳವರಿಗೆ, ಪ್ರತಿಭೆ ಇದ್ದವರಿಗೆ ಇದು ದೊಡ್ಡ ವೇದಿಕೆಯಾಗಿದೆ. ಜೋಶ್‌ನೊಂದಿಗಿನ ನನ್ನ ಪ್ರಯಾಣವು ಬಹಳ ಚೆನ್ನಾಗಿದೆ. ನನ್ನ ಪ್ರತಿಭೆಯನ್ನು ಸುಧಾರಿಸುವಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ಜೋಶ್ ವಹಿಸಿದೆ. ಜೊತೆಗೆ ನನ್ನ ಕಂಟೆಂಟ್ ಮೂಲಕ ಹಲವರನ್ನು ತಲುಪುವ ಅವಕಾಶ ಮಾಡಿಕೊಟ್ಟಿದೆ ಎಂದಿದ್ದಾರೆ ಭೂಮಿಕಾ.

ಬ್ರ್ಯಾಂಡ್ ಕೊಲ್ಯಾರೇಶನ್‌ನಿಂದ ಸಾಕಷ್ಟು ಸಹಾಯ
ಬ್ರ್ಯಾಂಡ್ ಕೊಲಾಬರೇಶನ್‌ನಿಂದಾಗಿ ನಾನು ಸಾಕಷ್ಟು ಕಲಿತೆ. ಹೊಸ-ಹೊಸ ಬ್ರ್ಯಾಂಡ್‌ಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಯಿತು. ವಿವಿಧ ಕಂಟೆಂಟ್ ಕ್ರಿಯೇಟರ್‌ಗಳ ಜೊತೆಗೆ ಕೊಲ್ಯಾಬರೇಷನ್ ಮಾಡಿಕೊಳ್ಳುವ ಮೂಲಕ ಇನ್ನಷ್ಟು ಕಲಿಯಲು ಸಾಧ್ಯವಾಯಿತು. ಕೊಲ್ಯಾಬ್ರೇಷನ್‌ಗಳು ನನ್ನ ಫಾಲೋವರ್‌ಗಳನ್ನು ಹೆಚ್ಚು ಮಾಡಿಕೊಳ್ಳಲು ಸಹಾಯ ಮಾಡಿದವು'' ಎಂದಿದ್ದಾರೆ ಭೂಮಿಕಾ ಮೋದಿ.