For Quick Alerts
  ALLOW NOTIFICATIONS  
  For Daily Alerts

  ಮೊದಲ ದಿನದ ಗಳಿಕೆಯಲ್ಲಿ ಅಬ್ಬರಿಸಿ ಬೊಬ್ಬಿರಿದ 'ಕಬೀರ್ ಸಿಂಗ್'

  |

  ತೆಲುಗು ಬ್ಲಾಕ್ ಬಸ್ಟರ್ ಸಿನಿಮಾ ಅರ್ಜುನ್ ರೆಡ್ಡಿ ಹಿಂದಿ ರೀಮೇಕ್ ಕಬೀರ್ ಸಿಂಗ್ ಶುಕ್ರವಾರ ಜಗತ್ತಿನಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ. ಭಾರತದಲ್ಲಿ 3 ಸಾವಿರ ಹಾಗೂ ಹೊರ ದೇಶದಲ್ಲಿ 500 ಸೇರಿದಂತೆ ಸುಮಾರು 3500ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಶಾಹೀದ್ ಕಪೂರ್ ಸಿನಿಮಾ ಬಿಡುಗಡೆಯಾಗಿದೆ.

  ಸಿನಿಮಾಗೂ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅರ್ಜುನ್ ರೆಡ್ಡಿ ಚಿತ್ರದ ದೃಶ್ಯಗಳನ್ನೇ ಕಾಪಿ ಪೇಸ್ಟ್ ಮಾಡಿದ್ದಾರೆ, ಏನೂ ಬದಲಾವಣೆ ಇಲ್ಲ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ರೆ, ಶಾಹೀದ್ ಕಪೂರ್ ಪರ್ಫಾಮೆನ್ಸ್ ಚಿಂದಿ ಎಂದು ಉಳಿದವರು ಖುಷಿಯಾಗಿದ್ದಾರೆ.

  ಪದೇ ಪದೇ ಸುದ್ದಿಯಾಗುತ್ತಿರುವ ಶ್ರೀದೇವಿ ಮಗಳು: ಯಾಕೆ?

  ಈ ಮಧ್ಯೆ ಕಬೀರ್ ಸಿಂಗ್ ಬಾಕ್ಸ್ ಆಫೀಸ್ ನಲ್ಲಿ ಹೇಗೆ ಬಿಸಿನೆಸ್ ಮಾಡಿದ್ದಾನೆ ಎಂಬ ಕುತೂಹಲ, ನಿರೀಕ್ಷೆ ಹೆಚ್ಚಿತ್ತು. ನಿರೀಕ್ಷೆಯಂತೆ ಮೊದಲ ದಿನದ ಗಳಿಕೆಯಲ್ಲಿ ಕಬೀರ್ ಸಿಂಗ್ ಅಬ್ಬರಿಸಿದ್ದಾನೆ.

  ಮೊದಲ ದಿನ ಗಳಿಕೆಯಲ್ಲಿ 20.21 ಕೋಟಿ ಗಳಿಸುವ ಮೂಲಕ ಶಾಹೀದ್ ಕಪೂರ್ ವೈಯಕ್ತಿಕವಾಗಿ ದಾಖಲೆ ಬರೆದಿದ್ದಾರೆ. ಈ ಹಿಂದೆ ಶಾಹೀದ್ ಕಪೂರ್, ದಿಪೀಕಾ ಪಡುಕೋಣೆ ನಟನೆಯ 'ಪದ್ಮಾವತ್' ಸಿನಿಮಾ ಮೊದಲ ದಿನ 19 ಕೋಟಿ ಗಳಿಸಿತ್ತು. ಈಗ ಕಬೀರ್ ಸಿಂಗ್ ಆ ದಾಖಲೆ ಹಿಂದಿಕ್ಕಿ, ಶಾಹೀದ್ ಕಪೂರ್ ಗೆ ಒಳ್ಳೆಯ ಇಮೇಜ್ ತಂದುಕೊಟ್ಟಿದೆ.

  ಸಲ್ಮಾನ್ ಖಾನ್ ಕ್ರೇಸಿ ಸ್ಟಂಟ್ ಗೆ ಅಭಿಮಾನಿಗಳು ಫಿದಾ

  ಇನ್ನುಳಿದಂತೆ ಅರ್ಜುನ್ ರೆಡ್ಡಿ ಸಿನಿಮಾ ನಿರ್ದೇಶನ ಮಾಡಿದ್ದ ಸಂದೀಪ್ ವಂಗಾ ಅವರೇ ಕಬೀರ್ ಸಿಂಗ್ ಗೂ ಆಕ್ಷನ್ ಕಟ್ ಹೇಳಿದ್ದಾರೆ. ವಿಜಯ್ ದೇವರಕೊಂಡ ನಿರ್ವಹಿಸಿದ್ದ ಪಾತ್ರವನ್ನ ಶಾಹೀದ್ ಕಪೂರ್, ಶಾಲಿನಿ ಪಾಂಡೆ ನಿರ್ವಹಿಸಿದ್ದ ಪಾತ್ರವನ್ನ ಕಿಯಾರ ಅಡ್ವಾನಿ ನಟಿಸಿದ್ದಾರೆ.

  English summary
  Bollywood actor shahid kapoor and kiara advani starrer Kabir Singh is terrific on Day 1 with collection of 20.01 crore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X