ಮುಂದುವರಿದ 'ಕಬೀರ್ ಸಿಂಗ್' ಅಬ್ಬರ: ಮೂರನೇ ದಿನ ಗಳಿಸಿದ್ದೆಷ್ಟು?

ತೆಲುಗು ಸೂಪರ್ ಹಿಟ್ ಸಿನಿಮಾ ಅರ್ಜುನ್ ರೆಡ್ಡಿ ಚಿತ್ರದ ಹಿಂದಿ ರೀಮೇಕ್ ಕಬೀರ್ ಸಿಂಗ್ ಬಾಲಿವುಡ್ ನಲ್ಲಿ ಅಬ್ಬಿಸುತ್ತಿದೆ. ಮೊದಲ ದಿನ 20 ಕೋಟಿ ಗಳಿಸಿದ್ದ ಶಾಹೀದ್ ಕಪೂರ್ ಸಿನಿಮಾ, ವಾರಾಂತ್ಯದಲ್ಲಿ ಗಳಿಕೆ ಹೆಚ್ಚಿಸಿಕೊಂಡಿದೆ.

ಶುಕ್ರವಾರ 20.21 ಕೋಟಿ, ಶನಿವಾರ 22.71 ಕೋಟಿ, ಭಾನುವಾರ 27.91 ಕೋಟಿ ಗಳಿಸುವ ಮೂಲಕ ಒಟ್ಟಾರೆ ಮೂರು ದಿನಕ್ಕೆ 70.83 ಕೋಟಿ ತನ್ನ ಖಾತೆಗೆ ಹಾಕಿಕೊಂಡಿದೆ. ಈ ಮೂಲಕ ಶಾಹೀದ್ ಕಪೂರ್ ಕರಿಯರ್ ನಲ್ಲಿ ಮತ್ತೊಂದು ಬ್ಲಾಕ್ ಬಸ್ಟರ್ ಚಿತ್ರ ಇದಾಗಿದೆ.

ಜಗತ್ತಿನಾದ್ಯಂತ ಸುಮಾರು 3500ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ರಿಲೀಸ್ ಆಗಿದ್ದ ಕಬೀರ್ ಸಿಂಗ್ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ತೆಲುಗಿನ ಅರ್ಜುನ್ ರೆಡ್ಡಿ ಚಿತ್ರದ ದೃಶ್ಯಗಳನ್ನೇ ಕಾಪಿ ಪೇಸ್ಟ್ ಮಾಡಿದ್ದಾರೆ, ಏನೂ ಬದಲಾವಣೆ ಇಲ್ಲ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ರೆ, ಶಾಹೀದ್ ಕಪೂರ್ ಪರ್ಫಾಮೆನ್ಸ್ ಚಿಂದಿ ಎಂದು ಉಳಿದವರು ಖುಷಿಯಾಗಿದ್ದಾರೆ.

Kabir singh day 3 box office collection

ಇನ್ನುಳಿದಂತೆ ಅರ್ಜುನ್ ರೆಡ್ಡಿ ಸಿನಿಮಾ ನಿರ್ದೇಶನ ಮಾಡಿದ್ದ ಸಂದೀಪ್ ವಂಗಾ ಅವರೇ ಕಬೀರ್ ಸಿಂಗ್ ಗೂ ಆಕ್ಷನ್ ಕಟ್ ಹೇಳಿದ್ದಾರೆ. ವಿಜಯ್ ದೇವರಕೊಂಡ ನಿರ್ವಹಿಸಿದ್ದ ಪಾತ್ರವನ್ನ ಶಾಹೀದ್ ಕಪೂರ್, ಶಾಲಿನಿ ಪಾಂಡೆ ನಿರ್ವಹಿಸಿದ್ದ ಪಾತ್ರವನ್ನ ಕಿಯಾರ ಅಡ್ವಾನಿ ನಟಿಸಿದ್ದಾರೆ.

English summary
Bollywood actor shahid kapoor and kiara advani starrer Kabir Singh is terrific on Day 3 with collection of 70.83 crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X