For Quick Alerts
  ALLOW NOTIFICATIONS  
  For Daily Alerts

  ಮತ್ತೆ ಶಾರುಖ್ ಖಾನ್ ಜೊತೆ ಕಾಜೋಲ್ ರೊಮ್ಯಾನ್ಸ್: ನಟಿ ಹೇಳಿದ್ದೇನು?

  |

  ಬಾಲಿವುಡ್ ನ ಸೂಪರ್ ಹಿಟ್ ಜೋಡಿಗಳಲ್ಲಿ ಶಾರುಖ್ ಮತ್ತು ಕಾಜೋಲ್ ಜೋಡಿ ಕೂಡ ಒಂದು. 'ಬಾಜಿಗರ್' ಚಿತ್ರದ ಮೂಲಕ ಮೊದಲ ಬಾರಿಗೆ ತೆರೆಹಂಚಿಕೊಂಡ ಈ ಜೋಡಿ ನಂತರ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ, ಕುಚ್ ಕುಚ್ ಹೋತಾ ಹೈ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

  ಕೊನೆಯದಾಗಿ ಈ ಜೋಡಿ ದಿಲ್ವಾಲೆ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ತೆರೆಮೇಲಿನ ಈ ಸೂಪರ್ ಹಿಟ್ ಜೋಡಿಯನ್ನು ಮತ್ತೆ ಒಟ್ಟಿಗೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಭಿಮಾನಿಗಳ ಆಸೆಯಂತೆ ಮತ್ತೆ ಶಾರುಖ್ ಮತ್ತು ಕಾಜೋಲ್ ಒಟ್ಟಿಗೆ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿತ್ತು.

  Happy Birthday Kajol: ಅಜಯ್ ದೇವಗನ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದೇಗೆ ನಟಿ ಕಾಜೋಲ್?Happy Birthday Kajol: ಅಜಯ್ ದೇವಗನ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದೇಗೆ ನಟಿ ಕಾಜೋಲ್?

  ಇದೀಗ ಈ ಬಗ್ಗೆ ನಟಿ ಕಾಜೋಲ್ ಪ್ರತಿಕ್ರಿಯೆ ನೀಡಿದ್ದಾರೆ. ಇಂದು (ಆಗಸ್ಟ್ 5) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಕಾಜೋಲ್ ಈ ವಿಶೇಷ ದಿನದಂದು ಶಾರುಖ್ ಜೊತೆ ನಟಿಸುವ ಸುದ್ದಿ ಬಗ್ಗೆ ಪ್ರತಿಕ್ರಿಯೆ ನೀಡಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಮತ್ತೆ ಕಾಜೋಲ್ ಮತ್ತು ಶಾರುಖ್ ನನ್ನು ತೆರೆಮೇಲೆ ನೋಡಿ ಕಣ್ತುಂಬಿಕೊಳ್ಳುವ ಆಸೆ ಇಟ್ಟುಕೊಂಡಿದ್ದ ಅಭಿಮಾನಿಗಳಿಗೆ ಕಾಜೋಲ್ ಉತ್ತರ ಬೇಸರ ಮೂಡಿಸಿದೆ.

  ಶಾರುಖ್ ಖಾನ್ ಸದ್ಯ ಮೂರ್ನಾಲ್ಕು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಝೀರೋ ಸಿನಿಮಾದ ಸೋಲಿನ ಬಳಿಕ ಶಾರುಖ್ ಮತ್ತೆ ತೆರೆಮೇಲೆ ಬಂದಿಲ್ಲ. ಸತತ ಸೋಲಿನಿಂದ ಕಂಗೆಟ್ಟಿದ್ದ ಶಾರುಖ್ ಸದ್ಯ ದೊಡ್ಡ ಸಕ್ಸಸ್ ಗಾಗಿ ಕಾಯುತ್ತಿದ್ದಾರೆ. ಅನೇಕ ವರ್ಷಗಳ ಬಳಿಕ ಮತ್ತೆ ವಾಪಸ್ ಆಗುತ್ತಿರುವ ಶಾರುಖ್ ಸದ್ಯ ಪಠಾಣಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿದ್ಧಾರ್ಥ್ ಆನಂದ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಈ ಬಗ್ಗೆ ಪಠಾಣ್ ಚಿತ್ರತಂಡದಿಂದ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

  ಈ ಸಿನಿಮಾ ಜೊತೆಗೆ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಜೊತೆ ಶಾರುಖ್ ಹೊಸ ಸಿನಿಮಾ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ಕಾಜೋಲ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಈಗಾಗಲೇ ಈ ಸಿನಿಮಾಗೆ ನಟಿ ತಾಪ್ಸಿ ಪನ್ನು ಆಯ್ಕೆಯಾಗಿದ್ದಾರೆ. ತಾಪ್ಸಿ ಜೊತೆಗೆ ಕಾಜೋಲ್ ಕೂಡ ನಟಿಸಲಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು. ದಿಲ್ವಾಲೆ ಬಳಿಕ ಮತ್ತೆ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು.

  Kajol Reacts to Rumours Of Doing A Film With Shah Rukh Khan & Rajkumar Hirani

  ಆದರೀಗ ಪ್ರತಿಕ್ರಿಯೆ ನೀಡಿರುವ ಕಾಜೋಲ್ ಈ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ. ಈ ಸಿನಿಮಾದಿಂದ ಯಾರು ಸಂಪರ್ಕ ಮಾಡಿಲ್ಲ ಎಂದು ಹೇಳುವ ಮೂಲಕ ಹರಿದಾಡುತ್ತಿದ್ದ ಸುದ್ದಿಗೆ ಬ್ರೇಕ್ ಹಾಕಿದ್ದಾರೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ನಟಿ ಕಾಜೋಲ್, "ಅವರು (ರಾಜ್ ಕುಮಾರ್ ಹಿರಾನಿ ಅಥವಾ ಚಿತ್ರಕ್ಕೆ ಸಂಬಂಧ ಪಟ್ಟವರು) ಇನ್ನು ನನ್ನನ್ನು ಸಂಪರ್ಕ ಮಾಡಿಲ್ಲ. ನಾನು ಬೇರೆ ಸ್ಕ್ರಿಪ್ಟ್ ಗಳನ್ನು ಓದುತ್ತಿದ್ದೇನೆ ಮತ್ತು ಕೇಳುತ್ತಿದ್ದೇನೆ. ಆದರೆಯ ಇದುವರೆಗೂ ಯಾವುದೇ ಸಿನಿಮಾವನ್ನು ಲಾಕ್ ಮಾಡಿಲ್ಲ" ಎಂದು ಹೇಳಿದ್ದಾರೆ.

  ಇನ್ನು ಕಾಜೋಲ್ ಸಿನಿಮಾ ವಿಚಾರಕ್ಕೆ ಬರುವುದಾದರೆ ತ್ರಿಭಂಗದಲ್ಲಿ ಕಾಣಿಸಿಕೊಂಡರು. ಇದು ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಿದೆ. 2 ವರ್ಷದ ಬಳಿಕ ಕಾಜೋಲ್ ಮತ್ತೆ ತೆರೆಮೇಲೆ ಮಿಂಚಿದ್ದಾರೆ. ಈ ಬಗ್ಗೆ ಮಾತನಾಡಿರುವ ಕಾಜೋಲ್, "ನಾನು ಕೆಲಸ ಮಾಡದೆ ದೀರ್ಘ ಅವಧಿಯನ್ನು ಕಳೆದಿದ್ದೇನೆ. ಯಾವಾಗಲೂ ನಾನು ಅದಕ್ಕೆ ಹೊಂದಿಕೊಂಡಿದ್ದೇನೆ. ನನ್ನ ಜೀವನನ್ನು ನನ್ನ ರೀತಿಯಲ್ಲಿ ಬದುಕುವದರಲ್ಲಿ ನನಗೆ ಸಂತೋಷ ಇದೆ. ಆದರೆ ಈ ಎರಡೂವರೆ ವರ್ಷಗಳಲ್ಲಿ ನಾನು ಮೊದಲ ಬಾರಿಗೆ ಕೆಲಸವನ್ನು ಮಿಸ್ ಮಾಡಿಕೊಂಡೆ" ಎಂದು ಹೇಳಿದ್ದಾರೆ.

  English summary
  Bollywood Actress Kajol Reacts to Rumours Of Doing A Film With Shah Rukh Khan & Rajkumar Hirani.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X