Don't Miss!
- News
ಕಾಂಗ್ರೆಸ್ ಸೇರ್ತಾರಾ ಸುದೀಪ್?; ನಟ ಸುದೀಪ್ ಕಾಂಗ್ರೆಸ್ ಗೆ ಬಂದರೆ ಸ್ವಾಗತ: ಸತೀಶ್ ಜಾರಕಿಹೊಳಿ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
ಅದೇನು ಕಷ್ಟದ ಸಿಕ್ಸರ್ ಅಲ್ಲ: ಹ್ಯಾರಿಸ್ ರೌಫ್ಗೆ ವಿರಾಟ್ ಕೊಹ್ಲಿ ಹೊಡೆದ ಸಿಕ್ಸರ್ ಬಗ್ಗೆ ಮಾಜಿ ಕ್ರಿಕೆಟಿಗನ ಪ್ರತಿಕ್ರಿಯೆ
- Technology
ಒಪ್ಪೋ ರೆನೋ 8T 5G ಫಸ್ಟ್ ಲುಕ್: ಪವರ್ಫುಲ್ ಫೀಚರ್ಸ್ ಜೊತೆಗೆ ಹೊಸ ಲುಕ್!
- Automobiles
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ನಿನ್ನ ಬಾಯ್‌ಫ್ರೆಂಡ್ ಅನಕೊಂಡಗೆ ಬಂದ ಗತಿ ನಿನಗೂ ಬರುತ್ತೆ:": ರಶ್ಮಿಕಾ ಬಗ್ಗೆ ಶಾಕಿಂಗ್ ಕಾಮೆಂಟ್ಸ್
ಬಾಲಿವುಡ್ ನಟ, ನಿರ್ಮಾಪಕ, ಚಿತ್ರವಿಮರ್ಶಕ ಕಮಲ್ ಆರ್ ಖಾನ್ ತಮ್ಮ ವಿವಾದಾಸ್ಪದ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿ ಇರುತ್ತಾರೆ. ಇದೀಗ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಕುರಿತು ಕೆಆರ್‌ಕೆ ಟ್ವೀಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಾಲಿವುಡ್ ಸೂಪರ್ ಸ್ಟಾರ್‌ಗಳ ಕುರಿತು ಕಮಲ್ ಆರ್ ಖಾನ್ ಅಸಂಬದ್ಧ ಕಾಮೆಂಟ್‌ಗಳನ್ನು ಮಾಡುತ್ತಿರುತ್ತಾರೆ. ಸಲ್ಮಾನ್ ಖಾನ್, ಕರಣ್ ಜೋಹರ್ ಬಗ್ಗೆಯೂ ಈ ಹಿಂದೆ ಮಾತನಾಡಿದ್ದರು. ಇನ್ನು ಸೌತ್ ಸಿನಿಮಾಗಳು, ಸೌತ್ ಕಲಾವಿದರು ಅಂದರೆ ಆತನಿಗೆ ಅಷ್ಟಕಷ್ಟೆ. ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರವನ್ನು ಕೂಡ ಕಾರ್ಟೂನ್ ಸಿನಿಮಾ ಎಂದು ಹೇಳಿ ಆದ ಚರ್ಚೆ ಹುಟ್ಟಾಕ್ಕಿದ್ದರು. ಸದಾ ಯಾರದರೂ ಒಬ್ಬರನ್ನು ಟಾರ್ಗೆಟ್ ಮಾಡುತ್ತಲೇ ಇರುತ್ತಾರೆ. ನೆಗೆಟೀವ್ ಟ್ವೀಟ್‌ಗಳನ್ನು ಮಾಡೋದು ಸರ್ವೇ ಸಾಮಾನ್ಯ ಆಗಿಬಿಟ್ಟಿದೆ. ಇದೇ ಕಾರಣಕ್ಕೆ ಆತನ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆಗಿದ್ದು ಇದೆ. ಒಮ್ಮೆ ಪೊಲೀಸರು ಬಂಧಿಸಿದ್ದರು.
ಪಟಾಕ
ಹುಡುಗಿ
ನಭಾ
ನಟೇಶ್ಗೆ
ಅಪಘಾತ;
ಎಡ
ಭುಜಕ್ಕೆ
ಪೆಟ್ಟು,
ಶಸ್ತ್ರ
ಚಿಕಿತ್ಸೆ
ಸದ್ಯ ರಶ್ಮಿಕಾ ಮಂದಣ್ಣ 'ಮಿಷನ್ ಮಜ್ನು' ಸಿನಿಮಾ ಪ್ರಮೋಷನ್‌ನಲ್ಲಿ ಬ್ಯುಸಿ ಆಗಿದ್ದಾರೆ. ಜನವರಿ 20ಕ್ಕೆ ಸಿನಿಮಾ ನೇರವಾಗಿ ಓಟಿಟಿಗೆ ಬರ್ತಿದೆ. ಕಮಲ್ ಆರ್ ಖಾನ್ ಸದ್ಯ ನಟಿ ರಶ್ಮಿಕಾ ಮಂದಣ್ಣ ವಿರುದ್ಧ ತಿರುಗಿ ಬಿದ್ದಿದ್ದಾರೆ. ಆಕೆಯ ಬಗ್ಗೆ ಅಸಭ್ಯವಾಗಿ ಟ್ವೀಟ್‌ಗಳನ್ನು ಮಾಡಿದ್ದಾರೆ.

ಭೋಜ್‌ಪುರಿ ಚಿತ್ರಗಳಿಗೆ ಲಾಯಕ್ಕು
ಕೆಲ ದಿನಗಳ ಹಿಂದೆ ಕಮಲ್ ಆರ್ ಖಾನ್, "ರಶ್ಮಿಕಾ ಮಂದಣ್ಣ ಭೋಜ್‌ಪುರಿ ಸಿನಿಮಾಗಳನ್ನು ಮಾತ್ರ ಮಾಡಲು ಲಾಯಕ್ಕು. ಐಶ್ವರ್ಯ ರೈ, ಕರೀನಾ ಕಪೂರ್, ಮಾಧುರಿ ದೀಕ್ಷಿತ್‌ನ ನೋಡಿದ ಮೇಲೆ ಹಿಂದಿ ಪ್ರೇಕ್ಷಕರು ನಿನ್ನನ್ನು ಸಿನಿಮಾ ನಾಯಕಿಯಾಗಿ ಒಪ್ಪಿಕೊಳ್ಳುವುದಿಲ್ಲ" ಎಂದು ಟ್ವೀಟ್ ಮಾಡಿದ್ದರು. ಆ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ನಿನ್ನ ಬಾಯ್‌ಫ್ರೆಂಡ್ ಗತಿ ನಿನಗೂ
ಇದೀಗ ಮತ್ತೊಮ್ಮೆ ರಶ್ಮಿಕಾ ವಿರುದ್ಧ ತಿರುಗಿಬಿದ್ದಿರುವ ಕೆಆರ್‌ಕೆ, "ರಶ್ಮಿಕಾ ಮೇಡಂಜೀ ನಿಮಗೆ ಗೊತ್ತಿರಬಹುದು, 'ಲೈಗರ್' ಸೋಲಿನ ಮೂಲಕ ನಿಮ್ಮ ಬಾಯ್‌ಫ್ರೆಂಡ್ ಅನಕೊಂಡನ ಯಾವ ರೀತಿ ಬಾಲಿವುಡ್‌ನಿಂದ ಓಡಿಸಿದ್ದೇವೋ, ಅದೇ ರೀತಿ ನಿಮ್ಮನ್ನು ಕಳುಹಿಸುತ್ತೇವೆ. ಆದರೆ ನೀವು ಭೋಜ್‌ಪುರಿ ಸಿನಿಮಾಗಳಲ್ಲಿ ನಟಿಸಿದರೆ ಓಕೆ. ನಮಗೂ ಸಂತೋಷ" ಎಂದು ಬರೆದುಕೊಂಡಿದ್ದಾರೆ.

ರಶ್ಮಿಕಾ ನ್ಯಾಷನಲ್ ಕ್ರಶ್ ಅಲ್ಲ
ಇದಕ್ಕೂ ಮುಂಚೆ "ರಶ್ಮಿಕಾ ಮಂದಣ್ಣನ ನ್ಯಾಷನಲ್ ಕ್ರಶ್ ಎನ್ನುವವರು ನಿಮ್ಮ ಕಣ್ಣುಗಳನ್ನು ಪರೀಕ್ಷಿಸಿಕೊಳ್ಳಿ. ರಶ್ಮಿಕಾ ಏನಿದ್ದರೂ ರವಿ ಕಿಶನ್, ನೀರವ್, ಪವನ್ ಸಿಂಗ್, ಕೇಸರಿ ಲಾಲ್ ರೀತಿಯ ಭೋಜ್‌ಪುರಿ ನಟರ ಜೊತೆ ನಟಿಸಿ ರಾಕ್ ಮಾಡಬಹುದು ಅಷ್ಟೇ" ಎಂದು ಟ್ವೀಟ್ ಮಾಡಿದ್ದರು. ಕೆಆರ್‌ಕೆ ಟ್ವೀಟ್‌ಗಳಿಗೆ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆತನ ವಿರುದ್ಧ ತಿರುಗಿ ಬಿದ್ದಿದ್ದಾರೆ. ಆದರೆ ಪ್ರಯೋಜನವಾಗುತ್ತಿಲ್ಲ.

ರಶ್ಮಿಕಾ ಕ್ರಮ ಕೈಗೊಳ್ಳುತ್ತಾರಾ?
ಇನ್ನು ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಶ್ ಆಗಿ ಮಿಂಚುತ್ತಿದ್ದಾರೆ. ಸೌತ್ ಸಿನಿದುನಿಯಾದಲ್ಲಿ ಮಾತ್ರವಲ್ಲ, ಬಾಲಿವುಡ್‌ನಲ್ಲೂ ಕಮಾಲ್ ಮಾಡ್ತಿದ್ದಾರೆ. ಈಗಾಗಲೇ ಬಿಗ್‌ಬಿ ಅಮಿತಾಬ್ ಬಚ್ಚನ್ ಜೊತೆ ನಟಿಸಿದ 'ಗುಡ್‌ಬೈ' ಸಿನಿಮಾ ಬಂದೋಗಿದೆ. 'ಮಿಷನ್ ಮಜ್ನು' ಸಿನಿಮಾ ನೇರವಾಗಿ ಓಟಿಟಿಗೆ ಬರಲು ಸಿದ್ಧವಾಗಿದೆ. ಮತ್ತೊಂದು ಕಡೆ 'ಅನಿಮಲ್' ಎನ್ನುವ ಚಿತ್ರದಲ್ಲಿ ರಣ್‌ಬೀರ್ ಕಪೂರ್ ಜೊತೆ ಕೊಡಗಿನ ಕುವರಿ ನಟಿಸ್ತಿದ್ದಾರೆ. ಕಮಲ್ ಆರ್ ಖಾನ್ ಹೀಗೆ ಪದೇ ಪದೇ ಅಸಭ್ಯವಾಗಿ ಟ್ವೀಟ್ ಮಾಡುತ್ತಿರುವ ಬಗ್ಗೆ ರಶ್ಮಿಕಾ ಕ್ರಮ ಕೈಗೊಳ್ಳುತ್ತಾರಾ? ಆತನಿಗೆ ಬುದ್ದಿ ಕಲಿಸುತ್ತಾರಾ? ಕಾದು ನೋಡಬೇಕು.