For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಿಂಗ್-ಇರ್ಫಾನ್ ಖಾನ್ ಚಿತ್ರ ಬೇಡ ಎಂದು ಕೈಬಿಟ್ಟಿದ್ದರು ಕಂಗನಾ!

  |

  ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ನಟಿ ಕಂಗನಾ ರಣಾವತ್ ನಿರಂತರ ಸುದ್ದಿಯಲ್ಲಿದ್ದಾರೆ. ಸುಶಾಂತ್ ಸಾವಿನ ಹಿನ್ನೆಲೆ ಬಾಲಿವುಡ್ ಮಾಫಿಯಾ ವಿರುದ್ಧ ಬಹಿರಂಗವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಸ್ಟಾರ್ ಮಕ್ಕಳನ್ನು ಬೆಳಸಲು, ಇಂಡಸ್ಟ್ರಿಯಲ್ಲಿ ಉಳಿಸುವ ಉದ್ದೇಶದಿಂದ ಪ್ರಭಾವಿ ನಿರ್ದೇಶಕ ಮತ್ತು ನಿರ್ಮಾಪಕರು ನಿಜವಾದ ಪ್ರತಿಭೆಗಳನ್ನು ತುಳಿಯುತ್ತಿದ್ದಾರೆ ಎಂದು ಕಂಗನಾ ಸಿಡಿದೆದ್ದಿದ್ದಾರೆ.

  Brahma ಚಿತ್ರದಲ್ಲಿನ ರೋಮಾಂಚಕ ಫೈಟ್ ಸೀನ್ ತಯಾರಾಗಿದ್ದು ಹೀಗೆ | Action Scene Making | Filmibeat Kannada

  ಸುಶಾಂತ್ ಅವರ ಸಾವಿಗೆ ಬಿಟೌನ್‌ನಲ್ಲಿರುವ ನೆಪೋಟಿಸಂ ಕಾರಣ, ಅವರ ವೃತ್ತಿ ಜೀವನವನ್ನು ಉದ್ದೇಶಪೂರ್ವಕವಾಗಿ ಮುಗಿಸುವ ಪ್ರಯತ್ನಗಳು ನಡೆದಿತ್ತು ಎಂದು 'ಕ್ವೀನ್' ನಟಿ ಆರೋಪಿಸಿದ್ದಾರೆ. ಹೀಗೆ, ಸುಶಾಂತ್ ವಿಚಾರದಲ್ಲಿ ಬಿಗ್ ಇಂಡಸ್ಟ್ರಿಯನ್ನು ದೂರುತ್ತಿರುವ ಕಂಗನಾ, 2016ರಲ್ಲಿ ಸುಶಾಂತ್ ಜೊತೆ ನಟಿಸುವ ಆಫರ್ ಬಂದಾಗ ನಿರಾಕರಿಸಿದ್ದರು ಎಂದು ವಿಚಾರ ಈಗ ಸದ್ದು ಮಾಡ್ತಿದೆ. ಏಕೆ? ಮುಂದೆ ಓದಿ....

  ಮರಣೋತ್ತರ ಪರೀಕ್ಷಾ ಕೊಠಡಿಗೆ ರಿಯಾಗೆ ಪ್ರವೇಶ: ಅನುಮಾನ ಮೂಡಿಸಿದ ಪೊಲೀಸರ ನಡೆಮರಣೋತ್ತರ ಪರೀಕ್ಷಾ ಕೊಠಡಿಗೆ ರಿಯಾಗೆ ಪ್ರವೇಶ: ಅನುಮಾನ ಮೂಡಿಸಿದ ಪೊಲೀಸರ ನಡೆ

  ಸುಶಾಂತ್-ಇರ್ಫಾನ್ ಖಾನ್ ಸಿನಿಮಾ!

  ಸುಶಾಂತ್-ಇರ್ಫಾನ್ ಖಾನ್ ಸಿನಿಮಾ!

  ಡಿಎನ್‌ಎ ವೆಬ್‌ಸೈಟ್ ವರದಿ ಮಾಡಿದಂತೆ, 2016ರಲ್ಲಿ ಸುಶಾಂತ್ ಸಿಂಗ್ ರಜಪೂತ್ ಮತ್ತು ಇರ್ಫಾನ್ ಖಾನ್ ನಟಿಸಬೇಕಾದ ಚಿತ್ರವೊಂದರಲ್ಲಿ ನಟಿಸುವಂತೆ ಕಂಗನಾ ರಣಾವತ್‌ಗೆ ಆಫರ್ ಮಾಡಲಾಗಿತ್ತು. ಆದರೆ, ಈ ಚಿತ್ರವನ್ನು ಕಂಗನಾ ನಿರಾಕರಿಸಿದ್ದರು ಎಂಬ ವಿಚಾರ ಹೊರಬಿದ್ದಿದೆ.

  ಈ ಸಿನಿಮಾ ಬೇಡ ಎನ್ನಲು ಕಾರಣವೇನು?

  ಈ ಸಿನಿಮಾ ಬೇಡ ಎನ್ನಲು ಕಾರಣವೇನು?

  ಸುಶಾಂತ್-ಇರ್ಫಾನ್ ಸಿನಿಮಾ ಆಫರ್ ಬಂದಾಗ ಕಂಗನಾ ರಣಾವತ್ 'ರಂಗೊನ್' ಚಿತ್ರದಲ್ಲಿ ನಟಿಸುತ್ತಿದ್ದರು. ಹಾಗಾಗಿ, ಡೇಟ್ ಹೊಂದಾಣಿಕೆ ಆಗದ ಕಾರಣ ಈ ಪ್ರಾಜೆಕ್ಟ್ ಕೈಬಿಟ್ಟಿದ್ದರು ಎಂದು ವರದಿಯಾಗಿದೆ. ರಂಗೊನ್ ಚಿತ್ರದಲ್ಲಿ ಸೈಫ್ ಅಲಿ ಖಾನ್ ಮತ್ತು ಶಾಹೀದ್ ಕಪೂರ್ ನಟಿಸಿದ್ದರು.

  ಸುಶಾಂತ್ ಸಾವಿನ ದಿನ ಮಹೇಶ್ ಭಟ್‌ಗೆ ರಿಯಾ ಕಳಿಸಿದ್ದ ಸಂದೇಶ ಬಹಿರಂಗಸುಶಾಂತ್ ಸಾವಿನ ದಿನ ಮಹೇಶ್ ಭಟ್‌ಗೆ ರಿಯಾ ಕಳಿಸಿದ್ದ ಸಂದೇಶ ಬಹಿರಂಗ

  ಕಥೆ ವಿವರಿಸಿದ್ದ ನಿರ್ದೇಶಕ

  ಕಥೆ ವಿವರಿಸಿದ್ದ ನಿರ್ದೇಶಕ

  ಸುಶಾಂತ್-ಇರ್ಫಾನ್ ಹಾಗೂ ಕಂಗನಾ ಜೊತೆ ಸಿನಿಮಾ ಮಾಡಬೇಕೆಂದುಕೊಂಡಿದ್ದ ನಿರ್ದೇಶಕ ಹೋಮಿ ಅದಜಾನಿಯಾ ಕಥೆ ಸಹ ವಿವರಿಸಿದ್ದರು. ಈ ಬಗ್ಗೆ ಕಂಗನಾ ಆ ಸಮಯದಲ್ಲಿ ಪಿಟಿಐಗೆ ಪ್ರತಿಕ್ರಿಯಿಸಿ 'ಕಥೆ ಕೇಳಿ ಈ ಸಿನಿಮಾ ಮಾಡಲು ಉತ್ಸುಕನಾಗಿದ್ದೆ. ಆದರೆ, ರಂಗೊನ್ ಚಿತ್ರದ ನಂತರ ಹನ್ಸಲ್ ಮೆಹ್ತಾ ಅವರ ಚಿತ್ರಕ್ಕೆ ಡೇಟ್ ನೀಡಿದ್ದೇನೆ. ಹಾಗಾಗಿ, ಈ ಚಿತ್ರ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ, ಮುಂದಿನ ದಿನದಲ್ಲಿ ಖಂಡಿತ ಅವರೊಂದಿಗೆ ಕೆಲಸ ಮಾಡುತ್ತೇನೆ'' ಎಂದಿದ್ದರಂತೆ.

  ಕೊನೆಗೆ ಆ ಸಿನಿಮಾ ಬರಲೇ ಇಲ್ಲ

  ಕೊನೆಗೆ ಆ ಸಿನಿಮಾ ಬರಲೇ ಇಲ್ಲ

  ದುರಾದೃಷ್ಟವಶಾತ್ ಅಂದ್ರೆ ಸುಶಾಂತ್ ಸಿಂಗ್ ರಜಪೂತ್, ಇರ್ಫಾನ್ ಖಾನ್ ಮತ್ತು ಕಂಗನಾ ರಣಾವತ್ ಅವರನ್ನೊಳಗೊಂಡಂತೆ ಮೂಡಿಬರಬೇಕಿದ್ದ ಆ ಚಿತ್ರ ಕೊನೆಗೂ ತಯಾರಾಗಲೇ ಇಲ್ಲ. ಆ ಸ್ಕ್ರಿಪ್ಟ್ ಬಗ್ಗೆ ಚರ್ಚಿಸಿದ್ದ ಇಬ್ಬರು ನಟರು ಈಗ ಜೀವಂತವಾಗಿಲ್ಲ ಎನ್ನುವುದು ಊಹಿಸಿದರೆ ನಿಜಕ್ಕೂ ಬೇಸರವಾಗುತ್ತೆ.

  English summary
  Kangana Ranaut was refuse to star alongside Sushant Singh Rajput and Irrfan Khan at 2016.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X