For Quick Alerts
  ALLOW NOTIFICATIONS  
  For Daily Alerts

  'ಆ ಒಂದು ಪರೀಕ್ಷೆ ಮಾಡಿಸಿದರೆ ಬಾಲಿವುಡ್‌ನ ಸ್ಟಾರ್‌ಗಳೆಲ್ಲಾ ಜೈಲು ಸೇರುತ್ತಾರೆ'

  |

  ಬಾಲಿವುಡ್‌ನಲ್ಲಿನ ಅಸಮಾನತೆ, ಸ್ವಜನಪಕ್ಷತದ ವಿರುದ್ಧ ಸಿಡಿನುಡಿಗಳನ್ನು ಸುರಿಸುತ್ತಿರುವ ನಟಿ ಕಂಗನಾ ರನೌತ್ ಬಾಲಿವುಡ್‌ ಸ್ಟಾರ್‌ಗಳ ವಿರುದ್ಧವೂ ಪುಂಖಾನುಪುಂಖವಾಗಿ ಹೇಳಿಕೆಗಳನ್ನು ಹರಿಯಬಿಡುತ್ತಿದ್ದಾರೆ.

  Ayogya ಸಿನಿಮಾದ ಕ್ಲೈಮ್ಯಾಕ್ಸ್ ಸನ್ನಿವೇಶದ ತೆರೆ ಹಿಂದಿನ ದೃಶ್ಯ | Ayogya Climax Making | Filmibeat Kannada

  ಸುಶಾಂತ್ ಸಾವಿನ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿಪರೀತ ಆಕ್ರಮಣಕಾರಿ ಆಗಿರುವ ಕಂಗನಾ ರಣೌತ್. ಸ್ಟಾರ್ ನಟ, ನಿರ್ದೇಶಕ, ನಿರ್ಮಾಪಕಗಳ ಮೇಲೆ ನೇರ ಆರೋಪಗಳನ್ನು ಮಾಡುತ್ತಿದ್ದಾರೆ.

  ಅಮೀರ್ ಖಾನ್, ಸಲ್ಮಾನ್ ಖಾನ್, ಕರಣ್ ಜೋಹರ್, ತಾಪ್ಸಿ ಪನ್ನು, ಮಹೇಶ್ ಭಟ್ ಇನ್ನೂ ಹಲವಾರು ಬಾಲಿವುಡ್ ದೊಡ್ಡ ಸ್ಟಾರ್‌ಗಳನ್ನು ಗುರಿಯಾಗಿಸಿಕೊಂಡು ಪುಂಖಾನುಪುಂಖವಾಗಿ ಆರೋಪಗಳ ಸುರಿಮಳೆ ಗರೆಯುತ್ತಿದ್ದಾರೆ ಕಂಗನಾ.

  ಇದೀಗ ಸುಶಾಂತ್ ಸಾವಿನ ಪ್ರಕರಣದಕ್ಕೆ ಮಾದಕ ವಸ್ತುವಿನ ಕೋನ ದೊರೆಯುತ್ತಿದ್ದಂತೆ. ಕಂಗನಾ ಟ್ವೀಟ್ ಒಂದನ್ನು ಮಾಡಿದ್ದು, ಈ ಟ್ವೀಟ್ ಭಾರಿ ವೈರಲ್ ಆಗಿದೆ.

  ಎಲ್ಲಾ ಸ್ಟಾರ್‌ಗಳು ಜೈಲು ಸೇರುತ್ತಾರೆ: ಕಂಗನಾ

  ಎಲ್ಲಾ ಸ್ಟಾರ್‌ಗಳು ಜೈಲು ಸೇರುತ್ತಾರೆ: ಕಂಗನಾ

  'ಒಂದು ವೇಳೆ ಬಾಲಿವುಡ್‌ನ ಸ್ಟಾರ್‌ಗಳನ್ನು ಮಾದಕ ವಸ್ತು ಪರೀಕ್ಷೆಗೆ ಒಳಪಡಿಸಿದರೆ, ಬಹುತೇಕ ಎಲ್ಲಾ ಸ್ಟಾರ್‌ಗಳು ಜೈಲು ಸೇರುತ್ತಾರೆ, ಸ್ಟಾರ್‌ಗಳ ರಕ್ತ ಪರೀಕ್ಷೆ ಮಾಡಿದರೆ ಬಹುತೇಕ ಎಲ್ಲರ ದೇಹದಲ್ಲೂ ಮಾದಕ ವಸ್ತು ಬಳಸಿರುವ ಕುರುಹು ಸಿಗುತ್ತದೆ' ಎಂದು ಟ್ವೀಟ್ ಮಾಡಿದ್ದಾರೆ ನಟಿ ಕಂಗನಾ ರಣೌತ್.

  'ಬಾಲಿವುಡ್‌ನವರ ಮೆಚ್ಚಿನ ಮಾದಕ ವಸ್ತು ಕೊಕೇನ್'

  'ಬಾಲಿವುಡ್‌ನವರ ಮೆಚ್ಚಿನ ಮಾದಕ ವಸ್ತು ಕೊಕೇನ್'

  ಅಷ್ಟೆ ಅಲ್ಲದೆ, 'ಬಾಲಿವುಡ್‌ ಜನರ ಮೆಚ್ಚಿನ ಮಾದಕ ವಸ್ತು 'ಕೊಕೇನ್' ಈ ಕೊಕೇನ್ ಬಹುತೇಕ ಎಲ್ಲಾ ಬಾಲಿವುಡ್‌ ಪಾರ್ಟಿಗಳಲ್ಲೂ ಸಿಗುತ್ತದೆ. ಎಲ್ಲಾ ಹೌಸ್‌ ಪಾರ್ಟಿಗಳಲ್ಲಿಯೂ ಕೊಕೇನ್ ಇದ್ದೇ ಇರುತ್ತದೆ ಎಂಬ ಶಾಕಿಂಗ್ ಅಂಶವನ್ನು ಬಹಿರಂಗ ಪಡಿಸಿದ್ದಾರೆ ಕಂಗನಾ.

  ನೀರಿನಲ್ಲಿ ಕೊಕೇನ್ ಬೆರೆಸಿ ಕೊಡುತ್ತಾರೆ: ಕಂಗನಾ

  ನೀರಿನಲ್ಲಿ ಕೊಕೇನ್ ಬೆರೆಸಿ ಕೊಡುತ್ತಾರೆ: ಕಂಗನಾ

  ಯಾವುದೇ ದೊಡ್ಡ ಬಾಲಿವುಡ್‌ ಪಾರ್ಟಿಗಳಿಗೆ ಅಥವಾ ಸ್ಟಾರ್‌ಗಳ ಹೌಸ್ ಪಾರ್ಟಿಗೆ ಹೋದರೆ ಮೊದಲಿಗೆ ನಿಮಗೆ ಕೊಕೇನ್ ಅನ್ನು ಉಚಿತವಾಗಿ ನೀಡಲಾಗುತ್ತದೆ. ಕೊಕೇನ್‌ ಅನ್ನು ನೀರಿನಲ್ಲಿ ಬೆರೆಸಿ ಕೊಡುತ್ತಾರೆ. ಆ ನಂತರ ನೀವು ಅದಕ್ಕೆ ದಾಸರಾಗುತ್ತೀರಿ ಎಂದು ಹೇಳಿದ್ದಾರೆ ಕಂಗನಾ.

  ಎಲ್ಲದರ ಬಗ್ಗೆಯೂ ಮಾಹಿತಿ ನೀಡುತ್ತೇನೆ: ಕಂಗನಾ

  ಎಲ್ಲದರ ಬಗ್ಗೆಯೂ ಮಾಹಿತಿ ನೀಡುತ್ತೇನೆ: ಕಂಗನಾ

  ಬಾಲಿವುಡ್‌ನಲ್ಲಿ ಮಾದಕ ದ್ರವ್ಯ ಬಳಕೆ, ಮಾರಾಟ ಎಲ್ಲದರ ಬಗ್ಗೆಯೂ ನಾನು ಬೇಕಿದ್ದರೆ ಮಾದಕ ದ್ರವ್ಯ ನಿಗ್ರಹ ಇಲಾಖೆಗೆ ಮಾಹಿತಿ ನೀಡಲು ಸಿದ್ಧಳಿದ್ದೇನೆ. ಈಗಾಗಲೇ ನನ್ನ ವೃತ್ತಿಯನ್ನು ನಾನು ರಿಸ್ಕ್‌ ಗೆ ಒಡ್ಡಿದ್ದೇನೆ. ಈಗ ಜೀವವನ್ನೂ ಒಡ್ಡಲು ತಯಾರಿದ್ದೇನೆ. ಆದರೆ ನನಗೆ ಕೇಂದ್ರ ಸರ್ಕಾರದಿಂದ ಭದ್ರತೆ ಬೇಕು ಎಂದಿದ್ದಾರೆ ಕಂಗನಾ.

  English summary
  Actress Kangana Ranaut said Drugs are very common in all Bollywood parties. If test done all stars will go behind the bars.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X