For Quick Alerts
  ALLOW NOTIFICATIONS  
  For Daily Alerts

  'ಬಿಳಿಕೋತಿಗಳ ಗುಲಾಮರಂತೆ ಭಾಸವಾಗುತ್ತಿದೆ': ಇನ್ಸ್ಟಾಗ್ರಾಂ ವಿರುದ್ದ ಕಂಗನಾ ಗರಂ

  |

  ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತೊಮ್ಮೆ ಇನ್ಸ್ಟಾಗ್ರಾಂ ಮೇಲೆ ಅಸಮಾಧಾನಗೊಂಡಿದ್ದಾರೆ. ತನ್ನ ಇನ್ಸ್ಟಾ ಖಾತೆಯ ಬಯೋಗ್ರಫಿಯಲ್ಲಿ ತಮ್ಮ ಮುಂದಿನ ಚಿತ್ರ ತಲೈವಿ ಟ್ರೈಲರ್ ಪೋಸ್ಟ್ ಮಾಡಲು ಸಾಧ್ಯವಾಗದೇ ಇದ್ದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

  ಈ ಬಗ್ಗೆ ಇನ್ಸ್ಟಾಗ್ರಾಂ ಜೊತೆ ಎಷ್ಟೇ ಮಾತುಕತೆ ನಡೆಸಿದರೂ ಯಶಸ್ವಿಯಾಗಿಲ್ಲ. ಅವರು ತುಂಬಾ ಬೇಜವಾಬ್ದಾರಿಯಾಗಿ ನಡೆದುಕೊಂಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಇನ್ಸ್ಟಾ ಸ್ಟೋರಿಸ್‌ನಲ್ಲಿ ಪೋಸ್ಟ್ ಮಾಡಿರುವ ಕಂಗನಾ, ''ನಿಮ್ಮ ಈಸ್ಟ್ ಇಂಡಿಯಾ ಕಂಪನಿಯ ಮನೋಭಾವನೆಯನ್ನು ಬದಲಾಯಿಸಿಕೊಳ್ಳಿ'' ಎಂದು ಟೀಕಿಸಿದ್ದಾರೆ.

  ''ಡಿಯರ್ ಇನ್ಸ್ಟಾಗ್ರಾಂ ನನ್ನ ಮುಂದಿನ ಸಿನಿಮಾ ತಲೈವಿ ಟ್ರೈಲರ್‌ನ್ನು ನನ್ನ ಪ್ರೊಫೈಲ್‌ಗೆ ಸೇರಿಸಬೇಕು, ನನ್ನ ಖಾತೆ ವೆರಿಫೈ ಆಗಿದೆ. ಬಹಳ ವರ್ಷಗಳಿಂದ ಈ ಖಾತೆ ಹೊಂದಿದ್ದೇನೆ. ನನ್ನ ವೈಯಕ್ತಿಕ ಖಾತೆಯಲ್ಲಿ ಏನನ್ನಾದರೂ ಸೇರಿಸಬೇಕು ಅಂದ್ರೆ ನಿಮ್ಮ ಅನುಮತಿ ಬೇಕಾಗಿದೆ! ಅದನ್ನು ಕೇಳಿದ್ರೆ ಭಾರತದಲ್ಲಿರುವ ನಿಮ್ಮ ತಂಡ, ನಾವು ಅಂತಾರಾಷ್ಟ್ರೀಯ ಮೇಲಾಧಿಕಾರಿಗಳ ಬಳಿ ಅನುಮತಿ ಪಡೆಯಬೇಕು ಎನ್ನುತ್ತಾರೆ. ಒಂದು ವಾರದಿಂದ ಬಿಳಿ ಕೋತಿಗಳ ಗುಲಾಮರಂತೆ ಭಾಸವಾಗುತ್ತಿದೆ. ನಿಮ್ಮ ಈಸ್ಟ್ ಇಂಡಿಯಾ ಕಂಪನಿ ಮನೋಭಾವವನ್ನು ಬದಲಾಯಿಸಿಕೊಳ್ಳಿ'' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  'ತಲೈವಿ' ಸೆನ್ಸಾರ್ ಪಾಸ್: ಈ ಸಲ ಮುಂದಿಟ್ಟ ಹೆಜ್ಜೆ ಹಿಂದೆ ಇಡಲ್ಲ!'ತಲೈವಿ' ಸೆನ್ಸಾರ್ ಪಾಸ್: ಈ ಸಲ ಮುಂದಿಟ್ಟ ಹೆಜ್ಜೆ ಹಿಂದೆ ಇಡಲ್ಲ!

  ಇನ್ಸ್ಟಾಗ್ರಾಂನಲ್ಲಿ ತನ್ನ ಹೆಸರಿಗೆ ತಲೈವಿ ಸೇರಿಸಲು ಅರ್ಜಿ ಸಲ್ಲಿಸಿದ್ದೇನೆ. ಆದರೆ ನನ್ನ ಖಾತೆಯ ಎಡಿಟ್ ವಿಭಾಗವನ್ನು ಲಾಕ್ ಮಾಡಲಾಗಿದೆ ಎಂದು ಬಹಿರಂಗಪಡಿಸಿದರು. ''ಈಗ ನಾನು ನನ್ನ ಖಾತೆಯ ವೆಬ್‌ಸೈಟ್ ವಿಭಾಗದಲ್ಲಿ ಟ್ರೈಲರ್‌ನ್ನು ಸಹ ಸೇರಿಸಲು ಸಾಧ್ಯವಿಲ್ಲ. ಇನ್ಸ್ಟಾಗ್ರಾಂ ಕಡೆಯಿಂದ ಇಂತಹ ವೃತ್ತಿಪರವಲ್ಲದ ಕೆಲಸ ಒಪ್ಪಲು ಸಾಧ್ಯವಿಲ್ಲ" ಎಂದು ಕಂಗನಾ ಗರಂ ಅಗಿದ್ದಾರೆ. ಮುಂದೆ ಓದಿ...

  ಕಂಗನಾ ಇನ್ಸ್ಟಾ ಖಾತೆ ಹ್ಯಾಕ್?

  ಕಂಗನಾ ಇನ್ಸ್ಟಾ ಖಾತೆ ಹ್ಯಾಕ್?

  ಇತ್ತೀಚಿಗಷ್ಟೆ ನಟಿ ಕಂಗನಾ ರಣಾವತ್ ಅವರ ಇನ್ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿತ್ತು. ಆ ಬಗ್ಗೆಯೂ ಕಂಗನಾ ತೀವ್ರ ಅಸಮಾಧಾನ ಹೊರಹಾಕಿದ್ದರು. ಚೀನಾದಲ್ಲಿ ತನ್ನ ಖಾತೆ ಹ್ಯಾಕ್ ಮಾಡುವ ಪ್ರಯತ್ನ ಆಗಿದೆ, ತಾಲಿಬಾನ್ ಕುರಿತಾದ ಪೋಸ್ಟ್‌ಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಬಹಿರಂಗಪಡಿಸಿದ್ದರು.

  ತಾಲಿಬಾನ್ ಪೋಸ್ಟ್ ಡಿಲೀಟ್ ಆಗಿತ್ತು

  ತಾಲಿಬಾನ್ ಪೋಸ್ಟ್ ಡಿಲೀಟ್ ಆಗಿತ್ತು

  ''ಕಳೆದ ರಾತ್ರಿ ಯಾರೋ ಚೀನಾದಲ್ಲಿ ನನ್ನ ಇನ್ಸ್ಟಾಗ್ರಾಂ ಖಾತೆ ಲಾಗ್ ಇನ್ ಮಾಡಲು ಪ್ರಯತ್ನಿಸಿದಾಗ ನನಗೆ ಅಲರ್ಟ್ ಬಂತು. ಆಮೇಲೆ ಇದ್ದಕ್ಕಿದ್ದಂತೆ ಮೆಸೆಜ್ ಮಾಯಾವಾಯಿತು. ಬೆಳಗ್ಗೆ ನೋಡಿದ್ರೆ ತಾಲಿಬಾನ್ ಹಿಂಸಾಚಾರದ ಕುರಿತು ನಾನು ಪೋಸ್ಟ್ ಮಾಡಿದ್ದ ಎಲ್ಲವೂ ಡಿಲೀಟ್ ಆಗಿದೆ. ನಂತರ ಇನ್ಸ್ಟಾಗ್ರಾಂಗೆ ಕರೆ ಮಾಡಿದ ಮೇಲೆ ನನ್ನ ಖಾತೆ ನಿಷ್ಕ್ರಿಯಗೊಂಡಿದೆ. ನಾನು ಪೋಸ್ಟ್ ಹಾಕಲು ಪ್ರಯತ್ನಿಸುತ್ತಿದ್ದರೂ ಅದು ಮತ್ತೆ ಮತ್ತೆ ಲಾಗ್ ಔಟ್ ಆಗುತ್ತಿದೆ. ಆಮೇಲೆ ನನ್ನ ಸಹೋದರಿ ಮೊಬೈಲ್ ತೆಗೆದುಕೊಂಡು ನನ್ನ ಖಾತೆಯಲ್ಲಿ ಈ ಸ್ಟೋರಿ ಹಾಕಿದೆ. ನನ್ನ ತಂಗಿಯ ಮೊಬೈಲ್‌ನಲ್ಲಿ ನಾನು ಇನ್ಸ್ಟಾಗ್ರಾಂ ಬಳಸುತ್ತೇನೆ. ಇದು ಬಹುದೊಡ್ಡ ಅಂತಾರಾಷ್ಟ್ರೀಯ ಪಿತೂರಿ'' ಎಂದಿದ್ದರು.

  ಕಂಗನಾ ಇನ್ಸ್ಟಾಗ್ರಾಂ ಖಾತೆ ಹ್ಯಾಕ್: ತಾಲಿಬಾನ್ ಪೋಸ್ಟ್ ಡಿಲೀಟ್ಕಂಗನಾ ಇನ್ಸ್ಟಾಗ್ರಾಂ ಖಾತೆ ಹ್ಯಾಕ್: ತಾಲಿಬಾನ್ ಪೋಸ್ಟ್ ಡಿಲೀಟ್

  ಸೆಪ್ಟೆಂಬರ್ 10ಕ್ಕೆ ತಲೈವಿ ಸಿನಿಮಾ

  ಸೆಪ್ಟೆಂಬರ್ 10ಕ್ಕೆ ತಲೈವಿ ಸಿನಿಮಾ

  ಇತ್ತೀಚಿಗಷ್ಟೆ ಸಿಬಿಎಫ್‌ಸಿ (Central Board of Film Certification) ಕಡೆಯಿಂದ ಸೆನ್ಸಾರ್ ಮುಗಿಸಿರುವ ತಲೈವಿ ಚಿತ್ರಕ್ಕೆ 'ಯು' ಪ್ರಮಾಣಪತ್ರ ಲಭಿಸಿದೆ. ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಸೆಪ್ಟೆಂಬರ್ 10 ರಂದು ವರ್ಲ್ಡ್‌ವೈಡ್ ಬಿಡುಗಡೆಯಾಗುತ್ತಿದೆ. ಜಯಲಲಿತಾ ಅವರ ಬಯೋಪಿಕ್ ಚಿತ್ರವನ್ನು ಎ ಎಲ್ ವಿಜಯ್ ನಿರ್ದೇಶಿಸಿದ್ದಾರೆ. ವಿಜಯಂದ್ರ ಪ್ರಸಾದ್ ಕಥೆ ಮಾಡಿದ್ದಾರೆ. ವಿಷ್ಣುವರ್ಧನ ಇಂದುರಿ, ಹಿತೇಶ್ ಟಕ್ಕರ್, ತಿರುಮಲ ರೆಡ್ಡಿ ಜಂಟಿಯಾಗಿ ಈ ಚಿತ್ರ ನಿರ್ಮಿಸಿದ್ದು, ಜೀ ಸ್ಟುಡಿಯೋಸ್ ವಿತರಣೆಗೆ ಕೈ ಜೋಡಿಸಿದೆ. ಜಯಲಲಿತಾ ಪಾತ್ರದಲ್ಲಿ ಕಂಗನಾ ರಣಾವತ್ ನಟಿಸಿದ್ದು, ಎಂಜಿಆರ್ ಪಾತ್ರದಲ್ಲಿ ಖ್ಯಾತ ನಟ ಅರವಿಂದ್ ಸ್ವಾಮಿ ಅಭಿನಯಿಸಿದ್ದಾರೆ. ಈ ಇಬ್ಬರ ಕಾಂಬಿನೇಷನ್ ಥ್ರಿಲ್ ಹೆಚ್ಚಿಸಿದೆ.

  ಕಂಗನಾ ಮುಂದಿನ ಸಿನಿಮಾಗಳು

  ಕಂಗನಾ ಮುಂದಿನ ಸಿನಿಮಾಗಳು

  ತಲೈವಿ ಸಿನಿಮಾ ಹೊರತುಪಡಿಸಿ ಕಂಗನಾ ರಣಾವತ್ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. 'ಮಣಿಕರ್ಣಿಕಾ' ಸಿನಿಮಾ ಹಿಟ್ ಆದ್ಮೇಲೆ ಭಾಗ 2 ಎರಡು ಮಾಡುವುದಾಗಿ ಘೋಷಿಸಿದ್ದಾರೆ. 'ತೇಜಸ್' ಎನ್ನುವ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. 'ದಿ ಲೆಜೆಂಡ್ ಆಫ್ ದಿಡ್ಡಾ' ಪ್ರಾಜೆಕ್ಟ್ ಸಹ ಕಂಗನಾ ಕೈಯಲ್ಲಿದೆ.

  English summary
  Bollywood Kangana Ranaut upset on Instagram for unable to add Thalaivi trailer In her account.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X