Don't Miss!
- News
ಇಂಡಿಯಾ ಗೇಟ್ ಮುಂದಿನ ಹುತಾತ್ಮರ ಸ್ಮರಣಾ ಚಿಹ್ನೆ ಸ್ಥಳಾಂತರ
- Technology
ಮೂರು ಹೊಸ JioFi ರೀಚಾರ್ಜ್ ಪ್ಲ್ಯಾನ್ ಲಾಂಚ್: ಏನೆಲ್ಲಾ ಪ್ರಯೋಜನಗಳು ಲಭ್ಯ?
- Education
CUK Recruitment 2022 : 61 ಪ್ರಾಧ್ಯಾಪಕ ಮತ್ತು ಸಹ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಮೇ.28: ಕಚ್ಚಾತೈಲ ದರ ಏರಿಕೆ: ನಿಮ್ಮ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ದರ ಇಲ್ಲಿದೆ
- Sports
IPL 2022: ಕ್ವಾಲಿಫೈಯರ್ ಪಂದ್ಯದಲ್ಲಿ ಕೊಹ್ಲಿ ಆರ್ಸಿಬಿಗೆ ಕೈಕೊಟ್ಟು ಫ್ಲಾಪ್ ಆದದ್ದು ಇದು ಮೂರನೇ ಬಾರಿ!
- Lifestyle
ಮಂಕಿಪಾಕ್ಸ್ vs ಕೊರೊನಾವೈರಸ್: ಈ ಎರಡು ವೈರಸ್ನಲ್ಲಿ ಮೈ ಮೇಲೆ ಏಳುವ ಗುಳ್ಳೆಗಳು ಹೇಗೆ ಭಿನ್ನವಾಗಿವೆ?
- Automobiles
ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಕಾರು ಮಾದರಿಗಳಿವು!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮುಂಬೈನಲ್ಲಿ ಕಂಗನಾ: ಸಿದ್ಧಿವಿನಾಯಕನ ದರ್ಶನ ಪಡೆದು ಸಂತಸ ಪಟ್ಟ ನಟಿ
ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಸಹೋದರಿ ರಂಗೋಲಿ ಜೊತೆ ಮುಂಬೈಗೆ ಆಗಮಿಸಿರುವ ಕಂಗನಾ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಕಂಗನಾ ದೇವಸ್ಥಾನದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಭಾರಿ ಭದ್ರತೆಯೊಂದಿಗೆ ಕಂಗನಾ ಮುಂಬೈನಲ್ಲಿ ಓಡಾಡುತ್ತಿದ್ದಾರೆ. ಲಾಕ್ ಡೌನ್ ಬಳಿಕ ಕಂಗನಾ ಮುಂಬೈ ಬಿಟ್ಟು ಮನಾಲಿಯಲ್ಲಿ ಕುಟುಂಬದ ಜೊತೆ ನೆಲೆಸಿದ್ದರು. ಮನಾಲಿಯಲ್ಲೇ ಕುಳಿತು ಬಾಲಿವುಡ್ ಮತ್ತು ಕೆಲವು ರಾಜಕೀಯ ವ್ಯಕ್ತಿಗಳ ವಿರುದ್ಧ ಟೀಕಾಸ್ತ್ರ ಪ್ರಯೋಗಿಸುತ್ತ, ದಿನಕೊಂದು ವಿವಾದಗಳನ್ನು ಸೃಷ್ಟಿಸಿಕೊಳ್ಳುವ ಮೂಲಕ ಸದಾ ಸುದ್ದಿಯಲ್ಲಿರುವ ನಟಿ ಕಂಗನಾ ಮುಂಬೈಗೆ ದಿಢೀರ್ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಬಿಕಿನಿ
ಧರಿಸಿದ
ಕಂಗನಾಗೆ
ನೆಟ್ಟಿಗರ
ತರಾಟೆ:
ಭೈರವಿದೇವಿ
ನಗ್ನಳಾಗಿ
ಬಂದರೆ
ಏನು
ಮಾಡುತ್ತೀರಿ
ಎಂದ
ನಟಿ
ಜೀವಬೆದರಿಕೆ ಇದೆ ಎಂದು ಈ ಹಿಂದೆ ಭಾರಿ ಭದ್ರತೆಯೊಂದಿಗೆ ಮುಂಬೈಗೆ ಆಗಮಿಸಿದ್ದ ಕಂಗನಾ, ಇದೀಗ ಮತ್ತೆ ಮಂಬೈ ನಗರದಲ್ಲಿ ಕಾಣಿಸಿಕಂಡಿದ್ದಾರೆ. ಮುಂಬೈಗೆ ಆಗಮಿಸುತ್ತಿದ್ದಂತೆ, ಕಂಗನಾ ಸಹೋದರಿ ಜೊತೆ ಗಣಪತಿ ದೇವಸ್ಥಾನಕ್ಕೆ ತೆರಳಿದ್ದಾರೆ. ಹಸಿರು ಬಣ್ಣದ ಜರಿ ಸೀರೆ ಧರಿಸಿರುವ ಕಂಗನಾ, ಅಭಿಮಾನಿಗಳತ್ತ ಕೈ ಬೀಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮುಂಬೈ ಭೇಟಿಯ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಕಂಗನಾ, 'ನನ್ನ ಪ್ರೀತಿಯ ನಗರ ಮುಂಬೈನಲ್ಲಿ ನಿಲ್ಲಲು ನಾನು ಎದುರಿಸಿದ ಹಗೆತನ ನನ್ನನ್ನು ಅಡ್ಡಿ ಪಡಿಸಿತು. ಇಂದು ನಾನು ಮುಂಬಾ ದೇವಿ ಮತ್ತು ಸಿದ್ಧಿವಿನಾಯಕ ದೇವಸ್ಥಾನಕ್ಕೆ ಹೋಗಿ ಆಶೀರ್ವಾದ ಪಡೆದಿದ್ದೀನಿ. ಸುರಕ್ಷಿತವಾಗಿ, ಪ್ರೀತಿಯಿಂದ ಮುಂಬೈ ಸ್ವಾಗತಿಸಿದೆ ಎಂದು ಭಾವಿಸುತ್ತೇನೆ. ಜೈ ಹಿಂದ್, ಜೈ ಮಹಾರಾಷ್ಟ್ರ ಎಂದು ಬರೆದುಕೊಂಡಿದ್ದಾರೆ.

ಕಂಗನಾ ಸದ್ಯ ತಲೈವಿ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಇದೀಗ ದಾಕಡ್ ಮತ್ತು ತೇಜಸ್ ಸಿನಿಮಾಗಾಗಿ ತಯಾರಿ ನಡೆಸುತ್ತಿದ್ದಾರೆ. ಮುಂದಿನ ವರ್ಷ ಜವರಿಯಿಂದ ಕಂಗನಾ ಹೊಸ ಸಿನಿಮಾ ಧಾಕಡ್ ಪ್ರಾರಂಭಿಸಲಿದ್ದಾರೆ. ಸಿನಿಮಾಗಾಗಿ ಕಂಗನಾ ತಯಾರಾಗುತ್ತಿರುವ ವಿಡಿಯೋಗಳನ್ನು ಕಂಗನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.