For Quick Alerts
  ALLOW NOTIFICATIONS  
  For Daily Alerts

  ಸದ್ಯವೇ 'ನಿಧಿ' ನಟನೆಯ ಬಾಲಿವುಡ್ ಚಿತ್ರ ತೆರೆಗೆ

  |
  <ul id="pagination-digg"><li class="next"><a href="/bollywood/nidhi-subbaiah-bollywood-movie-ajab-gazabb-love-release-068831.html">Next »</a></li></ul>

  ಯೋಗರಾಜ್ ಭಟ್ ನಿರ್ದೇಶನದ 'ಪಂಚರಂಗಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ್ದ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ, ಸದ್ಯ ಬಾಲಿವುಡ್ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಅವರು ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದು ಎಲ್ಲರಿಗೂ ಗೊತ್ತು. ಅವರು ನಾಯಕಿಯಲ್ಲದ, ಆದರೆ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿರುವ ಓ ಮೈ ಗಾಡ್ ಚಿತ್ರವು ಈಗಾಗಲೇ ಬಿಡುಗಡೆಯಾಗಿದೆ. ಅದರಲ್ಲಿ ನಿಧಿ ಅಭಿನಯದ ಬಗ್ಗೆ ಎಲ್ಲರಿಂದಲೂ ಪ್ರಶಂಸೆ ಮಾತುಗಳು ಕೇಳಿಬಂದಿವೆ.

  ಆದರೆ ಅವರು ನಾಯಕಿಯಾಗಿ ನಟಿಸಿದ 'ಅಜಬ್ ಗಜಬ್ ಲವ್' ಚಿತ್ರವು ಈ ತಿಂಗಳು 24 ರಂದು (24 ಅಕ್ಟೋಬರ್ 2012) ಈ ಬಿಡುಗಡೆಯಾಗಲಿದೆ. ನಿಧಿ ಸುಬ್ಬಯ್ಯ ನಾಯಕಿಯಾಗಿರುವ 'ಅಜಬ್ ಗಜಬ್' ಚಿತ್ರದಲ್ಲಿ ಜಾಕಿ ಭಗ್ನಾನಿ ನಾಯಕರು. ಉಳಿದಂತೆ ಅರ್ಜನ್ ರಾಮ್‌ಪಾಲ್, ಅರ್ಶಾದ್ ವಾರ್ಷಿ, ಕಿರಣ್ ಖೇರ್ ಮುಂತಾದವರು ನಟಿಸಿದ್ದಾರೆ. ಚಿತ್ರದ ನಾಯಕಿ ನಿಧಿ ಸುಬ್ಬಯ್ಯ ಬಾಲಿವುಡ್ ಗೆ ಹೊಸಬಳಾದ್ದರಿಂದ ಸಹಜವಾಗಿಯೇ ಎಲ್ಲರ ಕಣ್ಣು ನಿಧಿ ಮೇಲೆ ಬೀಳಲಿದೆ.

  ಕನ್ನಡ ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸಿರುವ ನಿಧಿ ಅವರದು ಬಾಲಿವುಡ್ ಚಿತ್ರರಂಗಕ್ಕೆ ಸೂಕ್ತವಾದ ಮುಖ ಎಂಬುದು ಇಲ್ಲಿನ ಬಹಳಷ್ಟು ಜನರ ಅಭಿಪ್ರಾಯವಾಗಿತ್ತು. ಎಲ್ಲರ ಅನಿಸಿಕೆಯಂತೆ ನಿಧಿ ಬಾಲಿವುಡ್ ಬಾಗಿಲು ತಟ್ಟಿದ್ದೂ ಆಯ್ತು, ನಟಿಸಿದ್ದೂ ಆಯ್ತು. ಈಗ ಒಂದೊಂದಾಗಿ ಚಿತ್ರಗಳು ಬಿಡುಗಡೆಯಾಗುತ್ತಿವೆ, ಬಾಲಿವುಡ್ ನಲ್ಲಿ ನಿಧಿ ಹಣೆಬರಹ ಏನು ಎಂಬುದು ಸದ್ಯವೇ ತಿಳಿದುಬರಲಿದೆ. ಎಲ್ಲರಲ್ಲೂ ಈ ಬಗ್ಗೆ ಕತೂಹಲ ಮನೆಮಾಡಿದೆ.

  ಅಚ್ಚರಿಯೆಂದರೆ, ಬಾಲಿವುಡ್ ನಲ್ಲಿ ಈಗಾಗಲೇ ನಿಧಿ ಬಗ್ಗೆ ಒಂದು ಸುತ್ತಿನ ನಿರೀಕ್ಷೆ ಮೂಡಿಯಾಗಿದೆ. ಕಾರಣ, ಪ್ರಖ್ಯಾತ ಫಿಲಂ ಫೇರ್ ನಿಯತಕಾಲಕವು ನಟಿ ನಿಧಿ ಬಗ್ಗೆ ದೊಡ್ಡ ಲೇಖನವನ್ನೇ ಪ್ರಕಟಿಸಿದೆ. ಕನ್ನಡತಿ ನಿಧಿ ಸುಬ್ಬಯ್ಯ ಪೋಟೋಗಳು ಆ ಪತ್ರಕೆಯ ಪುಟಗಳಲ್ಲಿ ರಾರಾಜಿಸುತ್ತಿವೆ. ಅಷ್ಟೇ ಅಲ್ಲ, ಮೊತ್ತೊಂದು ಪತ್ರಿಕೆ ನಿಧಿಯನ್ನು ಕತ್ರಿನಾ ಕೈಫ್, ಅನುಷ್ಕಾ ಶರ್ಮಾರಿಗೆ ಹೋಲಿಸಿದ್ದಲ್ಲದೇ, ರೇಷ್ಮೆ ಸೀರೆಯುಟ್ಟ ನಿಧಿ ಅವರಿಬ್ಬರಿಗಿಂತಲೂ ಚೆಂದ ಎಂದು ಬಣ್ಣಿಸಿದ್ದಾರೆ. ಮುಂದಿನ ಪುಟ ನೋಡಿ...

  <ul id="pagination-digg"><li class="next"><a href="/bollywood/nidhi-subbaiah-bollywood-movie-ajab-gazabb-love-release-068831.html">Next »</a></li></ul>
  English summary
  Kannada movie Pancharangi fame, actress Nidhi Subbaiah acted Bollywood Movie 'Ajab Gazabb Love' to Release on 24th October 2012 to all over the World. There is question arose that will she continue the acting at Kannada movies in future? Let us to wait and watch...&#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X