For Quick Alerts
  ALLOW NOTIFICATIONS  
  For Daily Alerts

  '83' ಸಿನಿಮಾ ಕನ್ನಡದಲ್ಲಿ ಬರಲಿ: ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಯ್ತು ಬೇಡಿಕೆ

  |

  1983ರ ಭಾರತ ಕ್ರಿಕೆಟ್ ತಂಡ ಚೊಚ್ಚಲ ಬಾರಿಗೆ ವಿಶ್ವಕಪ್ ಗೆದ್ದಿತ್ತು. ಈ ತಂಡಕ್ಕೆ ಕಪಿಲ್ ದೇವ್ ನಾಯಕರಾಗಿದ್ದರು. ಈ ವಿಶ್ವಕಪ್ ಟೂರ್ನಿಯ ಜರ್ನಿ ಸುತ್ತ ಬಾಲಿವುಡ್ ನಲ್ಲಿ '83' ಸಿನಿಮಾ ತಯಾರಾಗಿದೆ.

  ಕಬೀರ್ ಖಾನ್ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ರಣ್ವೀರ್ ಸಿಂಗ್ ಪ್ರಮುಖ ಪಾತ್ರ ಮಾಡಿದ್ದಾರೆ. ವಿಶ್ವಕಪ್ ತಂಡದ ನಾಯಕ ಕಪಿಲ್ ದೇವ್ ಆಗಿ ಕಾಣಿಸಿಕೊಂಡಿದ್ದಾರೆ.

  ಈ ಸಿನಿಮಾ ಹಿಂದಿ ಭಾಷೆಯಲ್ಲಿ ತಯಾರಾಗಿದ್ದು, ಏಪ್ರಿಲ್ 10 ರಂದು ಜಗತ್ತಿನಾದ್ಯಂತ ತೆರೆಗೆ ಬರ್ತಿದೆ. ಇದೀಗ, ಕರ್ನಾಟಕದಲ್ಲಿ 83 ಸಿನಿಮಾ ಕನ್ನಡದಲ್ಲಿ ಬಿಡುಗಡೆಯಾಗಲಿ ಎಂಬ ಕೂಗು ಜೋರಾಗಿದೆ. ವಿಶ್ವಕಪ್ ಗೆದ್ದ ತಂಡದಲ್ಲಿ ಕರ್ನಾಟಕ ಆಟಗಾರರಾದ ಸೈಯಾದ್ ಕೀರ್ಮಾನಿ ಮತ್ತು ರೋಜರ್ ಬಿನ್ನಿ ಇದ್ದರು. ಕನ್ನಡದಲ್ಲಿ ಸಿನಿಮಾ ರಿಲೀಸ್ ಆದರೆ, ಕರ್ನಾಟಕದಲ್ಲಿ ಒಳ್ಳೆಯ ಯಶಸ್ಸು ಕಾಣುತ್ತೆ ಎಂದು ಒತ್ತಾಯಿಸುತ್ತಿದ್ದಾರೆ.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆನೇ ಚಾಲೆಂಜ್ ಮಾಡಿದ ರಣ್ವೀರ್ ಸಿಂಗ್ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆನೇ ಚಾಲೆಂಜ್ ಮಾಡಿದ ರಣ್ವೀರ್ ಸಿಂಗ್

  ಈ ಸಂಬಂಧ ಫೆಬ್ರವರಿ 18 ರಂದು ಸಂಜೆ ಟ್ವಿಟ್ಟರ್ ನಲ್ಲಿ #83TheMovieInKannada ಎಂಬ ಹ್ಯಾಷ್ ಟ್ಯಾಗ್ ನಲ್ಲಿ ಟ್ರೆಂಡಿಂಗ್ ಹುಟ್ಟುಹಾಕಿದ್ದರು.

  'ನಮ್ಮ ದೇಶದವರು ಮೊದಲ ಬಾರಿ ವಿಶ್ವಕಪ್ ಗೆದ್ದ ಕತೆಯನ್ನು ನಾವು ಕನ್ನಡದಲ್ಲಿ ನೋಡಲು ಕಾತರರಾಗಿದ್ದೇವೆ. ಕರ್ನಾಟಕದಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಏನೂ ಕೊರತೆಯಿಲ್ಲ. ಅಂತೆಯೇ ಕ್ರಿಕೆಟ್ ಕತೆಯನ್ನು ಹೇಳುವ ಸಿನಿಮಾ ಅಭಿಮಾನಿಗಳಿಗೂ ಏನೂ ಕೊರತೆಯಿಲ್ಲ. ಸಿನೆಮಾ 83 ಕನ್ನಡದಲ್ಲಿ ಬರಲಿ' ಎಂದು ಬೇಡಿಕೆ ಇಟ್ಟಿದ್ದಾರೆ.

  ಇತ್ತೀಚಿನ ದಿನಗಳಲ್ಲಿ ಪರಭಾಷೆಯ ದೊಡ್ಡ ದೊಡ್ಡ ಸಿನಿಮಾಗಳು ಕನ್ನಡದಲ್ಲಿ ಬಿಡುಗಡೆಯಾಗಿದೆ. ಚಿರಂಜೀವಿ ನಟನೆಯ ಸೈರಾ ನರಸಿಂಹ ರೆಡ್ಡಿ, ಸಲ್ಮಾನ್ ಖಾನ್ ನಟನೆಯ ದಬಾಂಗ್ 3 ಸಿನಿಮಾ ಚಿತ್ರಮಂದಿರದಲ್ಲಿ ರಿಲೀಸ್ ಆಗಿದ್ದರೆ, ವಿಜಯ್ ಅಭಿನಯದ ಬಿಗಿಲ್ ಕಿರುತೆರೆಯಲ್ಲಿ ಪ್ರಸಾರವಾಗಿತ್ತು.

  ಕರ್ನಾಟಕದಲ್ಲಿ ಡಬ್ಬಿಂಗ್ ಇಷ್ಟ ಪಡುವ ಪ್ರೇಕ್ಷಕರ ಈ ಬೇಡಿಕೆಯನ್ನು 83 ಚಿತ್ರತಂಡ ಸ್ವೀಕರಿಸುತ್ತಾ? ಕನ್ನಡದಲ್ಲಿ ಈ ಸಿನಿಮಾ ರಿಲೀಸ್ ಮಾಡಲು ಮುಂದಾಗುತ್ತಾ? ಕಾದು ನೋಡಬೇಕಿದೆ.

  English summary
  Ranveer singh starrer 83 movie set to release on april month in hindi language. kannada audience demanding this movie wnt to release in kannada also.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X