For Quick Alerts
  ALLOW NOTIFICATIONS  
  For Daily Alerts

  ಹಿಂದಿಯಲ್ಲಿ ಐದು ವಾರ ಮುಗಿಸಿದ 'ಕಾಂತಾರ'; ನೂರು ಕೋಟಿ ಕ್ಲಬ್ ಸೇರುವುದು ಡೌಟ್!

  |

  ರಿಷಬ್ ಶೆಟ್ಟಿ ನಟನೆಯ ಹಾಗೂ ನಿರ್ದೇಶನದ ಕಾಂತಾರ ಚಿತ್ರ ಈ ವರ್ಷ ಪ್ರತಿಯೊಬ್ಬ ಸಿನಿ ಪ್ರೇಕ್ಷಕನನ್ನು ಒಂದಲ್ಲ ಒಂದು ವಿಷಯಕ್ಕೆ ಅಚ್ಚರಿಗೊಳಗಾಗುವಂತೆ ಮಾಡಿದ ಚಿತ್ರ. ಮುಖ್ಯವಾಗಿ ಕಲೆಕ್ಷನ್ ವಿಚಾರದಲ್ಲಿ ಕಾಂತಾರ ಅಕ್ಷರಶಃ ಎಲ್ಲರನ್ನೂ ಬೆರಗಾಗುವಂತೆ ಮಾಡಿದ್ದು ಸುಳ್ಳಲ್ಲ. ಯಾವುದೇ ದೊಡ್ಡ ಮಟ್ಟದ ನಿರೀಕ್ಷೆ ಹಾಗೂ ಭರ್ಜರಿ ಪ್ರಚಾರದ ಬಿಲ್ಡ್‌ಅಪ್ ಇಲ್ಲದೇ ಬಿಡುಗಡೆಗೊಂಡ ಕಾಂತಾರ ಈ ಮಟ್ಟಿಗೆ ಕಲೆಕ್ಷನ್ ಮಾಡಲಿದೆ ಎಂದು ಯಾರೊಬ್ಬರೂ ಸಹ ಊಹಿಸಿರಲಿಲ್ಲ.

  ಇನ್ನು ಚಿತ್ರ ಪ್ಯಾನ್ ಇಂಡಿಯಾ ಮಟ್ಟದ್ದು, ಇದನ್ನು ಪರಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಬೇಕು ಎಂಬ ಉದ್ದೇಶ ಸ್ವತಃ ಚಿತ್ರತಂಡಕ್ಕೂ ಇರಲಿಲ್ಲ. ಹೀಗಾಗಿಯೇ ಮೊದಲಿಗೆ ಕನ್ನಡದಲ್ಲಿ ಮಾತ್ರ ಕಾಂತಾರ ಚಿತ್ರವನ್ನು ಬಿಡುಗಡೆ ಮಾಡಲಾಗಿತ್ತು. ಅನಂತರ ವ್ಯಕ್ತವಾದ ಅಭೂತಪೂರ್ವ ಪ್ರಶಂಸೆಯನ್ನು ಕಂಡ ಹೊಂಬಾಳೆ ಫಿಲ್ಮ್ಸ್ ಚಿತ್ರವನ್ನು ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ಡಬ್ ಮಾಡಿ ಪ್ಯಾನ್ ಇಂಡಿಯಾ ಮಟ್ಟಕ್ಕೆ ಬಿಡುಗಡೆಗೊಳಿಸಿತು.

  'ಕಾಂತಾರ' ಗೆಲುವನ್ನು ಪಂಜುರ್ಲಿ,ಗುಳಿಗ ದೈವಗೆ ಅರ್ಪಿಸಿದ ರಿಷಬ್ ಶೆಟ್ಟಿ: 50 ದಿನದಲ್ಲಾದ ಕಲೆಕ್ಷನ್ ಇಷ್ಟು! 'ಕಾಂತಾರ' ಗೆಲುವನ್ನು ಪಂಜುರ್ಲಿ,ಗುಳಿಗ ದೈವಗೆ ಅರ್ಪಿಸಿದ ರಿಷಬ್ ಶೆಟ್ಟಿ: 50 ದಿನದಲ್ಲಾದ ಕಲೆಕ್ಷನ್ ಇಷ್ಟು!

  ಮೊದಲಿಗೆ ಕಾಂತಾರ ಹಿಂದಿ ಅವತರಣಿಕೆ ಅಕ್ಟೋಬರ್ 14ರಂದು ಬಿಡುಗಡೆಗೊಂಡು ಸದ್ಯ ಯಶಸ್ವಿ ಐದು ವಾರಗಳನ್ನು ಪೂರೈಸಿದೆ. ಮೊದಲ ದಿನ ಹಿಂದಿಯಲ್ಲಿ ಒಂದೂವರೆ ಕೋಟಿ ಗಳಿಸಿದ ಕಾಂತಾರ ನಂತರದ ದಿನಗಳಲ್ಲಿ ಹೆಚ್ಚು ಹೆಚ್ಚು ಗಳಿಕೆ ಮಾಡಿತು. ಇನ್ನು ಕಲೆಕ್ಷನ್ ವೇಗ ನೋಡಿದ ಸಿನಿ ಪಂಡಿತರು ಹಿಂದಿಯೊಂದರಲ್ಲಿಯೇ ಕಾಂತಾರ ಚಿತ್ರ ನೂರು ಕೋಟಿ ಗಳಿಕೆ ಮಾಡಲಿದೆ ಎಂಬ ಊಹೆಯನ್ನು ಮಾಡಿದ್ದರು. ಆದರೆ ಕಾಂತಾರ ಚಿತ್ರದ ಓಟಿಟಿ ದಿನಾಂಕ ಘೋಷಣೆಯಾಗಿದ್ದು, ಬಿಡುಗಡೆಯ ದಿನ ಸಮೀಪಿಸುತ್ತಿದೆ. ಹೀಗಾಗಿ ಕಾಂತಾರ ಹಿಂದಿಯಲ್ಲಿ ನೂರು ಕೋಟಿ ಕ್ಲಬ್ ಸೇರುವುದು ಅನುಮಾನವಾಗಿದೆ.

  ಇಲ್ಲಿಯವರೆಗೂ ಎಷ್ಟು ಗಳಿಸಿದೆ 'ಕಾಂತಾರ ಹಿಂದಿ?'

  ಇಲ್ಲಿಯವರೆಗೂ ಎಷ್ಟು ಗಳಿಸಿದೆ 'ಕಾಂತಾರ ಹಿಂದಿ?'

  ಕಾಂತಾರ ಚಿತ್ರ ಹಿಂದಿಯಲ್ಲಿ ಯಶಸ್ವಿಯಾಗಿ ಐದು ವಾರಗಳನ್ನು ಪೂರೈಸಿದ ನಂತರ 78.95 ಕೋಟಿ ಗಳಿಕೆ ಮಾಡಿದ್ದು, ನೂರು ಕೋಟಿ ಕ್ಲಬ್ ಸೇರಲು ಇನ್ನೂ 21.05 ಕೋಟಿ ರೂಪಾಯಿಗಳನ್ನು ಗಳಿಸಬೇಕಿದೆ. ಇನ್ನು ಕಾಂತಾರ ಚಿತ್ರದ ಓಟಿಟಿ ಬಿಡುಗಡೆ ಸಹ ಮುಂದಿನ ವಾರವೇ ಇದ್ದು ಇಷ್ಟರೊಳಗೆ ಕಾಂತಾರ ಇಷ್ಟು ದೊಡ್ಡ ಮೊತ್ತವನ್ನು ಕಲೆಹಾಕುವುದು ಅನುಮಾನ. ಏನೇ ಆಗಲಿ ಹದಿನಾರು ಕೋಟಿ ವೆಚ್ಚದಲ್ಲಿ ತಯಾರಾದ ಕಾಂತಾರ ಮುನ್ನೂರು ಕೋಟಿ ಗಳಿಸಿರುವುದು ಬೃಹತ್ ಸಾಧನೆಯೇ ಸರಿ.

  ಐದು ವಾರಗಳ ಕಲೆಕ್ಷನ್ ವಿವರ

  ಐದು ವಾರಗಳ ಕಲೆಕ್ಷನ್ ವಿವರ

  ಕಾಂತಾರ ಹಿಂದಿಯಲ್ಲಿ ಐದು ವಾರಗಳಲ್ಲಿ ಪ್ರತಿ ವಾರ ಗಳಿಸಿದ್ದೆಷ್ಟು ಎಂಬ ಪಟ್ಟಿ ಇಲ್ಲಿದೆ..

  ಮೊದಲನೇ ವಾರ: 15 ಕೋಟಿ

  ಎರಡನೇ ವಾರ: 16.7 ಕೋಟಿ

  ಮೂರನೇ ವಾರ: 19.95 ಕೋಟಿ

  ನಾಲ್ಕನೇ ವಾರ: 18.10 ಕೋಟಿ

  ಐದನೇ ವಾರ: 9.20 ಕೋಟಿ

  ಓಟಿಟಿ ದಿನಾಂಕ ಹೊರಬಿದ್ದ ನಂತರ ಕಲೆಕ್ಷನ್ ಡೌನ್!

  ಓಟಿಟಿ ದಿನಾಂಕ ಹೊರಬಿದ್ದ ನಂತರ ಕಲೆಕ್ಷನ್ ಡೌನ್!

  ಇನ್ನು ಕಾಂತಾರ ಅಮೆಜಾನ್ ಪ್ರೈಮ್ ವಿಡಿಯೊ ಅಪ್ಲಿಕೇಶನ್‌ನಲ್ಲಿ ಇದೇ ತಿಂಗಳ 24ರಂದು ಸ್ಟ್ರೀಮ್ ಆಗಲಿದೆ ಎಂಬ ವಿಷಯ ಕಳೆದ ಐದಾರು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಇದರ ಪರಿಣಾಮ ಕಲೆಕ್ಷನ್ ಮೇಲೆ ಬಿದ್ದಿದೆ ಎಂಬುದನ್ನು ಐದನೇ ವಾರದ ಕಲೆಕ್ಷನ್ ನೋಡಿದರೆ ಸ್ಪಷ್ಟವಾಗಿ ತಿಳಿಯಬಹುದಾಗಿದೆ.

  English summary
  Kantara will fail to collect 100 crores in Hindi belt as it's OTT date announced. Read on
  Friday, November 18, 2022, 19:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X