»   » ಕರಣ್-ಅರ್ಜುನ್ ಮತ್ತೆ ಒಂದಾಗಿ ಬರುವ ಕಾಲ ಬರುತ್ತಾ?

ಕರಣ್-ಅರ್ಜುನ್ ಮತ್ತೆ ಒಂದಾಗಿ ಬರುವ ಕಾಲ ಬರುತ್ತಾ?

Posted By:
Subscribe to Filmibeat Kannada

ಮುಂಬೈ, ಜ. 13: ಇಂದು ಶಾರುಖ್ ಮತ್ತು ಸಲ್ಮಾನ್ ಭೇಟಿಯಾದರೆ ಸುದ್ದಿಯಾಗುತ್ತದೆ. ಇಬ್ಬರ ಮಧ್ಯೆ ಅಷ್ಟು ಜಟಾಪಟಿ ನಡೆದಿದೆ. ಸನ್ಮಾನ್ ಖಾನ್‌ ಚಿತ್ರವೊಂದರಲ್ಲಿ ಅತಿಥಿ ನಟನಾಗಲು ಶಾರುಖ್ ನಿರಾಕರಿಸಿದಾಗ ಹುಟ್ಟಿಕೊಂಡ ದ್ವೇಷ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಬರುತ್ತಿದೆ. ಅಲ್ಲಲ್ಲಿ ಭೇಟಿಯಾಗುತ್ತಿದ್ದರೂ ಸ್ನೇಹಿತರಾಗುವ ಯಾವ ಲಕ್ಷಣವೂ ಇಲ್ಲ.

ಆದರೆ, 90ರ ದಶಕದಲ್ಲಿ ಹೀಗಿರಲಿಲ್ಲ. ಶಾರುಖ್ ಹಾಗೂ ಸಲ್ಮಾನ್ ಇಬ್ಬರೂ ಬಾಲಿವುಡ್‌ನಲ್ಲಿ ದಿನದಿಂದ ದಿನಕ್ಕೆ ಪ್ರವರ್ಧಮಾನಕ್ಕೆ ಬರುತ್ತಿದ್ದ ಕಾಲ ಅದು. ಅವರು ನಟಿಸಿದ್ದ 'ಕರಣ್-ಅರ್ಜುನ್' ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಗಲ್ಲಾ ಪೆಟ್ಟಿಗೆಯನ್ನು ಕೊಳ್ಳೆ ಹೊಡೆದಿತ್ತು. ಕರಣ್-ಅರ್ಜುನ್ ಪಾತ್ರದಲ್ಲಿ ನಟಿಸಿದ್ದ ಶಾರುಖ್-ಸಲ್ಮಾನ್ ಯುವಜನರ ಹೃದಯದಲ್ಲಿ ಸ್ಥಾನ ಪಡೆದುಬಿಟ್ಟಿದ್ದರು. [ಶಾರುಖ್ ಈ ಮಟ್ಟಕ್ಕೆ ಬೆಳೆಯೋಕೆ ಸಲ್ಮಾನ್ ಕಾರಣ]

salman

ಇದರಲ್ಲಿ ಮಮತಾ ಕುಲಕರ್ಣಿ ಸಲ್ಮಾನ್ ಜೊತೆ ಹಾಗೂ ಕಾಜೋಲ್ ತನ್ನ ಎವರ್ ಗ್ರೀನ್ ಜೋಡಿ ಶಾರುಖ್ ಜೊತೆ ನಟಿಸಿದ್ದರು. ರಾಕೇಶ್ ರೋಶನ್ ನಿರ್ದೇಶಿಸಿ, ನಿರ್ಮಾಣ ಮಾಡಿದ್ದ ಈ ಸಿನಿಮಾಕ್ಕೀಗ ಭರ್ತಿ 20 ವರ್ಷ ತುಂಬಿದೆ. [ಅಗ್ರಸ್ಥಾನದಿಂದ ಶಾರುಖ್ ಕೆಳತಳ್ಳಿದ ಸಲ್ಮಾನ್]

ರಾಖಿ ಅವರು ಬರೆದಿದ್ದ ಸಂಭಾಷಣೆ ಅಂದಿನ ಜನರ ಬಾಯಲ್ಲಿ ಕಂಠಪಾಠವಾಗಿತ್ತು. 'ಮೇರೆ ಕರಣ್ ಅರ್ಜುನ್ ಆಯೇಂಗೆ' ಮಾತು ಇಂದಿಗೂ ಜನಪ್ರಿಯತೆ ಕಳೆದುಕೊಂಡಿಲ್ಲ. ಈ ಚಿತ್ರದ ಹಾಡುಗಳನ್ನು ರಾಜೇಶ್ ರೋಶನ್ ಬರೆದಿದ್ದರು. ಪ್ರತಿ ಹಾಡು ಹೃದಯಸ್ಪರ್ಶಿಯಾಗಿತ್ತು. [ಸಹಸ್ರ ಸಂಭ್ರಮದಲ್ಲಿ ಡಿಡಿಎಲ್ ಜೆ]

ಸಿನಿಮಾಕ್ಕೆ 20 ವರ್ಷ ತುಂಬಿದ ಸಂಭ್ರಮದಲ್ಲಾದರೂ ಕರಣ್-ಅರ್ಜುನ್ ಮತ್ತೆ ಒಂದಾಗ್ತಾರಾ...? ಕಾಲವೇ ಹೇಳಬೇಕು.

English summary
One of the most iconic films of 1990s 'Karan Arjun' starring Salman Khan and Shah Rukh Khan has completed 20 years of release on Tuesday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada