»   » 'ಮುಷ್ಕಿಲ್' ನಲ್ಲಿ ಕರಣ್: ಗೃಹ ಸಚಿವರ ಸಹಾಯ ಕೇಳಿದ ಚಿತ್ರತಂಡ

'ಮುಷ್ಕಿಲ್' ನಲ್ಲಿ ಕರಣ್: ಗೃಹ ಸಚಿವರ ಸಹಾಯ ಕೇಳಿದ ಚಿತ್ರತಂಡ

By: ಸೋನು ಗೌಡ
Subscribe to Filmibeat Kannada

ಉರಿ ಅಟ್ಯಾಕ್ ನ ಪರಿಣಾಮ, ಪಾಕ್ ನಟರಿಗೆ ಭಾರತದಲ್ಲಿ ಅವಕಾಶ ಕೊಡಬಾರದು ಅಂತ ಎಲ್ಲಾ ಕಡೆ ವ್ಯಾಪಕ ಪ್ರತಿಭಟನೆ, ಚರ್ಚೆ ಮತ್ತು ವಾದ-ವಿವಾದಗಳು ನಡೆಯುತ್ತಿವೆ. ಈ ಪ್ರತಿಭಟನೆಯ ಬಿಸಿ ಇದೀಗ ಕರಣ್ ಜೋಹರ್ ನಿರ್ದೇಶನದ 'ಏ ದಿಲ್ ಹೈ ಮುಷ್ಕಿಲ್' ಚಿತ್ರಕ್ಕೆ ತಟ್ಟಿದೆ.

ಕರಣ್ ಜೋಹರ್ ಅವರು ಪಾಕ್ ನಟ ಫವಾದ್ ಖಾನ್ ಅವರನ್ನು ತಮ್ಮ ಚಿತ್ರದಲ್ಲಿ ಹಾಕಿಕೊಂಡ ಕಾರಣ ಅವರಿಗೆ, ಮುಷ್ಕಿಲ್ (ಸಮಸ್ಯೆ) ಆಗಿರೋದು ಎಲ್ಲರಿಗೂ ಗೊತ್ತಿದೆ. ಆದ್ದರಿಂದ ಕರಣ್ ಜೋಹರ್ ಅವರು ಹೇಗೆ ಸಿನಿಮಾ ಬಿಡುಗಡೆ ಮಾಡ್ತಾರೆ ನೋಡೋಣ ಅಂತ ಕೆಲವು ಸಂಘಟನೆಗಳು ಸವಾಲೆಸೆದಿವೆ.[ಅಜಯ್ ದೇವಗನ್ ಸಿನ್ಮಾ ಸೋಲಿಸಲು 'ಸುಪಾರಿ' ಕೊಟ್ಟ ಕರಣ್]

ಸಂಘಟನೆಗಳ ಈ ಸವಾಲಿಗೆ ಹೆದರಿದ ನಿರ್ದೇಶಕ ಕರಣ್ ಜೋಹರ್ ಅವರು ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ರಣಬೀರ್ ಕಪೂರ್, ಐಶ್ವರ್ಯ ರೈ, ಅನುಷ್ಕಾ ಶರ್ಮಾ ಮತ್ತು ಫವಾದ್ ಖಾನ್ ನಟಿಸಿರುವ 'ಏ ದಿಲ್ ಹೈ ಮುಷ್ಕಿಲ್' ಚಿತ್ರಕ್ಕೆ ಬಿಡುಗಡೆಗೆ ಮುನ್ನವೇ ಮೇಲಿಂದ ಮೇಲೆ ಕಂಟಕಗಳು ಎದುರಾಗುತ್ತಿವೆ. ಮುಂದೆ ಓದಿ...

ರಾಜ್ ಠಾಕ್ರೆಯಿಂದ ಎಚ್ಚರಿಕೆ

ಪಾಕಿಸ್ತಾನಿ ನಟ ಫವಾದ್ ಖಾನ್ ನಟಿಸಿರುವ 'ಏ ದಿಲ್ ಹೈ ಮುಷ್ಕಿಲ್' ಚಿತ್ರವನ್ನು ಮಹಾರಾಷ್ಟ್ರದ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದರೆ ಪರಿಣಾಮ ನೆಟ್ಟಗಿರೋದಿಲ್ಲ ಅಂತ, ಮಹಾರಾಷ್ಟ್ರದ ನವನಿರ್ಮಾಣ್ ಸೇನಾ ಸಮಿತಿಯ (MNS) ಮುಖ್ಯಸ್ಥ ರಾಜ್ ಠಾಕ್ರೆ, ಕರಣ್ ಜೋಹರ್ ಮತ್ತು ನಿರ್ಮಾಣ ಸಂಸ್ಥೆ ಧರ್ಮ ಪ್ರೊಡಕ್ಷನ್ ಗೆ ಎಚ್ಚರಿಕೆ ನೀಡಿದ್ದಾರೆ.[18 ವರ್ಷಗಳ ಹಿಂದೆ ಐಶ್-ರಣಬೀರ್ ಕಪೂರ್ ಹೇಗಿದ್ರು ಗೊತ್ತಾ?]

ಗಾಜುಗಳು ಪೀಸ್-ಪೀಸ್ ಆಗಬಹುದು

MNS ಸಮಿತಿಯ ಎಚ್ಚರಿಕೆಯನ್ನು ಮೀರಿ ಮಹಾರಾಷ್ಟ್ರದ ಮಲ್ಟಿಪ್ಲೆಕ್ಸ್ ಗಳಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಿದರೆ, ಮಲ್ಟಿಪ್ಲೆಕ್ಸ್ ಗಳ ಗಾಜುಗಳು ಪುಡಿಯಾಗಬಹುದು ಎಂದು ಕೂಡ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ. ಈ ಮೊದಲು ಮಹಾರಾಷ್ಟ್ರದ ಸಿ.ಎಂ ದೇವೇಂದ್ರ ಫಡ್ನವಿಸ್ ಅವರು, 'ಏ ದಿಲ್ ಹೈ ಮುಷ್ಕಿಲ್' ಚಿತ್ರ ಪ್ರದರ್ಶನ ಕಾಣುವ ಎಲ್ಲಾ ಚಿತ್ರಮಂದಿರಗಳಿಗೂ ಬಿಗಿ ಭದ್ರತೆ ಒದಗಿಸುವುದಾಗಿ ಮಾತು ಕೊಟ್ಟಿದ್ದರು. ಆದರೆ ಇದಕ್ಕೆ MNS ಸಮಿತಿ ಮಾತ್ರ ಸುತಾರಾಂ ಒಪ್ಪುತ್ತಿಲ್ಲ.[ರಣಬೀರ್ ಜೊತೆ ಲಿಪ್ ಲಾಕ್ ನೋ ಎಂದ ಐಶ್ ಗೆ ಕರಣ್ ಮಾಡಿದ್ದೇನು?]

12 ಕಾರ್ಯಕರ್ತರ ಬಂಧನ

ರಾಜ್ಯದ ಮುಖ್ಯಮಂತ್ರಿಗಳ ಮಾತನ್ನೇ ಮೀರಿ, 'ಏ ದಿಲ್ ಹೈ ಮುಷ್ಕಿಲ್' ಚಿತ್ರದ ವಿರುದ್ಧ ದಕ್ಷಿಣ ಮುಂಬೈ ಮೆಟ್ರೋ ಸಿನಿಮಾದ ಹೊರಗಡೆ MNS ಕಾರ್ಯಕರ್ತರು ನಡೆಸಿದ ಪ್ರತಿಭಟನೆ ನಡೆಸಿದ್ದರು. ಆದ್ದರಿಂದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸುಮಾರು 12 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ತಕ್ಷಣ ಅವರನ್ನು ನ್ಯಾಯಾಲಯದ ಎದುರು ಹಾಜರುಪಡಿಸಿದ ಪರಿಣಾಮ ಇದೀಗ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ.

ಗೃಹ ಸಚಿವರನ್ನು ಭೇಟಿ ಮಾಡಿದ ಕರಣ್

MNS ಕಾರ್ಯಕರ್ತರ ಪುಂಡಾಟದಿಂದ ಹಾಗೂ ತಮಗೆ ಬಂದ ಬೆದರಿಕೆಯ ಪರಿಣಾಮ, ಬೇಸತ್ತ ನಿರ್ದೇಶಕ ಕರಣ್ ಜೋಹರ್ ಅವರು ನಿರ್ಮಾಪಕರಾದ ಮುಖೇಶ್ ಭಟ್ ಮತ್ತು ಸಿದ್ದಾರ್ಥ್ ರಾಯ್ ಕಪೂರ್ ಅವರ ಜೊತೆಗೂಡಿ, ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದಾರೆ. ಇನ್ನು ಗೃಹ ಸಚಿವರು ಏನು ನಿರ್ಧಾರ ಕೈಗೊಳ್ಳುತ್ತಾರೆ, ಚಿತ್ರದ ಬಿಡುಗಡೆಯ ಮುಂದಿನ ಬೆಳವಣಿಗೆಗಳು ಏನೇನಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ಕರಣ್ ಜೋಹರ್ ಹೇಳಿಕೆ

ಇನ್ನುಮುಂದಿನ ದಿನಗಳಲ್ಲಿ ನನ್ನ ಯಾವುದೇ ಹೊಸ ಸಿನಿಮಾಗಳಲ್ಲಿ ಪಾಕ್ ನಟ-ನಟಿಯರನ್ನು ಬಳಸಿಕೊಳ್ಳುವುದಿಲ್ಲ. ನನ್ನ ಮೊದಲ ಆದ್ಯತೆ ನಮ್ಮ ದೇಶ. ನನಗೆ ದೇಶವೇ ಮುಖ್ಯ ಹೊರತು ನಟರಲ್ಲ. ಎಂದು ನಿರ್ದೇಶಕ ಕರಣ್ ಜೋಹರ್ ಅವರು ವಿಡಿಯೋ ಒಂದನ್ನು ಬಿಡುಗಡೆ ಮಾಡುವ ಮೂಲಕ ತಮ್ಮ ಹೇಳಿಕೆ ನೀಡಿದ್ದರು.

English summary
Filmmaker-director Karan Johar will meet Union Home Minister Rajnath Singh on Thursday (October 20) to discuss the threats he has received over the release of his film ‘Ae Dil Hain Muskhil’ that stars Pakistani actor Fawad Khan. Johar will be accompanied by film producers Mukesh Bhatt and Siddharth Roy Kapur.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada