For Quick Alerts
  ALLOW NOTIFICATIONS  
  For Daily Alerts

  ಎರಡನೇ ಮಗು ನಿರೀಕ್ಷೆಯಲ್ಲಿ ಕರೀನಾ ಕಪೂರ್-ಸೈಫ್ ದಂಪತಿ!

  |

  ಬಾಲಿವುಡ್ ನಟಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ದಂಪತಿ ಸರ್ಪ್ರೈಸ್ ಸುದ್ದಿಯೊಂದನ್ನು ನೀಡಿದ್ದಾರೆ ಎಂಬ ವಿಚಾರ ಬಿಟೌನ್‌ ಗಲ್ಲಿಯಲ್ಲಿ ಸದ್ದು ಮಾಡ್ತಿದೆ.

  Upendra ಕ್ರಿಕೆಟ್ಆಡಿದ್ದು ಹೀಗೆ | I love you behind the scenes

  ಕರೀನಾ ಕಪೂರ್ ಎರಡನೇ ಬಾರಿ ಗರ್ಭಿಣಿಯಾಗಿದ್ದು, ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕರೀನಾ ಆಗಲಿ ಅಥವಾ ಸೈಫ್ ಖಾನ್ ಆಗಲಿ ಖಚಿತ ಪಡಿಸಿಲ್ಲ. ಆದರೆ, ಖ್ಯಾತ ಮನರಂಜನಾ ವೆಬ್‌ಸೈಟ್ ಪೀಪಿಂಗ್‌ಮೂನ್.ಕಾಮ್ ಗೆ ವಿಶ್ವಾಸಾರ್ಹ ಮೂಲಗಳು ದೃಢಪಡಿಸಿದೆ ಎಂದು ವರದಿ ಮಾಡಿದೆ.

  ಆ ಸಿನಿಮಾದಲ್ಲಿ ನಟಿಸಿದ್ದರೆ ನಾನು ಸೈಫ್ ಅಲಿ ಖಾನ್ ಅನ್ನು ಮದುವೆಯಾಗುತ್ತಿರಲಿಲ್ಲ: ಕರೀನಾ

  2012ರಲ್ಲಿ ಸೈಫ್ ಅಲಿ ಖಾನ್ ಜೊತೆ ವಿವಾಹವಾಗಿದ್ದ ಕರೀನಾ ಕಪೂರ್, 2016ರಲ್ಲಿ ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದರು. ಗಂಡು ಮಗುವಿಗೆ ತೈಮೂರ್ ಅಲಿ ಖಾನ್ ಎಂದು ನಾಮಕರಣ ಸಹ ಮಾಡಿದ್ದರು.

  ಇಷ್ಟು ದಿನ ಲಾಕ್‌ಡೌನ್ ಇದ್ದ ಕಾರಣ ಶೂಟಿಂಗ್, ಸಿನಿಮಾ ಹಾಗೂ ಇನ್ನಿತರ ಯಾವುದೇ ಕಾರ್ಯಕ್ರಮಗಳು ಇರಲಿಲ್ಲ. ಪತಿ ಸೈಫ್ ಹಾಗೂ ಮಗ ತೈಮೂರ್ ಜೊತೆ ಕಾಲ ಕಳೆಯುತ್ತಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಈ ಕುರಿತು ಹೊಸ ಹೊಸ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದರು.

  ಪ್ರಸ್ತುತ, ಅಮೀರ್ ಖಾನ್ ಜೊತೆ ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ಕರೀನಾ ನಟಿಸಿದ್ದು, ಚಿತ್ರೀಕರಣ ಸಹ ಮುಗಿದಿದೆ. ಇದಾದ ಬಳಿಕ, ಯಾವುದೇ ಹೊಸ ಸಿನಿಮಾಗೆ ಸಹಿ ಹಾಕಿಲ್ಲ.

  English summary
  Bollywood star Kareena Kapoor and saif ali khan expecting second baby

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X