»   » ಇವರಿಗೆಲ್ಲಾ ಸೆಕೆಂಡ್ ಹ್ಯಾಂಡ್ ಪತಿಯೇ ಪರದೈವ

ಇವರಿಗೆಲ್ಲಾ ಸೆಕೆಂಡ್ ಹ್ಯಾಂಡ್ ಪತಿಯೇ ಪರದೈವ

Posted By:
Subscribe to Filmibeat Kannada

ಈ ಸಿನೆಮಾ ತಾರೆಗಳ ಪರ್ಸನಲ್ ವಿಚಾರ ನಮಗ್ಯಾಕೆ ಬಿಡಿ ಎಂದು ಸುಮ್ಮನಿದ್ದರೂ ಕಣ್ಣಿಗೆ, ಕಿವಿಗೆ ಇವರ ವಿಚಾರಗಳು ಬೀಳುತ್ತಲೇ ಇರುತ್ತವೆ. ಇವರ ವೈಯಕ್ತಿಕ ಜೀವನ ಇವರನ್ನೇ ದೇವರೆಂದು ಆರಾಧಿಸುವ ಪ್ರೇಕ್ಷಕರಿಗೂ ಸ್ಫೂರ್ತಿಯಾಗಬಹುದಲ್ಲವೆ? ಸೆಕೆಂಡ್ ಹ್ಯಾಂಡ್ ಗಂಡನನ್ನು ಈ ತಾರಾಮಣಿಗಳು ಯಾಕಿಷ್ಟು ಬಯಸುತ್ತಿದ್ದಾರೋ ಗೊತ್ತಿಲ್ಲ. ಅಂತಹ ಕೆಲವು ಜೋಡಿಗಳ ವಿಚಾರ ಇಲ್ಲಿದೆ ನೋಡಿ.

ಕನಸಿನ ಕನ್ಯೆ ಹೇಮಾ ಮಾಲಿನಿಯಿಂದ ಹಿಡಿದು ಈಗಿನ ತಾರಾಮಣಿ ಕರೀನಾ ಕಪೂರ್ ವರೆಗೂ ಸೆಕೆಂಡ್ ಹ್ಯಾಂಡ್ ಗಂಡನಿಗೆ ಗಂಡುಬಿದ್ದವರೇ? ಒಟ್ಟಿನಲ್ಲಿ ಇವರು ಸೆಕೆಂಡ್ ಹ್ಯಾಂಡ್ ಗಂಡನ ಕೈಹಿಡಿದರೂ ಇವರ ಸಂಸಾರ ಮಾತ್ರ ಹಾಲು ಜೇನಿನಷ್ಟೇ ಮಧುರವಾಗಿದೆ.

ಹೇಮಾ ಮಾಲಿನಿ ಧರ್ಮೇಂದ್ರ ಕ್ಲಾಸಿಕ್ ಜೋಡಿ

ಧರ್ಮೇಂದ್ರಗೆ ಈ ಮುಂಚೆಯೇ ಪ್ರಕಾಶ್ ಕೌರ್ ಜೊತೆ ಮದುವೆಯಾಗಿತ್ತು. ಅವರಿಬ್ಬರ ದಾಂಪತ್ಯದ ಫಲವಾಗಿ ಮಕ್ಕಳೂ ಇದ್ದಾರೆ. ಕನಸಿನ ಕನ್ಯೆ ಹೇಮಾ ಮಾಲಿನಿ ಕೈಹಿಡಿದ ಮೇಲೆ ಧರ್ಮೇಂದ್ರ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದರು ಎಂಬ ಮಾತು ಈಗಲೂ ಬಾಲಿವುಡ್ ನಲ್ಲಿ ಚಾಲ್ತಿಯಲ್ಲಿದೆ.

ಶ್ರೀದೇವಿ ಬೋನಿ ಕಪೂರ್ ಅಪೂರ್ವ ಜೋಡಿ

ಡೊಳ್ಳು ಹೊಟ್ಟೆ, ದಪ್ಪ ಕನ್ನಡಕದ ಬೋನಿ ಕಪೂರ್ ಜೊತೆ ಅದ್ಯಾವ ಘಳಿಗೆಯಲ್ಲಿ ಶ್ರೀದೇವಿಗೆ ಪ್ರೇಮ ಉಕ್ಕಿತೋ ಗೊತ್ತಿಲ್ಲ. ನಿರ್ಮಾಪಕ ಬೋನಿ ಕಪೂರ್ ಅವರನ್ನು ಮನಸಾರೆ ಪ್ರೀತಿಸಿದರು. ಆದರೆ ಬೋನಿ ಕಪೂರ್ ಆಕೆಯನ್ನು ಮದುವೆ ಮಾಡಿಕೊಂಡು ಮನೆ ತುಂಬಿಸಿಕೊಂಡ. ಇವರಿಬ್ಬರ ಅಪೂರ್ವ ದಾಂಪತ್ಯಕ್ಕೆ ಈಗ ಇಬ್ಬರು ಮಕ್ಕಳು.

ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾ ಜನುಮದ ಜೋಡಿ

ವಿಚ್ಛೇದಿತ ಅನಿವಾಸಿ ಭಾರತೀಯ ರಾಜ್ ಕುಂದ್ರಾ ಜೊತೆ ಶಿಲ್ಪಾ ಶೆಟ್ಟಿ ಮದುವೆ ದಾಂ ದೂಂ ಎಂದು ಜೋರಾಗಿಯೇ ನಡೆಯಿತು. ಆದರೆ ಕುಂದ್ರಾ ಅವರ ಮಾಜಿ ಪತ್ನಿ ಈಗಲೂ ಈ ಜೋಡಿಯನ್ನು ನೋಡಿದರೆ ನಟಿಕೆ ಮುರೀತಾರೆ. ನಮ್ಮಿಬ್ಬರ ವಿವಾಹ ವಿಚ್ಛೇದನಕ್ಕೆ ಶಿಲ್ಪಾನೇ ಕಾರಣ ಎನ್ನುತ್ತಾರೆ. ಇವರಿಬ್ಬರ ಜನುಮದ ಜೋಡಿ ಈಗ ಹೂವು ಹಣ್ಣು ಬಿಟ್ಟ ಮಾಮರ.

ಕರೀಷ್ಮಾ ಸಂಜಯ್ ಕಪೂರ್ ಭಲೇ ಜೋಡಿ

ಅಭಿಷೇಕ್ ಬಚ್ಚನ್ ಜೊತೆ ಮದುವೆ ಮುರಿದುಬಿದ್ದ ಮೇಲೆ ಕರೀಷ್ಮಾ ಕಪೂರ್ ದಿಢೀರ್ ಎಂದು ಬಿಜಿಜೆನ್ ಮ್ಯಾನ್ ಸಂಜಯ್ ಕಪೂರ್ ಕೈಹಿಡಿದರು. ಈತನಿಗೆ ಈ ಹಿಂದೆಯೇ ನಂದಿತಾ ಮಹ್ತಾನಿ ಜೊತೆ ಮದುವೆಯಾಗಿತ್ತು. ಕರೀಷ್ಮಾ ದುಡುಕಿ ನಿರ್ಧಾರ ತೆಗೆದುಕೊಂಡರಾ? ಎಂಬ ಅನುಮಾನ ಬಾಲಿವುಡ್ ಮಂದಿಯನ್ನು ಈಗಲೂ ಕಾಡುತ್ತಿದೆ.

ಕರೀನಾ ಸೈಫ್ ಆಲಿ ಖಾನ್ ಕಿಲಾಡಿ ಜೋಡಿ

ಸೈಫ್ ಆಲಿ ಖಾನ್ ಗೆ ಈಗಾಗಲೆ ಅಮೃತಾ ಸಿಂಗ್ ಜೊತೆ ಮದುವೆಯಾಗಿದೆ. ತನಗಿಂತಲೂ ವಯಸ್ಸಿನಲ್ಲಿ ಕಿರಿಯವಳಾದ ಕರೀನಾ ಕಪೂರ್ ರನ್ನು ನಿಖಾ ಮಾಡಿಕೊಳ್ಳಲು ಮುಂದಾಗಿದ್ದಾರೆ. ಆದರೆ ಇವರಿಬ್ಬರಿಗೂ ಈಗಾಗಲೆ ಮದುವೆ, ಫಸ್ಟ್ ನೈಟ್ ಎರಡೂ ಆಗಿವೆ ಎಂಬ ಸುದ್ದಿಯೂ ಇದೆ. ಇನ್ನು ಲೀಗಲ್ ಆಗಿ ಮದುವೆ ಆಗಬೇಕು ಅಷ್ಟೇ ಎನ್ನುತ್ತವೆ ಬಾಲಿವುಡ್ ಮೂಲಗಳು.


ಒಟ್ಟಿನಲ್ಲಿ ಸುಖ ಸಂಸಾರಕ್ಕೆ ಸೆಕೆಂಡ್ ಹ್ಯಾಂಡ್ ಗಂಡನೇ ಸೂಕ್ತ ಎಂದು ಇವರಿಗೆ ಅನ್ನಿಸಿರಬಹುದು. ಎಷ್ಟೇ ಆಗಲಿ ಎಕ್ಸ್ ಪೀರಿಯನ್ಸಡ್ ಹ್ಯಾಂಡ್ ಅಲ್ಲವೇ? ಇರಲಿ ಬಿಡಿ ಅವರ ಮದುವೆ ಅವರಿಷ್ಟ. ಸೆಕೆಂಡ್ ಹ್ಯಾಂಡ್ ಪತಿಯೇ ಇವರಿಗೆಲ್ಲಾ ಪರದೈವ.

ಸೆಕೆಂಡ್ ಹ್ಯಾಂಡ್ ಆದರೇನು ಥರ್ಡ್ ಹ್ಯಾಂಡ್ ಆದರೇನು. ಒಟ್ಟಿನಲ್ಲಿ ಸಂಸಾರ ತೂಗುತ್ತಿದ್ದಾರಲ್ಲಾ ಅಷ್ಟೇ ಸಾಕು ಬಿಡಿ ಎನ್ನುವರೂ ಇದ್ದಾರೆ. ಇಲ್ಲಿವೆ ನೋಡಿ ಬಾಲಿವುಡ್ ನ ಕಿಲಾಡಿ ಜೋಡಿ, ಭಲೇ ಜೋಡಿ, ಜನುಮದ ಜೋಡಿ, ಅಪೂರ್ವ ಜೋಡಿ ಸಂಸಾರಗಳು.

English summary
Dream Girl Hema Malini till today's time of Kareena Kapoor, we have seen many female stars falling for married men. We are here with the list of those actresses, who are now happily living ever after with their already married husbands.
Please Wait while comments are loading...