»   » ಬರ್ಥಡೇ ಗರ್ಲ್ ಕತ್ರೀನಾ ಕೈಫ್ ವಿಶೇಷ ಸಂಗತಿಗಳು

ಬರ್ಥಡೇ ಗರ್ಲ್ ಕತ್ರೀನಾ ಕೈಫ್ ವಿಶೇಷ ಸಂಗತಿಗಳು

Posted By:
Subscribe to Filmibeat Kannada

ಭಾರತದ ಸಿನಿ ರಸಿಕರಿಗೆ ಕತ್ರೀನಾ ಕೈಫ್ ಯಾರು ಎಂದು ವಿವರಿಸಿ ಹೇಳಬೇಕಾಗಿಲ್ಲ. 'ಮೈ ನೇಮ್ ಇಸ್ ಶೀಲಾ'.. 'ಚಿಕ್ನಿ ಚಮೇಲಿ..'ಯಾಗಿ ತೆರೆ ಮೇಲೆ ಆಬಾಲವೃದ್ಧರಾದಿಯಾಗಿ ಕಿಚ್ಚು ಹಬ್ಬಿಸಿದ ಸಪೂರ ಸುಂದರಿ ಕೈಫ್ ಗೆ ಇಂದು ಜನ್ಮದಿನದ ಸಂಭ್ರಮ. ಬಾಲಿವುಡ್ ಕಂಡ ಸುಂದರ ಪ್ರತಿಭೆಗಳಲ್ಲಿ ಕೈಫ್ ಕೂಡಾ ಒಬ್ಬರು.

ಇಂಗ್ಲೆಂಡ್ ಮೂಲದ ಕೈಫ್ ಹಿಂದಿ ಚಿತ್ರರಂಗದ ಅಗ್ರಗಣ್ಯ ನಾಯಕಿಯಾಗಿ ಬೆಳೆದಿರುವುದು ಕಡಿಮೆ ಸಾಧನೆ ಏನಲ್ಲ. ಸೂಪರ್ ಸ್ಟಾರ್, ಡ್ಯಾನ್ಸಿಂಗ್ ಸ್ಟಾರ್ ಆಗಿ ಬೆಳೆದಿರುವ ಕೈಫ್ ತನ್ನ ವೃತ್ತಿ ಜೀವನದ ಏಳು ಬೀಳಿನ ನಡುವೆ ಅಭಿಮಾನಿಗಳ ಹಾಟ್ ಫೇವರೀಟ್ ಆಗಿ ಮುಂದುವರೆದಿದ್ದಾರೆ.

ಪ್ರತಿಭಾವಂತರಿಗೆ ಭಾಷಾ ಸಮಸ್ಯೆ ತೊಂದರೆಯಾಗುವುದಿಲ್ಲ ಎಂಬುದನ್ನು 29 ವರ್ಷದ ಸ್ಟಾರ್ ಸಾಬೀತುಪಡಿಸಿದ್ದಾರೆ. ದೇಶದಿಂದ ದೇಶಕ್ಕೆ ಹಾರಿ ಬಂದು ಭಾಷೆ, ಸಂಸ್ಕೃತಿ ಪರಿಚಯವಿಲ್ಲದ ಜಾಗದಲ್ಲಿ ತನ್ನದೆ ಆದ ಸಾಮ್ರಾಜ್ಯ ಸ್ಥಾಪಿಸಿರುವ ರಸಿಕರ ಹೃದಯರಾಣಿ ಕೈಫ್ 2003 ರ ಬೂಮ್ ಚಿತ್ರದ ದಿನಕ್ಕೆ ಹೋಲಿಸಿದರೆ ಜಬ್ ತಕ್ ಹೇ ಜಾನ್ ತನಕ ಬೆಳೆದು ಬಂದ ರೀತಿ ಅನುಕರಣೀಯ.

ಸರ್ಕಾರ್, ರಾಜ್ ನೀತಿ, ವೆಲ್ ಕಮ್, ನಮಸ್ತೆ ಲಂಡನ್, ಮೈನೇ ಪ್ಯಾರ್ ಕ್ಯೂ ಕಿಯಾ, ಅಜಬ್ ಪ್ರೇಮ್ ಕಿ ಗಜಬ್ ಕಹಾನಿ ಮುಂತಾದ ಚಿತ್ರಗಳ ಮೂಲದ ಮನೆ ಮಾತಾಗಿರುವ ನೀಳಕಾಯ ಚೆಲುವೆ ಬಗ್ಗೆ ಕೆಲವು ಸಂಗತಿಗಳು ಇಲ್ಲಿವೆ ತಪ್ಪದೇ ಓದಿ...

ರೂಪದರ್ಶಿಯಾಗಿ ಕೈಫ್

ಕತ್ರೀನಾ ಕೈಫ್ ಮೊದಲಿಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಕಾಲಿಟ್ಟರು. ನೀಳ ಕಾಯ ಸುಂದರ ನಗು ಮಾಡೆಲಿಂಗ್ ಕ್ಷೇತ್ರಕ್ಕೆ ಹೇಳಿ ಮಾಡಿಸಿದಂತಿತ್ತು. 14ನೇ ವರ್ಷದಲ್ಲೇ ಹವಾಯಿ ದ್ವೀಪದಲ್ಲಿ ರೂಪದರ್ಶಿಯಾಗಿ ಕಾಣಿಸಿಕೊಂಡರು.

ಜ್ಯುವೆಲ್ಲರಿ ಮೆಚ್ಚಿನ ಬ್ರ್ಯಾಂಡ್

ರೂಪದರ್ಶಿಯಾಗಿ ಕತ್ರೀನಾ ಕೈಫ್ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು ಜ್ಯುವೆಲ್ಲರಿ ಜಾಹೀರಾತುಗಳು ಇದು ಮುಂದೆ ಸಿನಿಮಾ ರಂಗಕ್ಕೆ ಕರೆ ತಂದಿತು.

ಭಾಷಾ ಸಮಸ್ಯೆ

ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟು ಇಷ್ಟು ವರ್ಷವಾದರೂ ಕತ್ರೀನಾ ಕೈಫ್ ಗೆ ಸರಿಯಾಗಿ ಹಿಂದಿ ಮಾತನಾಡಲು ಬರುವುದಿಲ್ಲ. ಇಂಗ್ಲೀಷ್ ಬಿಟ್ಟು ಬೇರೆ ಭಾಷೆ ಗೊತ್ತಿಲ್ಲ. ಹೀಗಾಗಿ ಡಬ್ಬಿಂಗ್ ಕಲಾವಿದೆ ಮೋನಾ ಘೋಷ್ ಶೆಟ್ಟಿ ಅವರಿಗೆ ಅವಕಾಶಗಳು ಸುರಿಮಳೆ ಬಂದಿದ್ದಂತೂ ನಿಜ

ಬೇರೆ ಭಾಷೆಯಲ್ಲಿ ನಟನೆ

ಹಿಂದಿ ಚಿತ್ರರಂಗವಲ್ಲದೆ ಕತ್ರೀನಾ ಕೈಫ್ ತೆಲುಗು ಹಾಗೂ ಮಲೆಯಾಳಂ ಚಿತ್ರಗಳಲ್ಲೂ ನಟಿಸಿದ್ದಾರೆ

ಅಚ್ಚುಮೆಚ್ಚಿನ ನಟಿಯರು

ಕತ್ರೀನಾ ಕೈಫ್ ಅಚ್ಚುಮೆಚ್ಚಿನ ನಟಿಯರು ಮಾಧುರಿ ದೀಕ್ಷಿತ್ ಹಾಗೂ ಕಾಜೋಲ್

ಆಹಾರದಲ್ಲಿ ಲಿಮಿಟ್

ಜಪಾನಿ ಖಾದ್ಯ ಸುಶಿ (Sushi) ಹಾಗೂ ವಿವಿಧ ಧಾನ್ಯಗಳು ಕೈಫ್ ನೆಚ್ಚಿನ ಆಹಾರ

ಏಷ್ಯಾದ ಸೆಕ್ಸಿ ಮಹಿಳೆ

2008,2009,2010 ಹಾಗೂ 2011ರಲ್ಲಿ ಏಷ್ಯಾದ ಅತ್ಯಂತ ಸೆಕ್ಸಿ ಮಹಿಳೆ ಎಂಬ ಪ್ರಶಸ್ತಿಗೆ ಕತ್ರೀನಾ ಕೈಫ್ ಪಾತ್ರರಾಗಿದ್ದಾರೆ

ಯಾವುದನ್ನು ಕಂಡರೆ ಭಯ

ಎಲ್ಲಾ ಯುವತಿಯರಿಗೆ ಇರುವಂತೆ ಯಶಸ್ವಿ ಮಹಿಳೆ ಕೈಫ್ ಗೂ ಭಯ ಕಾಡುತ್ತದೆಯಂತೆ. ಕತ್ತಲೆ ಹಾಗೂ ಜಿರಳೆ ಮುಂತಾದ ಕೀಟ ನೋಡಿದರೆ ಕೈಫ್ ಗೆ ಭಯ

ನಿಜನಾಮ

Katrina Turquotte ಇದು ಕತ್ರೀನಾ ಕೈಫ್ ಪೂರ್ತಿ ಹಾಗೂ ನಿಜನಾಮ. ಭಾರತಕ್ಕೆ ಬಂದ ಮೇಲೆ ತನ್ನ ಅಪ್ಪನ ಸರ್ ನೇಮ್ ಬಳಸಿದರು

ಕೈಫ್ ಜಾತ್ಯಾತೀತೆ

ಕತ್ರೀನಾ ಕೈಫ್ ತಂದೆ ಇಸ್ಲಾಂ ಧರ್ಮ ಅನುಸರಿಸುತ್ತಿದ್ದಾರೆ. ತಾಯಿ ಕ್ರಿಶ್ಚಿಯನ್ ಮೂಲದವರು. ಕೈಫ್ ಯಾವ ಧರ್ಮ ಪಾಲಿಸುತ್ತಿದ್ದಾರೆ ಎಂಬ ಸುಳಿವು ಸಿಕ್ಕಿಲ್ಲ. ಮಸೀದಿ, ದೇಗುಲ, ಗುರುದ್ವಾರ, ಚರ್ಚ್ ಹಾಗೂ ಸೂಫಿ ಮಂದಿರಗಳಿಗೆ ತಪ್ಪದೇ ಭೇಟಿ ನೀಡುತ್ತಾರೆ.

English summary
10 unknown facts about birthday girl Katrina Kaif: The name Katrina Kaif needs no introduction in India. Katrina is one of the most beautiful and renowned actresses of the Bollywood industry. Kaif celebrates her Birthday today.
Please Wait while comments are loading...