»   » ನಟಿ ಕತ್ರಿನಾ ಕಪೂರ್ ಹವಳದ ತುಟಿ ಕಚ್ಚಿದ್ದು ಯಾರು?

ನಟಿ ಕತ್ರಿನಾ ಕಪೂರ್ ಹವಳದ ತುಟಿ ಕಚ್ಚಿದ್ದು ಯಾರು?

Posted By: ಉದಯರವಿ
Subscribe to Filmibeat Kannada

ತಾರೆಗಳಿಗೆ ಸಂಬಂಧಿಸಿದ ಹಾಟ್ ಚಿತ್ರಗಳು, ಕಿಸ್ಸಿಂಗ್ ಫೋಟೋಗಳು ಮಣ್ಣುಮಸಿ ಎಂದು ಬಿಡುಗಡೆಯಾಗುವುದನ್ನು ನೋಡಿರುತ್ತೀರಿ. ಆ ಚಿತ್ರಗಳು ಅಭಿಮಾನಿ ವಲಯದಲ್ಲಿ ಭಾರಿ ಚರ್ಚೆಗೂ ಕಾರಣವಾಗುತ್ತದೆ. ನಟಿ ಕತ್ರಿನಾ ಕೈಫ್ ಗೆ ಸಂಬಂಧಿಸಿದ ಅಂತಹದ್ದೇ ಒಂದು ಫೋಟೋ ಈಗ ಬಿಡುಗಡೆಯಾಗಿದೆ.

ಇದು ರಿಯಲ್ ಚಿತ್ರವೇ ಆದರೂ ರೀಲ್ ಗೆ ಸಂಬಂಧಿಸಿದ್ದು ಎಂಬುದು ವಿಶೇಷ. ಬಾಲಿವುಡ್ ಸ್ಟಾರ್ ಹೀರೋಯಿನ್ ಕತ್ರಿನಾ ಕೈಫ್ ಹಾಗೂ ಆದಿತ್ಯ ಕಪೂರ್ ಜೊತೆಯಾಗಿ ಅಭಿನಯಿಸುತ್ತಿರುವ 'ಫಿತೂರ್' ಚಿತ್ರದ ಶೂಟಿಂಗ್ ಶ್ರೀನಗರದಲ್ಲಿ ಶರವೇಗದಿಂದ ಸಾಗುತ್ತಿದೆ.

ಅಭಿಷೇಕ್ ಕಪೂರ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರವಿದು. ಕತ್ರಿನಾ ಹಾಗೂ ಆದಿತ್ಯ ರಾಯ್ ಕಪೂರ್ ಇದೇ ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿರುವ ಚಿತ್ರ ಇದಾಗಿದೆ. ಈ ಚಿತ್ರಕ್ಕೆ ಸಂಬಂಧಿಸಿದ ಕೆಲವು ಫೋಟೋಗಳು ಲೀಕ್ ಆಗಿವೆ.

Katrina Kaif an Aditya Roy Kapur hot kiss in Fitoor

ಆದಿತ್ಯ ರಾಯ್ ಕಪೂರ್ ಹಾಗೂ ಕತ್ರಿಕಾ ಅವರ ಲಿಪ್ ಲಾಕ್ ಚುಂಬನ ಈಗ ಎಲ್ಲೆಡೆ ಹರಿದಾಡುತ್ತಿದೆ. ಈ ಫೋಟೋ ನೋಡಿದರೆ ಹಿಂದೆಂದೂ ಕತ್ರಿನಾ ಈ ಪಾಟಿ ರೊಚ್ಚಿಗೆದ್ದು ಚುಂಬಿಸಿದ ಉದಾಹರಣೆ ಇಲ್ಲ ಎನ್ನಿಸುತ್ತದೆ. ಒಬ್ಬರಿಗೊಬ್ಬರು ತುಟಿಗಳನ್ನು ಜೇನು ಹೀರಿದಂತೆ ಸವಿಯುತ್ತಿರುವುದು ಸ್ಪಷ್ಟವಾಗುತ್ತದೆ.

ಈ ಚಿತ್ರದ ಶೂಟಿಂಗ್ ವೇಳೆ ಸೆಟ್ಸ್ ನಲ್ಲಿ ಯಾರೋ ಈ ಹಾಟ್ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಆದರೆ ಫೋಟೋ ಅಷ್ಟೊಂದು ಸ್ಪಷ್ಟವಾಗಿಲ್ಲ. ಆದಿತ್ಯ ರಾಯ್ ಕಪೂರ್ ಕಾಶ್ಮೀರ್ ಸೂಟ್ ಧರಿಸಿದ್ದರೆ, ಕತ್ರಿಕಾ ಕಪ್ಪು ದಿರಿಸಿನಲ್ಲಿದ್ದಾರೆ. ಒಂದು ಸಣ್ಣ ಸೇತುವೆ ಮೇಲೆ ಈ ಸನ್ನಿವೇಶವನ್ನು ಚಿತ್ರೀಕರಿಸುತ್ತಿದ್ದಾರೆ.

ಶ್ರೀನಗರದ ಅಂದಚೆಂದಗಳ ಜೊತೆಗೆ ಈ ಜೋಡಿಯ ಚೆಲುವಿನ ಚಿಲಿಪಿಲಿಯನ್ನೂ ಚಿತ್ರದಲ್ಲಿ ನೋಡಬಹುದು. ಚಾರ್ಲೆಸ್ ಡಿಕೆನ್ಸ್ ಅವರ 'ಗ್ರೇಟ್ ಎಕ್ಸ್ ಪೆಕ್ಟೇಷನ್ಸ್' ಎಂಬ ಕಾದಂಬರಿ ಆಧಾರವಾಗಿ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ ಅಭಿಷೇಕ್ ಕಪೂರ್. ಚಿತ್ರದ ಬಗ್ಗೆ ನಿರೀಕ್ಷೆಗಳು ಬಹಳಷ್ಟಿವೆ.

English summary
It's known that Aditya Roy Kapur and Katrina Kaif will be seen sharing the screen space together for the first time in the movie Fitoor. Both Katrina Kaif and Aditya Roy Kapur are busy shooting for Fitoor in Srinagar which is being directed by Abhishek Kapoor.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada