»   » ಕೋಪಗೊಂಡ ಕತ್ರಿನಾ, ರಣ್ಬೀರ್ ಕಪೂರ್ ಗೆ ವಾರ್ನಿಂಗ್ ಕೊಟ್ರಂತೆ.!

ಕೋಪಗೊಂಡ ಕತ್ರಿನಾ, ರಣ್ಬೀರ್ ಕಪೂರ್ ಗೆ ವಾರ್ನಿಂಗ್ ಕೊಟ್ರಂತೆ.!

Posted By:
Subscribe to Filmibeat Kannada

ಜೊತೆಯಲ್ಲಿ ಕೆಲಸ ಮಾಡುತ್ತೇವೆ ಅಂದ್ರೆ ಅಲ್ಲಿ ಅಲ್ಪ ಸ್ವಲ್ಪ ಸಲುಗೆ ಇದ್ದೇ ಇರುತ್ತೆ. ಆದ್ರೆ, ಆ ಸಲುಗೆ ಮಿತಿ ಮೀರಿದ್ರೆ, ಎಂಥವರಿಗೂ ಪಿತ್ತ ನೆತ್ತಿಗೇರುವುದು ಗ್ಯಾರೆಂಟಿ. ಸದ್ಯ ಕತ್ರಿನಾ ಕೈಫ್ ಗೆ ಆಗಿರುವುದು ಇದೇ.!

'ಮಾಜಿ ಪ್ರೇಮಿಗಳು' ಕತ್ರಿನಾ ಕೈಫ್ ಹಾಗೂ ರಣ್ಬೀರ್ ಕಪೂರ್ ಒಟ್ಟಿಗೆ 'ಜಗ್ಗಾ ಜಸೂಸ್' ಚಿತ್ರದಲ್ಲಿ ನಟಿಸಿದ್ದಾರೆ. ತಮ್ಮ 'ಹಳೇ ಸಂಬಂಧ' ಚಿತ್ರಕ್ಕೆ ಮಾರಕವಾಗಬಾರದು ಎಂಬ ಕಾರಣಕ್ಕೆ ಇಬ್ಬರೂ 'ಜಗ್ಗಾ ಜಸೂಸ್' ಚಿತ್ರಕ್ಕೆ ಭರ್ಜರಿ ಪ್ರಚಾರ ನೀಡುತ್ತಿದ್ದಾರೆ.

ರಣ್ಬೀರ್ ಕಪೂರ್ ಮುಂದೆ ಕತ್ರಿನಾ ಕೈಫ್ ಕೆನ್ನೆಗೆ ಮುತ್ತಿಟ್ಟ ಸಲ್ಮಾನ್.!

Katrina Kaif Gets Angry With Ranbir Kapoor; WARNS Him To Behave Properly!

ಒಂದು ಈವೆಂಟ್ ಕೂಡ ಮಿಸ್ ಮಾಡಿಕೊಳ್ಳದೇ, ಕತ್ರಿನಾ ಹಾಗೂ ರಣ್ಬೀರ್ ಚಿತ್ರದ ಎಲ್ಲ ಪ್ರಚಾರ ಕಾರ್ಯಕ್ರಮಗಳಲ್ಲಿಯೂ ಭಾಗಿಯಾಗುತ್ತಿದ್ದಾರೆ. ಹೀಗಿರುವಾಗಲೇ, ಕತ್ರಿನಾ ಕೊಂಚ ರಾಂಗ್ ಆಗಿದ್ದಾರೆ. ಅದಕ್ಕೆ ಕಾರಣ ಕಪೂರ್ ಕುಡಿ ರಣ್ಬೀರ್.!

ತಮ್ಮ ಕಾಲೆಳೆಯಲು ಬಂದ ರಣ್ಬೀರ್ ಮುಖಕ್ಕೆ ಕತ್ರಿನಾ ಮಂಗಳಾರತಿ ಮಾಡಿದ್ದಾರೆ. ಅಷ್ಟಕ್ಕೂ ಆಗಿದ್ದೇನಪ್ಪಾ ಅಂದ್ರೆ, ''ಶೀಲಾ ಕಿ ಜವಾನಿ, ಚಿಕ್ನಿ ಚಮೇಲಿ.. ಮುಂತಾದ ಹಾಡುಗಳಲ್ಲಿ ಕತ್ರಿನಾಗೆ ಡ್ಯಾನ್ಸ್ ಹೇಳಿಕೊಟ್ಟಿದ್ದು ನಾನೇ'' ಎಂದು ಈವೆಂಟ್ ಒಂದರಲ್ಲಿ ರಣ್ಬೀರ್ ಜೋಕ್ ಮಾಡುತ್ತಿದ್ದರು.

ಇದನ್ನ ಕೇಳಿಸಿಕೊಂಡ ಕತ್ರಿನಾಗೆ ಮುಜುಗರವಾಗಿದೆ. ಈವೆಂಟ್ ಮುಗಿದ ಕೂಡಲೆ, ರಣ್ಬೀರ್ ಕಪೂರ್ ಗೆ ಕತ್ರಿನಾ ವಾರ್ನಿಂಗ್ ಕೊಟ್ಟಿದ್ದಾರೆ. ''ನಾಲಿಗೆ ಮೇಲೆ ಹಿಡಿತ ಇಟ್ಟುಕೊಂಡು ಮಾತನಾಡಿದರೆ, ಇನ್ಮುಂದೆ ಒಟ್ಟಿಗೆ ಇಂಟರ್ವ್ಯೂ ನೀಡುತ್ತೇನೆ. ಇಲ್ಲಾಂದ್ರೆ ಯಾವುದೇ ಪ್ರಚಾರದ ಕಾರ್ಯಕ್ರಮಗಳಿಗೆ ಬರುವುದಿಲ್ಲ'' ಎಂದು ರಣ್ಬೀರ್ ಕಪೂರ್ ಗೆ ಕತ್ರಿನಾ ಬಿಸಿ ಮುಟ್ಟಿಸಿದ್ದಾರೆ.

ಬೇರೆ ದಾರಿ ಇಲ್ಲದೆ, ಆಗಿದ್ದಾಯ್ತು ಎಂದು ರಣ್ಬೀರ್ ಕಪೂರ್ ಕೂಡ ಸುಮ್ಮನಾಗಿದ್ದಾರೆ.

English summary
Bollywood Actress Katrina Kaif got Angry With Ranbir Kapoor and warned him to behave properly.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada