For Quick Alerts
  ALLOW NOTIFICATIONS  
  For Daily Alerts

  'ಭಾರತ್' ಸಿನಿಮಾದಲ್ಲಿ ಪ್ರಿಯಾಂಕಾ ಬಿಟ್ಟ ಜಾಗವನ್ನ ತುಂಬುವವರು ಯಾರು.?

  By Harshitha
  |

  ಎಲ್ಲವೂ ಪ್ಲಾನ್ ಪ್ರಕಾರ ನಡೆದಿದ್ದರೆ, 'ಭಾರತ್' ಸಿನಿಮಾದ ಮೂಲಕ ನಟಿ ಪ್ರಿಯಾಂಕಾ ಛೋಪ್ರಾ ಬಾಲಿವುಡ್ ಗೆ ಕಮ್ ಬ್ಯಾಕ್ ಆಗ್ತಿದ್ರು. ಹತ್ತು ವರ್ಷಗಳ ಬಳಿಕ ಸಲ್ಮಾನ್ ಖಾನ್ ಜೊತೆಗೆ ಸ್ಕ್ರೀನ್ ಶೇರ್ ಮಾಡುತ್ತಿದ್ದರು.

  ಆದ್ರೆ, ಇದ್ಯಾವುದೂ ಸದ್ಯ ಆಗುತ್ತಿಲ್ಲ. 'ಭಾರತ್' ಚಿತ್ರದಿಂದ ನಟಿ ಪ್ರಿಯಾಂಕಾ ಛೋಪ್ರಾ ಹೊರ ನಡೆದಿರುವ ವಿಚಾರವನ್ನ ನಿರ್ದೇಶಕ ಅಲಿ ಅಬ್ಬಾಸ್ ಝಫರ್ ಟ್ವಿಟ್ಟರ್ ನಲ್ಲಿ ಖಚಿತ ಪಡಿಸಿದ್ದಾರೆ.

  ''ಭಾರತ್' ಸಿನಿಮಾದಲ್ಲಿ ಪ್ರಿಯಾಂಕಾ ಛೋಪ್ರಾ ನಟಿಸುತ್ತಿಲ್ಲ. ಅದಕ್ಕಿರುವ ಕಾರಣ ತುಂಬಾನೇ ಸ್ಪೆಷಲ್. ನಿಕ್ ಜೊತೆಗಿನ ತಮ್ಮ ನಿರ್ಧಾರವನ್ನ ಆಕೆ ನಮಗೆ ತಿಳಿಸಿದ್ದಾರೆ. ಇದು ನಮಗೂ ಖುಷಿ ಕೊಟ್ಟಿದೆ. ಪ್ರಿಯಾಂಕಾ ಛೋಪ್ರಾಗೆ 'ಭಾರತ್' ಚಿತ್ರತಂಡದಿಂದ ಶುಭಾಶಯಗಳು'' ಎಂದು ನಿರ್ದೇಶಕ ಅಲಿ ಅಬ್ಬಾಸ್ ಝಫರ್ ಟ್ವೀಟಿಸಿದ್ದರು.

  ಅಲಿ ಅಬ್ಬಾಸ್ ಝಫರ್ ಮಾಡಿರುವ ಟ್ವೀಟ್ ನೋಡಿ, ಪ್ರಿಯಾಂಕಾ-ನಿಕ್ ಮದುವೆ ಫಿಕ್ಸ್ ಆಗಿದೆ. ಹೀಗಾಗಿ, 'ಭಾರತ್' ಸಿನಿಮಾದಿಂದ ಪ್ರಿಯಾಂಕಾ ಹಿಂದೆ ಸರಿದಿದ್ದಾರೆ ಅಂತಲೇ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.

  ಈ ನಡುವೆ 'ಭಾರತ್' ಚಿತ್ರದಿಂದ ಪ್ರಿಯಾಂಕಾ ಹೊರಬರಲು ಸಲ್ಮಾನ್ ಖಾನ್ ಕಾರಣ ಎಂಬ ಗಾಸಿಪ್ ಕೂಡ ಹರಿದಾಡುತ್ತಿದೆ. ಅದೇನೇ ಇರಲಿ, ಸದ್ಯ 'ಭಾರತ್' ಚಿತ್ರದಿಂದ ಪ್ರಿಯಾಂಕಾ ಔಟ್ ಆಗಿರುವುದು ಪಕ್ಕಾ. ಪ್ರಿಯಾಂಕಾ ಬಿಟ್ಟ ಜಾಗವನ್ನ ತುಂಬುವ ನಟಿ ಯಾರು ಎಂಬ ಪ್ರಶ್ನೆ ಇದೀಗ ಎಲ್ಲರನ್ನೂ ಕಾಡುತ್ತಿದೆ. ಮುಂದೆ ಓದಿರಿ...

  ಕತ್ರೀನಾ ಬರ್ತಾರಾ.?

  ಕತ್ರೀನಾ ಬರ್ತಾರಾ.?

  'ಭಾರತ್' ಸಿನಿಮಾದಲ್ಲಿ ಪ್ರಿಯಾಂಕಾ ಜಾಗಕ್ಕೆ ಕತ್ರಿನಾ ಕೈಫ್ ಬರುವ ಸಾಧ್ಯತೆ ಇದ್ಯಂತೆ. ಹೇಳಿ ಕೇಳಿ, ಸಲ್ಮಾನ್ ಖಾನ್ ಗೆ ಕತ್ರಿನಾ ಅತ್ಯಾಪ್ತರು. 'ಏಕ್ ಥಾ ಟೈಗರ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ಸಲ್ಮಾನ್-ಕತ್ರಿನಾ ಒಂದಾಗಿ ಅಭಿನಯಿಸಿದ್ದರು. ಇದೀಗ 'ಭಾರತ್' ಸಿನಿಮಾದಲ್ಲೂ ಅದೇ ಹಿಟ್ ಕಾಂಬಿನೇಶನ್ ಮುಂದುವರೆದರೂ ಅಚ್ಚರಿ ಇಲ್ಲ.

  'ಭಾರತ್' ಚಿತ್ರದಿಂದ ಹೊರಬಂದ ಪ್ರಿಯಾಂಕಾ: ಸಲ್ಮಾನ್ ಅದಕ್ಕೆ ಕಾರಣ.?'ಭಾರತ್' ಚಿತ್ರದಿಂದ ಹೊರಬಂದ ಪ್ರಿಯಾಂಕಾ: ಸಲ್ಮಾನ್ ಅದಕ್ಕೆ ಕಾರಣ.?

  ಕರೀನಾ ಕಪೂರ್ ಬರ್ತಾರಂತೆ.!

  ಕರೀನಾ ಕಪೂರ್ ಬರ್ತಾರಂತೆ.!

  'ಭಾರತ್' ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆಗೆ ಸ್ಕ್ರೀನ್ ಶೇರ್ ಮಾಡುವಂತೆ ಕರೀನಾ ಕಪೂರ್ ಖಾನ್ ರನ್ನ ನಿರ್ದೇಶಕ ಅಲಿ ಅಬ್ಬಾಸ್ ಝಫರ್ ಕೇಳಿಕೊಂಡಿದ್ದಾರಂತೆ. ಇದಕ್ಕೆ ಕರೀನಾ ಕಪೂರ್ ಖಾನ್ ಗ್ರೀನ್ ಸಿಗ್ನಲ್ ಕೊಡ್ತಾರಾ.?

  10 ವರ್ಷದ ನಂತರ ಮತ್ತೆ ಒಂದಾದ ಸಲ್ಮಾನ್-ಪ್ರಿಯಾಂಕಾ10 ವರ್ಷದ ನಂತರ ಮತ್ತೆ ಒಂದಾದ ಸಲ್ಮಾನ್-ಪ್ರಿಯಾಂಕಾ

  ಇವರದ್ದೂ ಹಿಟ್ ಕಾಂಬಿನೇಶನ್

  ಇವರದ್ದೂ ಹಿಟ್ ಕಾಂಬಿನೇಶನ್

  'ಭಜರಂಗಿ ಭಾಯ್ ಜಾನ್', 'ಬಾಡಿಗಾರ್ಡ್' ಸಿನಿಮಾಗಳಲ್ಲಿ ಕರೀನಾ ಕಪೂರ್ ಖಾನ್ ಹಾಗೂ ಸಲ್ಮಾನ್ ಖಾನ್ ಒಟ್ಟಾಗಿ ನಟಿಸಿದ್ದರು. ಇದೀಗ 'ಭಾರತ್' ಸಿನಿಮಾದಲ್ಲೂ ಇದೇ ಜೋಡಿ ಮ್ಯಾಜಿಕ್ ಮಾಡುತ್ತಾ.? ನೋಡಬೇಕು.!

  'ಭಾರತ್' ಚಿತ್ರದ ಕುರಿತು...

  'ಭಾರತ್' ಚಿತ್ರದ ಕುರಿತು...

  'Ode to my Father' ಎಂಬ ಸೌತ್ ಕೊರಿಯನ್ ಚಿತ್ರದ ಹಿಂದಿ ಅವತರಣಿಕೆಯೇ ಈ 'ಭಾರತ್' ಸಿನಿಮಾ. ಕೊರಿಯನ್ ವಾರ್ ಬಳಿಕ ಕುಟುಂಬದಿಂದ ದೂರಾಗುವ ವ್ಯಕ್ತಿ ಮರಳಿ ಕುಟುಂಬದ ಜೊತೆ ಒಂದಾಗುವುದು ಹೇಗೆ ಎಂಬುದೇ ಚಿತ್ರದ ಕಥೆ. ಶೂಟಿಂಗ್ ಹಂತದಲ್ಲಿ ಇರುವ 'ಭಾರತ್' ಸಿನಿಮಾ ಮುಂದಿನ ವರ್ಷ ಬಿಡುಗಡೆ ಆಗಲಿದೆ.

  English summary
  According to the latest reports, Katrina Kaif or Kareena Kapoor to replace Priyanka Chopra in Salman Khan starrer 'Bharat'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X