For Quick Alerts
  ALLOW NOTIFICATIONS  
  For Daily Alerts

  'ದಿ ಕಪೂರ್ಸ್' ಖಾನ್ದಾನ್ ನಿಂದ ಕತ್ರೀನಾ ಕಿಕ್ ಔಟ್.!

  By Harshitha
  |

  ಇಡೀ ಕಪೂರ್ ಕುಟುಂಬವನ್ನ ಬಾಲಿವುಡ್ ನ 'ಬೆಳದಿಂಗಳ ಬಾಲೆ' ಕತ್ರೀನಾ ಕೈಫ್ ಕಿರುಬೆರಳಿನಲ್ಲೇ ಆಡಿಸುತ್ತಿದ್ದ ವಿಚಾರವನ್ನ ನೀವು 'ಫಿಲ್ಮಿಬೀಟ್ ಕನ್ನಡ'ದಲ್ಲಿ ಓದಿದ್ರಿ. ನೆನಪಿದ್ಯಾ?

  ನೆನಪಿಲ್ಲ ಅಂದ್ರೆ, ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಒಂದು ಫ್ಲ್ಯಾಶ್ ಬ್ಯಾಕ್ ಗೆ ಹೋಗ್ಬನ್ನಿ....[ಕಪೂರ್ ಖಾನ್ದಾನ್ ನ ಕಿರುಬೆರಳಲ್ಲಿ ಆಡಿಸುತ್ತಿದ್ದಾಳೆ ಕತ್ರೀನಾ!]

  ರಣ್ಬೀರ್ ಕಪೂರ್ ಜೊತೆಗೆ ಕತ್ರೀನಾ ಕೈಫ್ ಪ್ರೇಮ-ಪ್ರಣಯ ಫುಲ್ ಝೂಮ್ ನಲ್ಲಿದ್ದಾಗ, ಇಬ್ಬರೂ ಒಂದೇ ಗೂಡಿನಲ್ಲಿ ಜಂಟಿಯಾಗುವುದೇನು...ಬೀಚ್ ನಲ್ಲಿ ಕಾಲ ಕಳೆಯುವುದೇನು...ದೇಶ-ವಿದೇಶ ಸುತ್ತುವುದೇನು ಕೇಳ್ತೀರಾ? ಇದೆಲ್ಲವೂ ಇಬ್ಬರಿಗೆ ಕೇವಲ ಎರಡು ವರ್ಷಕ್ಕೆ ಬೇಸರವಾಯ್ತೇನೋ.!

  ಜವಾಬ್ದಾರಿ ಹೊರಲು ಸಿದ್ಧವಿಲ್ಲದ ರಣ್ಬೀರ್ ಕಪೂರ್, ಕತ್ರೀನಾ ಕೈಫ್ ಪ್ರೀತಿಗೆ ಕೊಳ್ಳಿ ಇಟ್ಟಿದ್ದಾಗಿದೆ. ರಣ್ಬೀರ್-ಕ್ಯಾಟ್ ಬ್ರೇಕಪ್ ಆಗಿದ್ದಾರೆ ಅನ್ನೋ ಬ್ರೇಕಿಂಗ್ ನ್ಯೂಸ್ ಹಬ್ಬಿದ ಬೆನ್ನಲ್ಲೆ, 'ಕಪೂರ್ ಖಾನ್ದಾನ್' ಕಡೆಯಿಂದಲೂ ಒಂದು ಸುದ್ದಿ ಹೊರಬಿದ್ದಿದೆ. ಅದೇನಪ್ಪಾ ಅಂದ್ರೆ, ಕಪೂರ್ ಕುಟುಂಬದ 'ದಿ ಕಪೂರ್ಸ್' ಎನ್ನುವ ವಾಟ್ಸ್ ಆಪ್ ಗ್ರೂಪ್ ನಿಂದ ಕತ್ರೀನಾ ಕೈಫ್ ಕಿಕ್ ಔಟ್ ಆಗಿದ್ದಾರೆ.

  ನಿಜ ಹೇಳ್ಬೇಕಂದ್ರೆ, ಕಳೆದ ವರ್ಷ 'ದಿ ಕಪೂರ್ಸ್' ವಾಟ್ಸ್ ಆಪ್ ಗ್ರೂಪ್ ನ ಕ್ರಿಯೇಟ್ ಮಾಡಿದ್ದು ಇದೇ ಕತ್ರೀನಾ ಕೈಫ್!

  ಕಪೂರ್ ಖಾನ್ದಾನ್ ಜೊತೆಗೆ ಉತ್ತಮ ಒಡನಾಟ ಹೊಂದಿದ್ದ ಕತ್ರೀನಾ ಕೈಫ್ 'ವಾಟ್ಸ್ ಆಪ್' ನಲ್ಲಿ 'ದಿ ಕಪೂರ್ಸ್' ಅಂತ ಫ್ಯಾಮಿಲಿ ಗ್ರೂಪ್ ಕ್ರಿಯೇಟ್ ಮಾಡಿ, ಅದಕ್ಕೆ ಅಡ್ಮಿನ್ ಆಗಿದ್ರು. ಇದನ್ನೆಲ್ಲಾ ಕಂಡು ಕಣ್ಣು ಕೆಂಪಗೆ ಮಾಡಿಕೊಂಡಿದ್ದ ರಿಶಿ ಕಪೂರ್ ಗ್ರೂಪ್ ನಿಂದ ಹೊರಬಂದಿದ್ದರು.

  ಯಾವಾಗ ಕತ್ರೀನಾ ಅನ್ನೋ ಬೆಳ್ಳಿ ಬೊಂಬೆಯಿಂದ ರಣ್ಬೀರ್ ಕಪೂರ್ ದೂರ ಸರಿದರೋ, 'ದಿ ಕಪೂರ್ಸ್' ವಾಟ್ಸ್ ಆಪ್ ಗ್ರೂಪ್ ನಿಂದ ಕತ್ರೀನಾರನ್ನ ಕಿತ್ತು ಹಾಕಲಾಗಿದೆ ಅಂತ ಹೇಳಲಾಗ್ತಿದೆ. ಇದಾದ ನಂತರವೇ, ರಿಶಿ ಕಪೂರ್ ಮರಳಿ 'ದಿ ಕಪೂರ್ಸ್' ಗ್ರೂಪ್ ಸೇರಿಕೊಂಡಿದ್ದಾರೆ ಎಂಬ ಮಾಹಿತಿ ಕೂಡ ಇದೆ.

  'ದಿ ಕಪೂರ್ಸ್' ಖಾನ್ದಾನ್ ನಿಂದ ಕತ್ರೀನಾ ಕಿಕ್ ಔಟ್.!

  English summary
  We all know Katrina Kaif and Ranbir Kapoor are no longer together. Now, According to the reports, Katrina Kaif has been removed from the Ranbir Kapoor's family group in Whatsapp.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X