»   » ಅಮೀರ್ ಖಾನ್ ಮೇಲೆ ಅಪ್‌ಸೆಟ್ ಆದ ಕತ್ರಿನಾ ಕೈಫ್!

ಅಮೀರ್ ಖಾನ್ ಮೇಲೆ ಅಪ್‌ಸೆಟ್ ಆದ ಕತ್ರಿನಾ ಕೈಫ್!

Posted By:
Subscribe to Filmibeat Kannada

ಕತ್ರಿನಾ ಕೈಫ್ ಮತ್ತು ಅಮೀರ್ ಖಾನ್ ಸೂಪರ್ ಹಿಟ್ ಸಿನಿಮಾ 'ಧೂಮ್ 3' ನಂತರ ಈಗ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಈಗ ನಡೆಯುತ್ತಿದ್ದು, ಇತ್ತೀಚೆಗೆ ಅಮೀರ್ ಖಾನ್ ಮೇಲೆ ಕತ್ರಿನಾಗೆ ಅಸಮಾಧಾನ ಉಂಟಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದಲ್ಲಿ 'ದಂಗಲ್' ನಟಿ ಫಾತಿಮಾ ಸನಾ ಶೇಖ್ ರವರು ತೆರೆ ಹಂಚಿಕೊಂಡಿದ್ದಾರೆ. ಆದರೆ ಕತ್ರಿನಾ ಈಗ ಮಿಸ್ಟರ್ ಪರ್ಫೆಕ್ಷನಿಸ್ಟ್ ಜೊತೆ ಅಪ್‌ಸೆಟ್ ಅಗಿರುವುದಾದರೂ ಏಕೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಫಾತಿಮಾ ಕಡೆ ಅಮೀರ್ ಗಮನ

ಅಮೀರ್ ಖಾನ್ ರವರು 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರೀಕರಣದಲ್ಲಿ ಫಾತಿಮಾ ಸನಾ ಶೇಖ್ ರವರ ಬಗ್ಗೆಯೇ ಹೆಚ್ಚು ಗಮನ ಹರಿಸುತ್ತಿದ್ದಾರಂತೆ. ಅಲ್ಲದೇ ಅವರು ಸ್ಕ್ರಿಪ್ಟ್ ಗೆ ತಕ್ಕನಾಗಿ ನಟಿಸುತ್ತಿದ್ದಾರಾ ಎಂದು ಸ್ಪೆಷಲ್ ಕೇರ್ ತೆಗೆದುಕೊಂಡಿದ್ದಾರೆ' ಎಂದು ಡೆಕ್ಕನ್ ಕ್ರಾನಿಕಲ್ ವರದಿಯಿಂದ ತಿಳಿದಿದೆ.

ವೈಯಕ್ತಿಕವಾಗಿ ಹೆಚ್ಚು ಮಾರ್ಗದರ್ಶನ

ಈ ಹಿಂದೆಯೇ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರಕ್ಕೆ ಫಾತಿಮಾ ಸನಾ ಶೇಖ್ ರವರು ಅಮೀರ್ ಖಾನ್ ಒತ್ತಾಯದಿಂದ ಸೇರಿಕೊಂಡಿದ್ದಾರೆ ಎಂಬುದು ವರದಿಯಾಗಿತ್ತು. ಈಗ ಈ ಚಿತ್ರದಲ್ಲಿಯ ಅಭಿನಯಕ್ಕೆ ಫಾತಿಮಾಗೆ ವೈಯಕ್ತಿಕವಾಗಿ ಅಮೀರ್ ಹೆಚ್ಚು ಗೈಡೆನ್ಸ್ ನೀಡುತ್ತಿದ್ದಾರಂತೆ.

ಲೀಡಿಂಗ್ ಲೇಡಿ ಬಗ್ಗೆ ಕಡೆಗಣನೆ

ವಾಸ್ತವವಾಗಿ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದಲ್ಲಿ ಕತ್ರಿನಾ ಕೈಫ್ ಲೀಡ್ ರೋಲ್ ನಲ್ಲಿ ಅಭಿನಯಿಸುತ್ತಿದ್ದಾರೆ. ಆದರೆ ಅವರನ್ನು ಕಡೆಗಣಿಸಿ ಅಮೀರ್ ಫಾತಿಮಾರ ಬಗ್ಗೆ ಹೆಚ್ಚು ಗಮನಹರಿಸುತ್ತಿರುವುದರಿಂದ ಅವರ ಮೇಲೆ ಕತ್ರಿನಾ ಅಸಮಾಧಾನಗೊಂಡಿರುವುದಾಗಿ ವರದಿ ಮಾಡಲಾಗಿದೆ.

ಬಹುನಿರೀಕ್ಷಿತ ಚಿತ್ರ

'ಥಗ್ಸ್ ಆಫ್ ಹಿಂದೂಸ್ತಾನ್' ಬಹು ನಿರೀಕ್ಷಿತ ಚಿತ್ರವಾಗಿದ್ದು, ಇದೇ ಮೊದಲ ಬಾರಿಗೆ ಅಮಿತಾಬ್ ಬಚ್ಚನ್ ಮತ್ತು ಅಮೀರ್ ಖಾನ್ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

English summary
Katrina Kaif and Aamir Khan are working together again after Dhoom 3 in Thugs Of Hindostan. But if recent reports are to be believed Katrina is really pissed off with Aamir.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada