For Quick Alerts
  ALLOW NOTIFICATIONS  
  For Daily Alerts

  'ಆತ ಇನ್ನು ಬಚ್ಚ' ಇಷ್ಟು ಬೇಗ ಮದುವೆ ಆಗಲ್ಲ ಎಂದ 'ಗೂಗ್ಲಿ' ನಾಯಕಿ ಕೃತಿ

  |

  'ಗೂಗ್ಲಿ' ಚಿತ್ರದ ಮೂಲಕ ಕನ್ನಡ ಚಿತ್ರಾಭಿಮಾನಿಗಳ ಮನ ಗೆದ್ದ ನಟಿ ಕೃತಿ ಕರಬಂಧ ಪ್ರೀತಿಯಲ್ಲಿ ಬಿದ್ದಿರುವ ವಿಚಾರ ಬಹುತೇಕರಿಗೆ ಗೊತ್ತಿದೆ. ಮುದ್ದು ಮುಖದ ಈ ಸುಂದರಿ ಮುದ್ದಾದ ಅಭಿನಯದ ಮೂಲಕ ಯುವಕರ ನಿದ್ದೆಗೆಡಿಸಿದ್ದ ಕೃತಿ, ಈಗ ತಾನೆ ನಿದ್ದೆ ಗೆಟ್ಟಿದ್ದಾರೆ. ಬಾಲಿವುಡ್ ನಟ ಪುಲ್ಕಿತ್ ಸಮ್ರಾಟ್ ಕ್ಲೀನ್ ಬೋಲ್ಡ್ ಆಗಿರುವ ಕೃತಿ ಇತ್ತೀಚಿಗೆ ಸಧ್ಯದಲ್ಲೇ ಹಸೆಮಣೆ ಏರುವ ಸುಳುವು ನೀಡಿದ್ದರು.

  Kriti Kharabanda Reacts to Rumours of Dating Pulkit.

  ಆದರೀಗ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕೃತಿ ಮದುವೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಪುಲ್ಕಿತ್ ಜೊತೆ ಮದುವೆ ಪ್ಲಾನ್ ರಿವೀಲ್ ಮಾಡಿರುವ ಕೃತಿ, ಇಷ್ಟು ಬೇಗ ಮದುವೆ ಆಗುವುದಿಲ್ಲ, ಮದುವೆ ಬಗ್ಗೆ ಈಗಾಗಲೆ ಯಾವುದೆ ಪ್ಲಾನ್ ಕೂಡ ಮಾಡಿಲ್ಲ, ಅಲ್ಲದೆ ಆತ ಇನ್ನು ಬಚ್ಚ ಎಂದು ಹೇಳಿದ್ದಾರೆ. ಮುಂದೆ ಓದಿ..

  'ಪುಲ್ಕಿತ್ ಜೊತೆ ಡೇಟಿಂಗ್ ನಲ್ಲಿದ್ದೀನಿ' ಎಂದು ಬಹಿರಂಗ ಪಡಿಸಿದ 'ಗೂಗ್ಲಿ' ಸುಂದರಿ'ಪುಲ್ಕಿತ್ ಜೊತೆ ಡೇಟಿಂಗ್ ನಲ್ಲಿದ್ದೀನಿ' ಎಂದು ಬಹಿರಂಗ ಪಡಿಸಿದ 'ಗೂಗ್ಲಿ' ಸುಂದರಿ

  ಮದುವೆ ಬಗ್ಗೆ ಕೃತಿ ಹೇಳಿದ್ದೇನು?

  ಮದುವೆ ಬಗ್ಗೆ ಕೃತಿ ಹೇಳಿದ್ದೇನು?

  "ಸದ್ಯ ಸಮಯ ಹೇಗೆ ಬರುತ್ತೊ ಹಾಗೆ ಕಳೆಯುತ್ತಿದ್ದೇವೆ. ಪುಲ್ಕಿತ್ ಈಗಾಲೆ ಮದುವೆಗೆ ಸಿದ್ಧವಿಲ್ಲ. ಅಲ್ಲದೆ ನಾನು ಕೂಡ ಇಷ್ಟು ಬೇಗ ಮದುವೆಗೆ ತಯಾರಿಲ್ಲ. ಮದುವೆಗೆ ನಿರ್ಧರಿಸುವ ಮೊದಲು ಸಮಯ ತೆಗೆದುಕೊಳ್ಳುತ್ತೆ. ಆತ ಇನ್ನು ಬಚ್ಚ ಹಾಗಾಗಿ ಮದುವೆ ಮುಂದೂಡಿದ್ದೇವೆ" ಎಂದು ಹೇಳಿದ್ದಾರೆ.

  ಲಾಕ್ ಡೌನ್ ನಲ್ಲಿ ಒಟ್ಟಿಗೆ ಕಾಲಕಳೆಯುತ್ತಿದ್ದಾರೆ ಲವ್ ಬರ್ಡ್ಸ್

  ಲಾಕ್ ಡೌನ್ ನಲ್ಲಿ ಒಟ್ಟಿಗೆ ಕಾಲಕಳೆಯುತ್ತಿದ್ದಾರೆ ಲವ್ ಬರ್ಡ್ಸ್

  ಕೊರೊನಾ ಭೀತಿಯ ಪರಿಣಾಮ ಇಡೀ ಭಾರತ ಏಪ್ರಿಲ್ 14ರ ವರೆಗೆ ಲಾಕ್ ಡೌನ್ ಆಗಿದೆ. ಈ ಸಮಯದಲ್ಲಿ ಎಲ್ಲರೂ ಮನೆಯಲ್ಲಿಯೆ ಇದ್ದಾರೆ. ನಟಿ ಕೃತಿ ಕರಬಂಧ ಮತ್ತು ಬಾಯ್ ಫ್ರೆಂಡ್ ಪುಲ್ಕಿತ್ ಸಮ್ರಾಟ್ ಇಬ್ಬರು ಒಟ್ಟಿಗೆ ಸಮಯ ಕಳೆಯುತ್ತಿದ್ದಾರೆ. ಸದ್ಯ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿರುವ ಇಬ್ಬರು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಉತ್ತಮ ಸಮಯವಿದು ಎಂದು ಹೇಳಿದ್ದಾರೆ.

  ಲಾಕ್ ಡೌನ್ ಬಗ್ಗೆ ಕೃತಿ ಹೇಳಿದ್ದೇನು?

  ಲಾಕ್ ಡೌನ್ ಬಗ್ಗೆ ಕೃತಿ ಹೇಳಿದ್ದೇನು?

  "ಪುಲ್ಕಿತ್ ನನ್ನನ್ನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಮನೆಯಲ್ಲಿ ನನಗೆ ಏನನ್ನು ಮಾಡಲು ಬಿಡುವುದಿಲ್ಲ. ಎಲ್ಲಾ ಅವರೆ ನೋಡಿಕೊಳ್ಳುತ್ತಾರೆ". ಎಂದು ಬಾಯ್ ಫ್ರೆಂಡ್ ಅನ್ನು ಹೊಗಳುತ್ತ "ಆತನ ಹಾಗೆ ಇರುವ ಯಾವ ವ್ಯಕ್ತಿಯನ್ನು ನಾನು ಭೇಟಿ ಮಾಡಿಲ್ಲ" ಎಂದು ಹೇಳಿದ್ದಾರೆ.

  ಪಿಯಾನೋ ಕಲಿಯುತ್ತಿರುವ ಕೃತಿ

  ಪಿಯಾನೋ ಕಲಿಯುತ್ತಿರುವ ಕೃತಿ

  ಸದ್ಯ 21 ದಿನಗಳು ಮನೆಯಲ್ಲಿಯೆ ಇದ್ದು ಕಾಲ ಕಳೆಯಬೇಕಾಗಿರುವುದರಿಂದ ಇಬ್ಬರು ಉತ್ತಮ ಪ್ಲಾನ್ ಮಾಡಿದ್ದಾರೆ. ಪುಲ್ಕಿತ್ ಗಿಟಾರ್ ನುಡಿಸುತ್ತಾರಂತೆ. ಜೊತೆಗೆ ಪುಲ್ಕಿತ್ ಉತ್ತಮ ಪಿಯಾನೋ ವಾದಕಅಂತೆ. ಹಾಗಾಗಿ ಪುಲ್ಕಿತ್ ಯಿಂದ ಕೃತಿ ಪಿಯಾನೋ ಕಲಿಯುತ್ತಾರಂತೆ.

  ಪುಲ್ಕಿತ್ ಗೆ ಆಗಲೆ ಮದುವೆ ಆಗಿದೆ

  ಪುಲ್ಕಿತ್ ಗೆ ಆಗಲೆ ಮದುವೆ ಆಗಿದೆ

  2014ರಲ್ಲಿ ಪುಲ್ಕಿತ್, ಶ್ವೇತಾ ರೋಹಿರಾ ಜೊತೆ ಹಸೆಮಣೆ ಏರಿದ್ದರು. ಆದರೆ ಮದುವೆಯಾಗಿ ಒಂದೇ ವರ್ಷದಲ್ಲಿ ಬೇರೆ ಬೇರೆಯಾಗಿದ್ದಾರೆ. ನಂತರ ನಟಿ ಯಾಮಿ ಗೌತಮಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಆದರೀಗ ಕೃತಿ ಕರಬಂಧ ಜೊತೆ ಪ್ರೀತಿಯಲ್ಲಿದ್ದು ಮದುವೆ ಆಗುವ ಪ್ಲಾನ್ ಮಾಡಿದ್ದಾರೆ.

  English summary
  Googly fame Bollywood Actress kriti Kharbanda talk about her marriage plans with her boyfriend and Pulkit Samrat.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X